LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಿಕ್ಷಕರ ಅಕಾಲಿಕ ಸಾವಿಗೆ ಕೂಡಲೇ ಪರಿಹಾರ ನೀಡಿ ಒತ್ತಾಯಿಸಿದ ಫುಲೆ ಶಿಕ್ಷಕಿಯರ ಸಂಘ

ಧಾರವಾಡ -

ಕೊವಿಡ್ ಎರಡನೇ ಅಲೆಗೆ ಸಿಕ್ಕಿ ನೂರಾರು ಶಿಕ್ಷಕರು ಸತ್ತಿರುವ ಸುದ್ದಿ ಎಲ್ಲರಲ್ಲೂ ನೋವನ್ನು ತಂದಿದೆ. ಶಿಕ್ಷಕರ ಇಂತಹ ಸಾವುಗಳು ನಿಜಕ್ಕೂ ದುರದೃಷ್ಟಕ ರವೇ ಸರಿ.ಅವರನ್ನೇ ಅವಲಂಬಿಸಿದ್ದ ಅವರ ಕುಟುಂಬಗಳು ಇಂದು ದುಃಖದಲ್ಲಿ ಮರುಗುತ್ತಿವೆ. ಇಂತಹ ದುಸ್ಥಿತಿ ನಿಜಕ್ಕೂ ಯಾರಿಗೂ ಬರಬಾರದಿತ್ತು ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್ ಮುಳ್ಳೂರ ರವರು ತಮ್ಮ ಮನಸಿನ ನೋವ ನ್ನು ಹಂಚಿಕೊಂಡಿದ್ದಾರೆ.

ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಯಾವುದೇ ಶಿಕ್ಷಕರು ಇಂದು ಕೊರೊನಾ ಗೆ ಬಲಿಯಾಗಿರಬಹುದು ಅಂತಹ ಶಿಕ್ಷಕರ ಕುಟುಂ ಬಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.ಉಪಚುನಾವಣೆ ಕರ್ತವ್ಯದ ಮೇಲೆ ಹಾಗೂ ಕೊವಿಡ್ ಕರ್ತವ್ಯದ ಮೇಲೆ ಸಾವನ್ನಪ್ಪಿದ ಶಿಕ್ಷಕರೇ ಹೆಚ್ಚಾಗಿದ್ದು, ಪ್ರತೀ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ದೊರೆ ಯಬೇಕಾದ ಪರಿಹಾರ ಹಣವನ್ನು ಕೂಡಲೇ ಅವರ ಕುಟುಂಬಗಳಿಗೆ ನೀಡಬೇಕೆಂದು ಸರ್ಕಾರ ವನ್ನು ಈ ಮೂಲಕ ಒತ್ತಾಯಿಸುತ್ತೇವೆ.

ಹಾಗೆಯೇ ಕೋವಿಡ್ ‌ಕರ್ತವ್ಯಕ್ಕೆ ‌ನಿಯೋಜಿಸುವ ಶಿಕ್ಷಕರುಗಳಿಗೆ ಸೂಕ್ತವಾದ ರಕ್ಷಣ ಪಿಪಿಇ ಕಿಟ್ ಒದ ಗಿಸಬೇಕು ಪ್ರತೀ ಶಿಕ್ಷಕ ಸಮೂಹವನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು ಪ್ರತಿ ಶಿಕ್ಷಕ ಶಿಕ್ಷಕಿಯರುಗಳಿಗೆ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಮೊದಲ ಸಾಲಿನ ಆದ್ಯತೆ ನೀಡಬೇಕೆಂದು ಘನ ಸರ್ಕಾರವನ್ನು‌ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಒತ್ತಾಯಿಸಿದೆ.

ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನ ಅಧ್ಯಕ್ಷ ರು,ಕಾರ್ಯದರ್ಶಿಗಳು, ಹಾಗೂ ಎಲ್ಲಾ ಪದಾಧಿಕಾರಿ ಗಳ ವತಿಯಿಂದ ಡಾ.ಲತಾ.ಎಸ್.ಮುಳ್ಳೂರ ಸಂಸ್ಥಾ ಪಕ ರಾಜ್ಯಾಧ್ಯಕ್ಷರು ಶ್ರೀಮತಿ ಜ್ಯೋತಿ ಹೆಚ್.
ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು ಒತ್ತಾಯವನ್ನು ಮಾಡಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......