LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕನ ಮೇಲೆ ದಾಖಲಾಯಿತು ಪೋಕ್ಸೋ ಕೇಸ್.....ಪೊಲೀಸರು ಹುಡುಕಾಟ.....

ಕೊಪ್ಪಳ -

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಯಲ್ಲಿ ಶಿಕ್ಷಕರೊಬ್ಬರ ಮೇಲೆ ಪೋಕ್ಸೋ ಕೇಸ್ ದಾಖಲಾಡ ಘಟನೆ ಕೊಪ್ಪಳ ದಲ್ಲಿ ನಡೆದಿದೆ ದೂರು ನೀಡುತ್ತಿದ್ದಂತೆ ಇತ್ತ ಪೋಕ್ಸೋ ಕೇಸ್ ದಾಖಲಾಗಿದೆ ಅತ್ತ ಶಿಕ್ಷಕ ಎಸ್ಕೇಪ್ ಆಗಿದ್ದಾರೆ.

ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಅಂದನಗೌಡ ಎಂಬಾತನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ದೂರು ದಾಖಲಾಗಿದೆ.news_1790582142_0_856.webp

ಪ್ರಕರಣ ಹೊರಬೀಳುತ್ತಿದ್ದಂತೆ ಆರೋಪಿ ಶಿಕ್ಷಕ ಸಧ್ಯ ನಾಪತ್ತೆ ಯಾಗಿದ್ದಾನೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಕೊಪ್ಪಳ ಗ್ರಾಮೀಣ ಭಾಗದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಅಂದನಗೌಡ, ಶಾಲಾ ಕೊಠಡಿಯೊಳಗೆ ಬಾಲಕಿಯರನ್ನು ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸುತ್ತಿದ್ದ. ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು, ಅಸಭ್ಯವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ 

ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಒಬ್ಬನೇ ಆರೋಪಿಯನ್ನು ಬಂಧಿಸಲು 3 ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಧಾನ ಪರಿಷತ್ ಚುನಾವಣಾ ಅಖಾಡಕ್ಕೆ ಶಿಕ್ಷಕ..... ಘೋಷಣೆ ಯಾಯಿತು ಸ್ಪರ್ಧೆ.....ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ KSPSTA ಮಹತ್ವದ ಮಾಹಿತಿ.....ತುಂಬಾ ತುಂಬಾ ಮಹತ್ವದ ಸಂದೇಶ.....ಬೆಳಗಾವಿ Big Mishra ಮಳಿಗೆಗೆ ಅಭೂತಪೂರ್ವ ಸ್ಪಂದನೆ ಗ್ರಾಹಕರ ಭರ್ಜರಿ ರೆಸ್ಪಾನ್ಸ್‌ಗೆ ಖುಷ್ ಮೂಡ್‌ನಲ್ಲಿ ಸಂಜಯ್ ಮಿಶ್ರಾ.....ಶಿಕ್ಷಕನ ಮೇಲೆ ದಾಖಲಾಯಿತು ಪೋಕ್ಸೋ ಕೇಸ್.....ಪೊಲೀಸರು ಹುಡುಕಾಟ.....ಶೀಘ್ರದಲ್ಲೇ ರಾಜ್ಯದಲ್ಲಿ 1000 KPS ಶಾಲೆಗಳು ಆರಂಭ.....ಮಾಹಿತಿ ನೀಡಿದ ಶಿಕ್ಷಣ ಸಚಿವರು.....ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿದ್ಧವಾಯಿತು ಪ್ರತ್ಯೇಕ ಕಾಯ್ದೆ.....ಅಧಿವೇಶನದಲ್ಲಿ ಮಂಡನೆಯಾಗಲಿದೆ ಕಡತ.....ಸರ್ಕಾರಿ ನೌಕರನ ಪತ್ತೆಗಾಗಿ ಐದು ತಂಡ ರಚನೆ.....ಇನ್ನೂ ಸಿಗದ ಸರ್ಕಾರಿ ನೌಕರನ ಸುಳಿವು.....ನಾಪತ್ತೆಯಾದ ಶಿಕ್ಷಕ.....ಕಣ್ಣೀರಿಡುತ್ತಿರುವ ಕುಟುಂಬ..... ಬ್ಯಾಂಕ್ ಮುಷ್ಕರ ಮುಂದೂಡಿಕೆ.....ಎಂದಿನಂತೆ ಬ್ಯಾಂಕ್ ಸೇವೆಗಳು.....ಸರ್ಕಾರಿ ಶಾಲೆಗಳಿಗೆ ಇನ್ನೂ ಬಾರದ ಪಠ್ಯಪುಸ್ತಕ ವಿದ್ಯಾರ್ಥಿ ಗಳ ಪರದಾಟ ಪೋಷಕರ ಆಕ್ರೋಶ.....