ಬೆಂಗಳೂರು -
ಆತ್ಮೀಯ ಶಿಕ್ಷಕ ಬಂಧುಗಳೇ ಈಗಾಗಲೇ KAAMS ನಲ್ಲಿ ಹಾಜರಾತಿ ಕಡ್ಡಾಯವಾಗಿದ್ದು ಕೆಲವರು ತಾಂತ್ರಿಕ ದೋಷದಿಂದ OOD ಹಾಕುತ್ತಿರುವುದು ಸರಿಯಷ್ಟೇ ಆದರೆ OOD ಯನ್ನು ಕಡ್ಡಾಯವಾಗಿ ಶಾಲಾ ವ್ಯಾಪ್ತಿ ಯಲ್ಲೇ ಹಾಕಬೇಕು ಆದರೆ ಕೆಲವರು ತಮಗೆ ಅನುಕೂಲಕರವಾದ ಸ್ಥಳದಲ್ಲಿ ಹಾಕುತ್ತಿದ್ದು ನೀವು ಎಲ್ಲಿ ,ಯಾವ ಸಮಯದಲ್ಲಿ OOD ಹಾಕುತ್ತೀರಿ ಆ ಪ್ರದೇಶದಲ್ಲೇ ನಿಮ್ಮ ಹಾಜರಾತಿ ( location) ದಾಖಲಾಗುತ್ತಿದ್ದು
ಅಧಿಕಾರಿಗಳು ಅದನ್ನು ಪರಿಶೀಲಿಸುವುದರಿಂದ ತಾವೆಲ್ಲರೂ ಕಡ್ಡಾಯವಾಗಿ ಬೆಳಿಗ್ಗೆ 9.45ಕ್ಕೆ ಹಾಗೂ ಸಂಜೆ 4.30ಕ್ಕೆ ಶಾಲೆಯಲ್ಲೇ ಹಾಜರಾತಿಯನ್ನು ನೀಡುವುದು ನಿರಂತರವನ್ನುಕೂಡ ಕಡ್ಡಾಯವಾಗಿ ಹಾಕುವುದು ಸಮಸ್ಯೆಗಳಿದ್ದರೆ BRC ಕಛೇರಿಗೆ ತಿಳಿಸುವುದು ಈಗಾಗಲೇ ನಿರಂತರದಲ್ಲಿ 0 % ದಾಖಲೆಯಾಗಿರುವ ಶಾಲೆಗಳಿಗೆ ಕಾರಣ ಕೇಳಿ ನೋಟೀಸ್ ಗಳನ್ನು ಕೊಡುವುದರಿಂದ ನಿರಂತರ ಮಕ್ಕಳ ಹಾಜರಾತಿಯನ್ನು ಸಹ ಕಡ್ಡಾಯವಾಗಿ ಹಾಕುವುದು.
ಪ್ರತಿ ಶಿಕ್ಷಕರ ಮಾಹಿತಿಯನ್ನು ಗಮನಿಸುತ್ತಿದ್ದು ಪ್ರತ್ಯೇಕ ವಾದ ನೋಟೀಸ್ ನೀಡಿ ಸಂಬಳ ತಡೆ ಹಿಡಿಯಲು ಆಲೋಚಿಸುತ್ತಿದ್ದು ಅಧಿಕಾರಿಗಳ ಜೊತೆಗೆ ಚರ್ಚಿ ಸಿದ್ದು ಇನ್ನೂ ಮುಂದೆ ಶಿಕ್ಷಕರು ಈ ರೀತಿ ಮಾಡದಂತೆ ಅವರಿಗೆ ತಿಳಿಸಲಾಗುವುದು ನಂತರವೂ ಶಿಕ್ಷಕರ ಬದಲಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಬಹು ದೆಂಬ ಮನವಿಗೆ ಸ್ಪಂದಿಸಿದ್ದು , ಶಿಕ್ಷಕರು ಇಲಾಖೆ ಜೊತೆಗೆ ಸಹಕರಿಸಬೇಕೆಂದು ಕೋರುತ್ತೇವೆ.
ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ/ಪದಾಧಿಕಾರಿಗಳು/ನಿರ್ದೇಶಕರು
,KSPSTA ,ನಂಜನಗೂಡು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....