ಕಲಬುರಗಿ -
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಂಘದಿಂದ ಸ್ಪರ್ಧಿಸುತ್ತಿದ್ದು ಶಿಕ್ಷಕ ಮತದಾರರು ಪ್ರಥಮ ಆದ್ಯತೆಯ ಮತ ನೀಡಿ ಆಶೀರ್ವದಿಸಬೇಕು' ಎಂದು ಬೀದರ್ ಜಿಲ್ಲೆ ಹುಮನಾಬಾದ್‌ನ ಶಿಕ್ಷಕ ಶಿವಶಂಕರ ಅಣ್ಣಪ್ಪ ತರನಳ್ಳಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, '4 ದಶಕಗಳಿಗೂ ಮೇಲ್ಪಟ್ಟು ಶಿಕ್ಷಣ ಕ್ಷೇತ್ರದಲ್ಲಿ ಅಂದರೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕನಾಗಿ ಹಾಗೂ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಶಿಕ್ಷಣ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತ, ಹಲವು ಹೋರಾಟಗಳನ್ನು ಮುಂದುವರಿ ಸಿದ್ದೇನೆ. ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಸದಸ್ಯ ನಾಗಿ ಸೇವೆ ಸಲ್ಲಿಸಿದ್ದೇನೆ' ಎಂದರು. ಸಂಗಮೇಶ ಜವಾದಿ, ವಿದ್ಯಾವತಿ ಗಾಜರೆ, ಸಿದ್ದಲಿಂಗಯ್ಯ ಚಿಕ್ಕಮಠ ಇದ್ದರು.
ಸುದ್ದಿ ಸಂತೆ ನ್ಯೂಸ್ ಕಲಬುರಗಿ.....