LIVE TV LocalCrimeNationalInternationalPoliticsEducationTechnologyEntertainmentSportsFeature
Crime News

ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕರ್ ವಸಂತ - 10 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್

ಚಿಕ್ಕಮಗಳೂರು -

ಲಂಚವನ್ನು ತಗೆದುಕೊಳ್ಳುವಾಗ ಎನ್‌.ಆರ್‌ ಪುರ ಸಿಪಿಐ ವಸಂತ ಲೋಕಾಯಕ್ತ ಬಲೆಗೆ ಬಿದ್ದಿದ್ದಾರೆ ಹೌದು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಇವರು ಲಾರಿಯಲ್ಲಿ ಸಾಗಣೆ ಮಿತಿಗಿಂತ ಹೆಚ್ಚು ಸಿಮೆಂಟ್‌ ಒಯ್ಯುವುದಕ್ಕೆ ಅನುಮತಿ ನೀಡಲು ₹ 10 ಸಾವಿರ ಲಂಚ ಪಡೆಯುವಾಗ ಎನ್‌.ಎರ್‌.ಪುರ ಪೊಲೀಸ್ ಇನ್ಸ್ಪೆಕ್ಟರ್ ವಸಂತ ಶಂಕರ್‌ ಭಾಗವತ್‌ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸರು ಬೆಳಿಗ್ಗೆ ಕಾರ್ಯಾ ಚರಣೆ ನಡೆಸಿ ಆರೋಪಿ ಮತ್ತು ಲಂಚದ ಹಣ ವನ್ನು ವಶಕ್ಕೆ ಪಡೆದಿದ್ದಾರೆ.ಸಿಪಿಐ ವಸಂತ ಶಂಕರ್‌ ಭಾಗವತ್‌ ಅವರು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಎನ್‌.ಆರ್‌. ಪುರದ ಬಸ್ತಿಮಠದ ಸಿಮೆಂಟ್‌ ಮತ್ತು ಟೈಲ್ಸ್‌ ವ್ಯಾಪಾರಿ ಎಸ್‌.ಕೆ.ಮಸ್ತಾನ್‌ ವಲಿ ಅವರು ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

 

 

ಇನ್ಸ್ಪೆಕ್ಟರ್ ವಸಂತ ಅವರು ಈಚೆಗೆ ಸಿಮೆಂಟ್‌ ಲಾರಿ ತಡೆದಿದ್ದರು ಲಾರಿಯಲ್ಲಿ ಮಿತಿಗಿಂತ ಹೆಚ್ಚು ಲೋಡ್‌ ಇದೆ ಎಂದು ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು ಹೀಗಾಗಿ ಲೋಕಾಯುಕ್ತ ಬಲೆಗೆ ಹಣದ ಸಮೇತ ವಾಗಿ ಬಿದ್ದಿದ್ದಾರೆ ಇನ್ಸ್ಪೆಕರ್ ವಸಂತ 10 ಸಾವಿರ ರೂಪಾಯಿ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್ ಮಾಡಲಾಗಿದೆ.

ಚಕ್ರವರ್ತಿ ಜೊತೆ ಮಂಜುನಾಥ ಸುದ್ದಿ ಸಂತೆ ನ್ಯೂಸ್

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......