LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಂಗಳೂರು ಚಲೋ ಗೆ ಬೆಂಬಲ ನೀಡಿದ ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘ - ಶಿಕ್ಷಕರ ಹೋರಾಟಕ್ಕೆ ಸಿಗುತ್ತಿದೆ ಮತ್ತಷ್ಟು ಶಕ್ತಿ ಬೆಂಬಲ.....

ಧಾರವಾಡ -

ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘದಿಂದ 12 ರ ಪ್ರೀಡಂ ಪಾರ್ಕ್‌ ಹೋರಾಟಕ್ಕೆ ಬೆಂಬಲ ಹೌದು ಎಲ್ಲಾ ಇಲಾಖೆಗಳ ಎಲ್ಲ ನಿಯಮಗಳಲ್ಲಿ ಸೇವಾನಿರತ ನೌಕರರ ಪರಿಶ್ರಮ,ಅನುಭವ,ಜ್ಞಾನ ಹಾಗೂ ಸೇವಾಹಿರಿತ. ನಕ್ಕೆ ಉತ್ಕೃಷ್ಠ ಗೌರವವನ್ನು ನೀಡಿ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ.

ಆದರೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನಮ್ಮಲ್ಲಿ ಮಾತ್ರ ವಿಚಿತ್ರ ಅಲ್ಲವೇ 1-8 ಕ್ಕೆ ನೇಮಕಗೊಂಡು 25-30 ವರ್ಷಗಳಿಂದ ಬೋಧಿಸುತ್ತಿದ್ದ ಹಾಗೂ B.A/B.Sc/B.Ed/M.A/M.Sc/M.Ed/Ph.D ನಂತಹ ಗರಿಷ್ಠ ವಿದ್ಯಾರ್ಹತೆ ಹೊಂದಿದ್ದರೂ, PST ಎಂಬ ಹಣೆಪಟ್ಟಿ ಕಟ್ಟಿ, ಅನರ್ಹರು ಎಂದು ಅವಮಾನಿಸಿ.

1-5 ಕ್ಕೆ ಹಿಂಬಡ್ತಿ ನೀಡಿ, ನಮ್ಮೆಲ್ಲ ಹಕ್ಕುಗಳನ್ನು ಕಸಿದುಕೊಂಡು ನಮ್ಮ ಮನೋಬಲವನ್ನು ಕುಗ್ಗಿಸಿದ್ದು ಮಾತ್ರ ಇತಿಹಾಸದಲ್ಲಿ ದಾಖಲಾದ ಕರಾಳ ಅಧ್ಯಾಯವಲ್ಲವೇನ್ಯಾಯಯುತವಾಗಿ ದೊರಕಬೇಕಾದ ನಮ್ಮ ಹಕ್ಕುಗಳನ್ನು, ಸೌಲಭ್ಯ ಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾದ್ಯವಿಲ್ಲ

ಅದನ್ನು ಪಡೆದೇ ಪಡೆಯುತ್ತೇವೆ ಎಂಬ ಚಲದೊಂದಿಗೆ ಹೋರಾಟದಲ್ಲಿ ನಾವೆಲ್ಲರೂ ಒಂದಾಗಿ ಹೆಜ್ಜೆ ಇಡೋಣ...ಜಯ ನಿಶ್ಚಿತ ಬನ್ನಿ ಎಲ್ಲರೂ ಎಲ್ಲ ಹಂತದ ಹೋರಾಟದಲ್ಲಿ ಪಾಲ್ಗೊಂಡು ಒಕ್ಕೊರಲಿನಿಂದ ನ್ಯಾಯ ಕೇಳೋಣ ಎನ್ನುತ್ತಾ ಈ ಒಂದು ಹೋರಾಟಕ್ಕೆ ಭಾಷಾ ಅಲ್ಪಸಂಖ್ಯಾತ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘವು ಬೆಂಬಲ ವನ್ನು ಘೋಷಣೆ ಮಾಡಲಾಗಿದೆ.

12 ನೇ ತಾರೀಖಿನ ಹೋರಾಟ ಲಕ್ಷಾಂತರ ಶಿಕ್ಷಕರ ಸ್ವಾಭಿಮಾನದ ಹೋರಾಟ, ನ್ಯಾಯ ಅನ್ಯಾಯ ಗಳ ನಡುವಿನ ಮಹಾ ಸಮರ, ಅದು ಮಾಡು ಇಲ್ಲವೇ ಮಡಿ ಎಂಬ ಹೋರಾಟದಂತಿರಲಿ.. ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಜಗ್ಗದಿರೋಣ  ಈ ಹೋರಾಟ ತೋರಿಕೆಗೆ ಆಗದೆ ನಾಯಕರನ್ನ ನಂಬಿದ 90 ಸಾವಿರ ಪದವೀಧರ pst ಶಿಕ್ಷಕರಿಗೆ ನ್ಯಾಯ ದೊರೆಯುವಂತಾಗಲಿ

2016-17 ಕ್ಕೆ C and R ಬಂದಿದ್ದು ಇಲ್ಲಿವರೆಗೂ ನಾವು ನಿದ್ರೆ ಮಪ್ಪರಿನಲ್ಲಿ ಇದ್ದದ್ದು ನಮ್ಮ ದೌರ್ಬಲ್ಯವೋ,ನಮ್ಮ ಸೌಭಾಗ್ಯವೋ ನಮಗೇನು ತಿಳಿಯದು ಈ ಹೋರಾಟದಿಂದ ನ್ಯಾಯ ಸಿಗುವ ಬಗ್ಗೆ ನಮಗೆ ವಿಶ್ವಾಸ ಇದೆ but ಎಲ್ಲೋ ಸ್ವಲ್ಪ ಅನುಮಾನ ಕಾಡುತ್ತಿದೆ. ಯಾಕೆಂದರೆ 8 ವರ್ಷ ಸುಮ್ಮನೆ ಇದ್ದವರು ನಾವು ಈಗ ಎಚ್ಚೆತ್ತುಕೊಂಡಿದ್ದೇವೆ ಎಂದರೆ.

ಏನೇ ಇರಲಿ ನಾವೆಲ್ಲರೂ 12 ಆಗಸ್ಟ 2024 ಕ್ಕೆ ಬೆಂಗಳೂರ ಹೋರಾಟಕ್ಕೆ ಹೋಗೋಣ. ನ್ಯಾಯ ಕೇಳೋಣ ಮುಂದಿನ ದಿನಗಳಲ್ಲಿ ರಾಜ್ಯ ಜಿಲ್ಲಾ ತಾಲೂಕ ಪ್ರತಿನಿದಿಗಳ ಹೇಗೆ ಹೆಜ್ಜೆ ಹಾಕುತ್ತಾರೋ ಹಾಗೆ ಮುಂದಡಿ ಇಡೋಣ . Be positive

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......