LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರಿಗೆ ಶಾಕ್ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....

ಪಾಟ್ನಾ -

ಸಾರ್ವಜನಿಕರ ದೂರುಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಮೇಲೆ ಬಿಹಾರ ಸರ್ಕಾರ 15 ಸರ್ಕಾರಿ ನೌಕರರನ್ನು ಅಮಾನತುಗೊಳಿಸಿದೆ.ವೃತ್ತ ಅಧಿಕಾರಿ ಗಳು, ಬೂತ್ ಮಟ್ಟದ ಅಧಿಕಾರಿಗಳು, ಎಂಜಿನಿಯರ್‌ ಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಈ ಕ್ರಮಕ್ಕೆ ಒಳಗಾಗಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳನ್ನು ಸಮಯಕ್ಕೆ ಸರಿ ಯಾಗಿ ಪರಿಹರಿಸದಿರುವುದು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಅಮಾನತಿಗೆ ಕಾರಣ ಎಂದು ಸರ್ಕಾರ ತಿಳಿಸಿದೆ.ಪಾಟ್ನಾದ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ 'ಸಹಯೋಗ' ಸಾರ್ವಜನಿಕ ಕುಂದುಕೊರತೆ ಪರಿಹಾರ ಕಾರ್ಯಕ್ರಮದಲ್ಲಿ ಈ ಲೋಪಗಳು ಬೆಳಕಿಗೆ ಬಂದಿವೆ.

ಜನರು ಸಲ್ಲಿಸಿದ ದೂರುಗಳನ್ನು ಪರಿಶೀಲಿಸಿದಾಗ, ಕೆಲವು ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಕಂದಾಯ ಮತ್ತು ಭೂ ಸುಧಾರಣೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ವಸತಿ ಹಾಗೂ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗಳ ಸಿಬ್ಬಂದಿ ಅಮಾನತುಗೊಂಡವರಲ್ಲಿ ನಿಲುವಾಗಿದೆ ಎಂದಿದ್ದಾರೆ

ಸಾರ್ವಜನಿಕರ ದೂರುಗಳನ್ನು ಹಗುರವಾಗಿ ಪರಿಗಣಿಸಬಾರದು ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕನ ಸಮಸ್ಯೆಯನ್ನು ಪಾರದರ್ಶಕವಾಗಿ ಮತ್ತು ನಿಗದಿತ ಸಮಯದೊಳಗೆ ಪರಿಹರಿಸಬೇಕು. ಜನರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಹಾಗೂ ಅನಗತ್ಯ ವಿಳಂಬ ಮಾಡಬಾರದು ಎಂದು ಸೂಚಿಸಿದ್ದಾರೆ.

ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬರಬಾರದು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ

ಸುದ್ದಿ ಸಂತೆ ನ್ಯೂಸ್ ಪಾಟ್ನಾ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರೀಕ್ಷಾ ಅಕ್ರಮ ನಾಲ್ವರಿಗೆ ನೊಟೀಸ್‌..... ಮುಖ್ಯೋಪಾಧ್ಯಾಯ ಸೇರಿದಂತೆ ನಾಲ್ವರಿಗೆ ನೊಟೀಸ್‌..... ‌‌ಸರ್ಕಾರಿ ನೌಕರರಿಗೆ ಶಾಕ್ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....BEO ಅಧಿಕಾರಿಗಳ ವರ್ಗಾವಣೆ ಐವರು ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಅಧಿಕಾರಿಗಳ ವರ್ಗಾವಣೆ.....ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕಿಯರು.....BEO ಕಚೇರಿ ಪಕ್ಕದಲ್ಲೇ ಇದೆ ಸರ್ಕಾರಿ ಶಾಲೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್.....ಬೆಳಕಿನ ಹಬ್ಬ ದೀಪಾವಳಿಯನ್ನು ಸಿಹಿ ಗೊಳಿಸಲು ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಿಗ್ ಮಿಶ್ರಾ.....ನಾಡಿನ ಜನತೆಗೆ Big Mishra ಪರವಾಗಿ ದೀಪಾವಳಿ ಪಾಡ್ಯ ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....