ಉಡುಪಿ
ಒಂದೂವರೆ ವರ್ಷದ ಹಿಂದೆ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ರಕ್ಷಿಸಲ್ಪಟ್ಟಿದ್ದ ಮನೋರೋಗಿ ಶಿಕ್ಷಕಿ ಇದೀಗ ಸಹಜ ಸ್ಥಿತಿಗೆ ಬಂದಿದ್ದಾರೆ ಆದರೂ ರಕ್ತ ಸಂಬಂಧಿಕರು ಸ್ಪಂದಿಸದ ಕಾರಣ ಅವರನ್ನು ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ.ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಸವಿತಾ ಮೊಗವೀರ (45) ಅನುದಾನಿತ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು ಕಾರಣಾಂತರದಿಂದ ಮಾನಸಿಕ ರೋಗಕ್ಕೆ ತುತ್ತಾಗಿ ದ್ದಾರೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ಅವರನ್ನು ರಕ್ಷಿಸಿ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ಸೇವಾಶ್ರಮದಲ್ಲಿ ಆರೈಕೆಗಾಗಿ ದಾಖಲಿಸಲಾಗಿತ್ತು.
ಶಿಕ್ಷಕಿ ಸವಿತಾ ಇದೀಗ ರೋಗದಿಂದ ಗುಣಮುಖ ರಾಗಿದ್ದು ಪುನರ್ವಸತಿ ಕೇಂದ್ರದಿಂದ ಬಿಡುಗಡೆ ಯಾಗಿದ್ದಾರೆ ಪತಿಯೂ ಇದ್ದು ವಿಪರೀತ ಕುಡಿತದ ಚಟ ಹೊಂದಿದ್ದು ಮಕ್ಕಳಿಲ್ಲ. ಹೀಗಾಗಿ ತನ್ನನ್ನು ಮೂಲ ಮನೆ ಇರುವ ಬಾರ್ಕೂರಿಗೆ ಕರೆದೊಯ್ಯುವಂತೆ ಶಿಕ್ಷಕಿ ತಿಳಿಸಿದ್ದು, ಅಲ್ಲಿಗೆ ಅವರನ್ನು ಕರೆದುಕೊಂಡು ಹೋದಾಗ ಮನೆಯಲ್ಲಿದ್ದ ಅವರ ಸಂಬಂಧಿಕರು ಬಾಗಿಲು ತೆರೆಯಲಿಲ್ಲ.
ಬ್ರಹ್ಮಾವರ ಠಾಣೆಯ ಎಸ್ಐಗಳಾದ ಮುಕ್ತಾ, ಅರ್ಷಿತಾ, ಸಖಿ ಸೆಂಟರ್ನ ಸಿಬ್ಬಂದಿ ಹಾಗೂ ಊರಿನವರು ಶಿಕ್ಷಕಿಯ ಸಂಬಂಧಿಕರ ಮನ ವೊಲಿಸಲು ಎಷ್ಟೇ ಪ್ರಯತ್ನಪಟ್ಟರೂ ವಿಫಲರಾದರು. ಒಡಹುಟ್ಟಿದವರೂ ಸಹ ಸ್ಪಂದಿಸದ್ದರಿಂದ ಬೇರೆ ದಾರಿ ಇಲ್ಲದೆ ವಿಶು ಶೆಟ್ಟಿ ಅಂಬಲಪಾಡಿ ಅವರು ಕಾರ್ಕಳದ ಹೊಸ ಬೆಳಕು ಆಶ್ರಮದ ಮುಖ್ಯಸ್ಥೆ ತನುಲಾ ಅವರಲ್ಲಿ ವಿಷಯ ತಿಳಿಸಿ, ಶಿಕ್ಷಕಿಗೆ ಆಶ್ರಯ ನೀಡಿ ದಾಖಲಿಸಿ ದ್ದಾರೆ
ವಿಶು ಶೆಟ್ಟಿ ಅಂಬಲಪಾಡಿಸಮಾಜ ಸೇವಕ.ತನ್ನ ಮನೆ ಸೇರಬೇಕೆಂಬ ಹಂಬಲ ಶಿಕ್ಷಕಿಗೆ ಇದೆ. ಒಡಹುಟ್ಟಿದ ವರಲ್ಲಿ ತನ್ನನ್ನು ಕರೆದುಕೊಂಡು ಹೋಗಿ ಎಂದು ವಿನಂತಿಸುತ್ತಾರೆ. ಶಿಕ್ಷಕಿಯಾಗಿರುವ ಅವರು ಸಹಜ ಸ್ಥಿತಿಗೆ ಬಂದಿದ್ದರೂ ಆಶ್ರಮ ಸೇರುವುದು ಸರಿಯಲ್ಲ. ಮಾನವೀಯತೆಗೆ ಬೆಲೆ ಕೊಡಿ ಎಂದು ಅವರ ಕುಟುಂಬದವರಲ್ಲಿ ವಿನಂತಿಸುತ್ತೇನೆ.
ಸುದ್ದಿ ಸಂತೆ ನ್ಯೂಸ್ ಉಡುಪಿ.....