ಲಕ್ನೋ -
ಖಾಸಗಿ ಶಾಲಾ ಆವರಣದಲ್ಲಿ ಮುಖ್ಯೋಪಾಧ್ಯಾಯ ರೊಬ್ಬರ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಲಕ್ನೋ ದಲ್ಲಿ ನಡೆದಿದೆ ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಕುಂಭಿ ದಾಡಿಯಾ ಗ್ರಾಮ ದಲ್ಲಿ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಖಾಸಗಿ ಶಾಲೆಯ ಪ್ರಾಂಶುಪಾಲೆಯಾಗಿದ್ದ ಪತ್ನಿಯನ್ನು ಕೊಡಲಿ ಮತ್ತು ಗುದ್ದಲಿಯಿಂದ ಹೊಡೆದು ಬರ್ಬರ ವಾಗಿ ಹತ್ಯೆ ಮಾಡಲಾಗಿದೆ. ಈ ಬರ್ಬರ ಘಟನೆಯು ಇವರದ್ದೇ ಮಾಲಕತ್ವದ ಖಾಸಗಿ ಶಾಲೆಯ ಆವರಣ ದಲ್ಲಿ ನಡೆದಿದೆ.
ಮೃತರನ್ನು ಮುಕೇಶ್ ಸಿಂಗ್ (45) ಮತ್ತು ವಿನೀತಾ ಸಿಂಗ್ (43) ಎಂದು ಗುರುತಿಸಲಾಗಿದೆ ದಂಪತಿ ಶಾಲೆಯ ಆವರಣದಲ್ಲೇ ವಾಸಿಸುತ್ತಿದ್ದರು.ಘಟನೆ ರಾತ್ರಿ ನಡೆದಿದೆಯೇ ಅಥವಾ ಬೆಳಿಗ್ಗೆ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಶಾಲೆಯ ಆವರಣ ದಲ್ಲಿರುವ ಕೊಠಡಿಯೊಂದರಲ್ಲಿ ವಿನೀತಾ ಅವರ ಮೇಲೆ ಕೊಡಲಿ ಗುದ್ದಲಿ ಹಾಗೂ ಇತರ ಆಯುಧ ಗಳಿಂದ ದಾಳಿ ನಡೆದಿದೆ ಮುಕೇಶ್ ಅವರ ಮೃತ ದೇಹವು ಸ್ಥಳದಿಂದ ಸುಮಾರು 150 ಮೀಟರ್ ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಕೊಡಲಿ ಹಾಗೂ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕದಿಪುರ ವೃತ್ತದ ಪೊಲೀಸ್ ಅಧಿಕಾರಿ ವಿನಯ್ ಗೌತಮ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮುಖೇಶ್ 2002ರಲ್ಲಿ ಕುಂಬಿ ದಡಿಯಾ ಗ್ರಾಮದಲ್ಲಿ ಖಾಸಗಿ ಶಾಲೆಯನ್ನು ಸ್ಥಾಪಿಸಿದ್ದರು ಮತ್ತು ಪತ್ನಿ ಯೊಂದಿಗೆ ಶಾಲಾ ಆವರಣದಲ್ಲಿ ವಾಸಿಸುತ್ತಿದ್ದರು.
ಸುದ್ದಿ ಸಂತೆ ನ್ಯೂಸ್ ಲಕ್ನೋ.....