LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕಳೆದುಕೊಂಡು ಮೊಬೈಲ್ ನ್ನು ಒಂದು ಗಂಟೆಯಲ್ಲಿ ಹುಡುಕಿಕೊಟ್ಟ HC ಫಕೀರಪ್ಪ ನೇರ್ತಿ - ತರಾತುರಿಯಲ್ಲಿ ಲೊಕೇಶನ್ ತಗೆದುಕೊಂಡು ಒಂದು ಗಂಟೆಯಲ್ಲಿ ಮೊಬೈಲ್ ಹುಡುಕಿಕೊಟ್ಟ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ.....

ಧಾರವಾಡ -

ಕಳೆದುಕೊಂಡು ಮೊಬೈಲ್ ನ್ನು ಒಂದು ಗಂಟೆಯಲ್ಲಿ ಹುಡುಕಿಕೊಟ್ಟ HC ಫಕೀರಪ್ಪ ನೇರ್ತಿ - ತರಾತುರಿಯಲ್ಲಿ ಲೊಕೇಶನ್ ತಗೆದುಕೊಂಡು ಒಂದು ಗಂಟೆಯಲ್ಲಿ ಮೊಬೈಲ್ ಹುಡುಕಿಕೊಟ್ಟ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ......

ಸಾಮಾನ್ಯವಾಗಿ ಹಿಂದೊಮ್ಮೆ ಮೊಬೈಲ್ ಏನಾದರೂ ಕಳೆದುಕೊಂಡರೆ ಮರಳಿ ಸಿಗೊದು ತುಂಬಾ ಕಷ್ಟಕರವಾ ಗಿತ್ತು.ಆದರೆ ಮುಂದುವರೆದ ಇವತ್ತಿನ ತಂತ್ರಜ್ಞಾನದಿಂ ದಾಗಿ ನಾವು ಕಳೆದುಕೊಂಡ ಮೊಬೈಲ್ ನ್ನು ತಕ್ಷಣ ಪಡೆಯಬಹುದು ಎಂಬೊದಕ್ಕೆ ಧಾರವಾಡ ಶಹರ ಠಾಣೆ ಪೊಲೀಸರು ತೋರಿಸಿಕೊಟ್ಟಿದ್ದಾರೆ

ಹೌದು ಪೊಲೀಸ್ ಠಾಣೆಯಲ್ಲಿನ ಚಿತ್ರಣವೇ ಸಾಕ್ಷಿ  ಧಾರವಾಡದ ಮಾರುಕಟ್ಟೆಯಲ್ಲಿ ಕೆ ಬಿ ಕುರಹಟ್ಟಿ ಎಂಬುವರು ಅಂಗಡಿಯೊಂದರಲ್ಲಿ ಎಲಿ ಅಡಕಿ ಯನ್ನು ತಗೆದುಕೊಂಡು ಅಲ್ಲಿಯೇ ಮೊಬೈಲ್ ನ್ನು ಮರೆತು ಹೋಗಿದ್ದರು ಧಾರವಾಡದ ಸಿಬಿಟಿ ಯಲ್ಲಿನ ಅಂಗಡಿ ಯೊಂದರಲ್ಲಿ ಈ ಒಂದು ಮೊಬೈಲ್ ನ್ನು ಬಿಟ್ಟು ಹೋಗಿದ್ದರು ಕೆಲ ಸಮಯದ ನಂತರ ಮೊಬೈಲ್ ನೆನಪಾದಾಗ ಮರಳಿ ಬಂದ ಅಂಗಡಿಯಲ್ಲಿ ಮೊಬೈಲ್ ನ್ನು ಕೇಳಿದ್ದಾರೆ ಇಲ್ಲ ಎಂಬ ಸಂದೇಶ ಬರುತ್ತಿದ್ದಂತೆ ಕೂಡಲೇ ಉಪನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ

ಠಾಣೆಗೆ ಹೋಗುತ್ತಿದ್ದಂತೆ ವಿಷಯವನ್ನು ಸ್ಥಳದಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಫಕೀರಪ್ಪ ನೆರ್ತಿ ಕೂಡಲೇ ಠಾಣೆಯ ಮೇಲಾಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದು ಪಿಎಸ್ಐ ಕುಮಾರಿ ಸ್ವಾತಿ ಮುರಾರಿ ಅವರಿಗೆ ಕಳೆದುಕೊಂಡ ಮೊಬೈಲ್ ಲೊಕೇಶನ್ ಕೇಳಿದ್ದಾರೆ ಅತ್ತ ಲೊಕೇಶನ್ ಬರುತ್ತಿದ್ದಂತೆ ಇತ್ತ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ತರಾತುರಿಯಲ್ಲಿ ಗಲ್ಲಿ ಗಲ್ಲಿಯಲ್ಲಿ ಹುಡುಕಾಡಿ ಮೊಬೈಲ್ ಪತ್ತೆ ಹಚ್ಚಿದ್ದಾರೆ.

ಲೊಕೇಷನ ಹಾಕಿಸಿಕೊಂಡು ಕಳೆದುಕೊಂಡ ಮೊಬೈಲ್ ನ್ನು ಹುಡುಕಾಡಲು ನೆರ್ತಿ ಅವರೊಂದಿಗೆ ಕುರಹಟ್ಟಿ ಅವರು ಕೂಡಾ ಬೆನ್ನತ್ತಿದ್ದು ಇಪ್ಪತ್ತು ನಿಮಿಷಗಳಲ್ಲಿ ಸೈದಾಪೂರದಲ್ಲಿ ಮೊಬೈಲ್ ಹಿಡಿದುಕೊಂಡು ಮನೆ ಯಲ್ಲಿ ಕುಳಿತುಕೊಂಡಿದ್ದವನನ್ನು ಹುಡುಕಿ ಕರೆದು ಕೊಂಡು ಬಂದಿದ್ದಾರೆ.

ಇನ್ನೂ ಕಳೆದುಕೊಂಡ ಮೊಬೈಲ್ ನ್ನು ಹುಡುಕಿಕೊಟ್ಟು ಕಳ್ಳನನ್ನು ಹೆಡೆಮುರಿ ಕಟ್ಟಿದ ಪೊಲೀಸ್ ಸಿಬ್ಬಂದಿ ಫಕೀರಪ್ಪ ನೆರ್ತಿ ಅವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...