ಬಾಗಲಕೋಟೆ -
3 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಗುರುನಾಥ ಹೌದು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ ಗುರುನಾಥ ಮಸಳಿ ₹3 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಸಮೇತ ಹಿಡಿದಿದ್ದಾರೆ.
ಮುಧೋಳ ತಾಲ್ಲೂಕಿನ ಜಾಲಿಬೇರಿ ಗ್ರಾಮದ ಬಸವರಾಜ ಮೆಟಗುಡ್ಡ ಎಂಬುವವರು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ₹3 ಲಕ್ಷ ಸಹಾಯಧನ ಪಡೆದಿದ್ದರು.ಫೈನಾನ್ಸ್‌ನವರಿಗೆ ಹಣ ಬಿಡುಗಡೆ ಮಾಡಿ ಮಂಜೂರು ಪತ್ರ ನೀಡಲು ಗುರುನಾಥ ಲಂಚ ಕೇಳಿದ್ದರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಐ ವಿ.ಎನ್. ಕಡಿ, ಮಲ್ಲಿಕಾರ್ಜುನ ಬಿರಾದಾರ, ಎನ್.ಆರ್. ಖಿಲಾರೆ ದಾಳಿಯಲ್ಲಿ ಇದ್ದರು. ಸಧ್ಯ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ.....