LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕಿ ಅಮಾನತು ಅಕ್ಷರ ದಾಸೋಹ ಹಣ ದುರುಪಯೋಗ DDPI ಅವರಿಂದ ಅಮಾನತು.....

ಹುಣಸೂರು -

ಅಕ್ಷರ ದಾಸೋಹ ಹಣವನ್ನು ದುರುಪಯೋಗ ಮಾಡಿ ಕೊಂಡ ಹಿನ್ನಲೆ ಯಲ್ಲಿ ಮುಖ್ಯ ಶಿಕ್ಷಕಿ ಯೊಬ್ಬರನ್ನು ಅಮಾನತು ಮಾಡಲಾಗಿದೆ ಹೌದು ಮೈಸೂರು ತಾಲೂಕಿನ ಹನಗೋಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕಿ ಎಸ್.ಅಂಜಲಿ ಮಾರೀಸ್‌ ರನ್ನು ಅಕ್ಷರ ದಾಸೋಹ ಯೋಜನೆಯ 4.42ಲಕ್ಷರೂ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅಮಾನತುಗೊಳಿಸಿ ಆದೇಶ ಹೊರಡಿಸಿ ದ್ದಾರೆ.

ಎಸ್.ಅಂಜಲಿ ಮಾರಿಸ್‌ರವರು ಈ ಹಿಂದೆ ಹನಗೋಡು ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ಮಕ್ಕಳ ಅಕ್ಷರ ದಾಸೋಹ-ಬಿಸಿಯೂಟ ಯೋಜನೆಯಡಿ ಹಂತ ಹಂತವಾಗಿ 4,42,483 ರೂಗಳು ದುರುಪಯೋಗಪಡಿಸಿ ಕೊಂಡಿರುವುದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದ್ದು ಅವರ ವರದಿ ಆದಾರದ ಮೇಲೆ ಶಿಕ್ಷಣ ಇಲಾಖೆ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಶಿಕ್ಷಕಿ ಅಂಜಲಿ ಮಾರಿಸ್‌ರವರು ದುರುಪಯೋಗಪಡಿಸಿ ಕೊಂಡಿರುವ ಹಣವನ್ನು ಶಾಲೆಯ ಅಕ್ಷರ ದಾಸೋಹ ಖಾತೆಗೆ ಹಣವನ್ನು ಜಮೆ ಮಾಡಲು ಒಪ್ಪಿ ತಪ್ಪೊಪ್ಪಿಗೆ ಪತ್ರವನ್ನು ಸಲ್ಲಿಸಿರುವ ಪರಿಣಾಮ ನಿಮ್ಮ ಮೇಲಿನ ಆರೋಪ ಸಾಬೀತಾಗಿರುತ್ತದೆ ಇದರಿಂದಾಗಿ ನೀವು ಪ್ರಭಾರ ವಹಿಸಿಕೊಂಡಿದ್ದ ಅವಧಿಯ ಶಾಲೆಯಲ್ಲಿನ ಅವ್ಯ ವಹಾರಗಳ ಬಗ್ಗೆ ವಿಚಾರಣೆ ನಡೆಸಲು ತೀರ್ಮಾನಿಸಿ,ಶಿಸ್ತು ಕ್ರಮವಹಿಸಲು ತೀರ್ಮಾನಿಸಿದೆ.

ನಿಮ್ಮ ವರ್ತನೆಯಿಂದಾಗಿ ಸಾರ್ವಜನಿಕರು ಇಲಾಖೆಯನ್ನು ಹಾಗೂ ಶಿಕ್ಷಕರನ್ನು ಅನುಮಾನದಿಂದ ನೋಡುವಂತಾ ಗಿದ್ದು ಬಿಸಿಯೂಟದ ಹಣ ದುರುಪಯೋಗವನ್ನು ಗಂಭೀ ರವಾಗಿ ಪರಿಗಣಿಸಿ,ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......