ಶ್ರೀರಂಗಪಟ್ಟಣ -
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪಕ್ಕದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದ ಒಬ್ಬಳೇ ವಿದ್ಯಾರ್ಥಿನಿ ಇದ್ದು, ಇಬ್ಬರು ಶಿಕ್ಷಕಿಯರು ಕೆಲಸ ಮಾಡುತ್ತಿದ್ದಾರೆ. ಶಾಲೆ ಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಶಮ್ಸೀನಾ ಇದ್ದು, ಮುಖ್ಯ ಶಿಕ್ಷಕಿ ಬಿ.ಕೆ.ನೂರ್ ಫಾತಿಮಾ ಹಾಗೂ ಸಹ ಶಿಕ್ಷಕಿ ಲಕ್ಷ್ಮಿ ಕೆಲಸ ಮಾಡುತ್ತಿದ್ದಾರೆ.ಒಬ್ಬರು ಅಡುಗೆ ಯರೂ ಇದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಶಾಲೆಗೆ ಹೊಸದಾಗಿ ಒಬ್ಬ ವಿದ್ಯಾರ್ಥಿಯೂ ದಾಖ ಲಾಗಿಲ್ಲ. ವಿದ್ಯಾರ್ಥಿನಿ ಶಮ್ಸೀನಾ ಬಾರದಿದ್ದರೆ ಶಾಲೆ ಭಣಗುಡುತ್ತದೆ.
ಶಾಲೆಯಲ್ಲಿ 2023-24ನೇ ಸಾಲಿನಲ್ಲಿ 13, 2024-25ನೇ ಸಾಲಿನಲ್ಲಿ 9, 2025-26ನೇ ಸಾಲಿನಲ್ಲಿ 5 ವಿದ್ಯಾರ್ಥಿಗಳಿದ್ದರು. ಇಬ್ಬರು 7ನೇ ತರಗತಿ ಉತ್ತೀರ್ಣ ರಾಗಿ ಪ್ರೌಢಶಾಲೆ ಸೇರಿದರೆ, ಮತ್ತಿಬ್ಬರು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದ್ದಾರೆ. ಸದ್ಯ ಒಬ್ಬ ವಿದ್ಯಾರ್ಥಿನಿ ಮಾತ್ರ ಉಳಿದಿದ್ದಾರೆ. ಒಬ್ಬ ಅಂಗವಿಕಲ (ಗೃಹಾಧಾರಿತ) ವಿದ್ಯಾರ್ಥಿಯ ಹೆಸರು ದಾಖಲೆಯಲ್ಲಿ ಇದ್ದು, ಆತನ ಮನೆಗೆ ಆಹಾರ ಪೂರೈಸಲಾಗುತ್ತಿದೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಬಿ.ಕೆ. ನೂರ್ ಫಾತಿಮಾ ಹೇಳುತ್ತಾರೆ.
ತಾಲ್ಲೂಕಿನಲ್ಲಿರುವ 9 ಉರ್ದು ಶಾಲೆಗಳ ಪೈಕಿ ಶ್ರೀರಂಗಪಟ್ಟಣ ಮತ್ತು ಅರಕೆರೆ ಉರ್ದು ಶಾಲೆಗಳಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ಮುಚ್ಚುವಂತಿಲ್ಲ ಎಂಬ ಸರ್ಕಾರದ ಸುತ್ತೋಲೆ ಇರುವುದರಿಂದ ಈ ಶಾಲೆ ಗಳನ್ನು ನಡೆಸಲಾಗುತ್ತಿದೆ. ಪಟ್ಟಣದ ಉರ್ದು ಮಾಧ್ಯಮ ಶಾಲೆ ವಿದ್ಯಾರ್ಥಿನಿಗೆ ಉರ್ದು ಕಲಿಸಲು ಒಬ್ಬರು, ಕನ್ನಡ ಇತರ ವಿಷಯ ಕಲಿಸಲು ಮತ್ತೊಬ್ಬರು ಶಿಕ್ಷಕಿಯರು ಇದ್ದಾರೆ. ಈ ಪೈಕಿ ಒಬ್ಬರನ್ನು ವಾರದಲ್ಲಿ ಮೂರು ದಿನ ಬೇರೆ ಶಾಲೆಗೆ ನಿಯೋಜನೆ ಮಾಡ ಲಾಗುತ್ತಿದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಚಂದ್ರಶೇಖರ್ ತಿಳಿಸಿದರು.
ಒಬ್ಬ ವಿದ್ಯಾರ್ಥಿನಿಯ ಶಿಕ್ಷಣಕ್ಕಾಗಿ ಸರ್ಕಾರ ವರ್ಷಕ್ಕೆ ₹18ರಿಂದ ₹19 ಲಕ್ಷ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಜನ ಸಾಮಾನ್ಯರ ತೆರಿಗೆ ಹಣ ವನ್ನು ಅವೈಜ್ಞಾನಿಕವಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು' ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಶ್ರೀರಂಗಪಟ್ಟಣ.....