ಬೆಂಗಳೂರು -
ಹಳೆ ಪಿಂಚಣಿ ಯೋಜನೆ ಕುರಿತು ಹಲವು ವರ್ಷ ಗಳಿಂದ ಲಕ್ಷಾಂತರ ನೌಕರರು ಕೇಳ್ತಾ ಇದ್ದಾರ ಈ ಒಂದು ಯೋಜನೆ ಮರು ಜಾರಿಗಾಗಿ ಒತ್ತಾಯಿಸಿ ನೌಕರರು ಧ್ವನಿ ಎತ್ತುತ್ತಿದ್ದು ಇನ್ನೇನು ಈ ಒಂದು ಯೋಜನೆ ಗೆ ಸಧ್ಯ ರಾಜ್ಯ ಸರ್ಕಾರ ಜಾರಿ ಮಾಡಲಿದ್ದು ನೌಕರರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕುತೂಹಲ ಉಂಟಾಗಿದೆ
ಈ ಒಂದು ನಡುವೆ NPS ಮತ್ತು OPS ನಡುವಿನ ವ್ಯತ್ಯಾಸವೇನು ಎಂಬ ಕುರಿತು ಸಾಕಷ್ಟು ಪ್ರಮಾಣದಲ್ಲಿ ಕುತೂಹಲ ಆಸಕ್ತಿ ಎಲ್ಲರಲ್ಲೂ ಇದೆ ಹಳೆ ಪಿಂಚಣಿ ಯೋಜನೆ (OPS) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಎರಡೂ ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ಸಂಬಂಧಿಸಿದ ವ್ಯವಸ್ಥೆಗಳಾಗಿವೆ. ಆದರೆ ಎರಡರ ಸ್ವರೂಪದಲ್ಲಿ ಪ್ರಮುಖ ವ್ಯತ್ಯಾಸವಿದೆ.
OPSನಲ್ಲಿ ಸರ್ಕಾರಿ ನೌಕರರಿಗೆ ನಿವೃತ್ತಿಯ ಬಳಿಕ ನಿಯಮಾನುಸಾರ ಪಿಂಚಣಿ ದೊರೆಯುವ ವ್ಯವಸ್ಥೆ ಇದೆ. ಹೀಗಾಗಿ ನಿವೃತ್ತಿ ಜೀವನದ ಆದಾಯದ ಬಗ್ಗೆ ಹೆಚ್ಚಿನ ಭದ್ರತೆ ಸಿಗುತ್ತದೆ ಎಂಬುದು ನೌಕರರ ಪ್ರಮುಖ ಬೇಡಿಕೆಯಾಗಿದೆ.
ಇನ್ನು NPSನಲ್ಲಿ ನೌಕರರ ಕೊಡುಗೆ ಮತ್ತು ಸರ್ಕಾರದ ಕೊಡುಗೆ ಸೇರಿದಂತೆ ಪಿಂಚಣಿ ನಿಧಿಯನ್ನು ಹೂಡಿಕೆ ಮಾಡುವ ವ್ಯವಸ್ಥೆ ಇದೆ. ನಿವೃತ್ತಿಯ ನಂತರ ದೊರೆ ಯುವ ಮೊತ್ತವು ಈ ವ್ಯವಸ್ಥೆಯಡಿ ರೂಪುಗೊಳ್ಳುತ್ತದೆ. ಹೀಗಾಗಿ NPS ವ್ಯಾಪ್ತಿಯಲ್ಲಿರುವ ಶಿಕ್ಷಕರಿಗೆ OPSಗೆ ಸೇರ್ಪಡೆಗೊಳ್ಳುವ ಅವಕಾಶವು ನಿವೃತ್ತಿ ನಂತರದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು......