LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಸಂಸದನಾಗಿದ್ದ ಆ ನಟ ಐದು ವರ್ಷಗಳ ಕಾಲ ಸಂಸತ್ ನಲ್ಲಿ ಬಾಯಿ ತೆರಿಯಲೇ ಇಲ್ಲ....ಕೇಂದ್ರ ಸಚಿವರು ಹೀಗೆ ಅಂದಿದ್ದು ಯಾರಿಗೆ

ಧಾರವಾಡ -

ಸಂಸದನಾಗಿದ್ದ ಆ ನಟ ಸಂಸತ್ ನಲ್ಲಿ ಐದು ವರ್ಷ ಮಾತನಾಡಿರಲೇ ಇಲ್ಲ ಹೀಗೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.ಆ ಸಂಸದ ಯಾರು ಎಂಬ ಬಗ್ಗೆ ಅವರು ಹೆಸರು ಹೇಳದೆ ಇದ್ದರೂ, ಪ್ರಲ್ಹಾದ ಜೋಶಿ ಹಾಗೂ ಮಂಡ್ಯ ರಮೇಶ್ ಅವರ ಈ ಮಾತುಗಳು ಅವರು ಯಾರು ಎಂಬ ಸುಳಿವನ್ನು ನೀಡುವಂತಿವೆ.

ಧಾರವಾಡದಲ್ಲಿ ಆಯೋಜಿಸಲಾಗಿದ್ದ ರಂಗಾಯಣದ ರಂಗ ನವಮಿ ನಾಟಕೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ಪ್ರಲ್ಹಾದ ಜೋಶಿ ಈ ರೀತಿಯಾಗಿ ಮಾತನಾಡಿ, ಸಭೆಯಲ್ಲಿ ಒಂದು ರೀತಿಯ ಸಂಚಲನ ಸೃಷ್ಟಿಸಿದರು.

ಮಾತಿನ ಮಧ್ಯೆ ಖ್ಯಾತ ನಟರೊಬ್ಬರನ್ನು ಉಲ್ಲೇಖಿಸಿ ಮಾತನಾಡಿದ ಅವರು ಅಲ್ಲಿ ನೆರೆದಿದ್ದವರ ತಲೆಗೆ ಒಂದಷ್ಟು ಕಾಲ ಹುಳಬಿಟ್ಟರು.

ಈ ಹಿಂದೆ ನಮ್ಮಲ್ಲಿ ಒಬ್ಬರು ಖ್ಯಾತ ಚಲನಚಿತ್ರ ನಟರು ಎಂಪಿ ಆಗಿದ್ದರು, ಆದರೆ ಅವರು ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಬಾಯಿ ತೆರೆಯಲೇ ಇಲ್ಲ.ಸಿನಿಮಾದಲ್ಲಿ ಡೈಲಾಗ್ ಹೊಡಿತೀರಾ? ಇಲ್ಲೇನಾಗಿದೆ? ಅಂತ ನಾನೊಮ್ಮೆ ಕೇಳಿದ್ದಕ್ಕೆ ಅವರು, ನಮಗೆ ಏನಾದರೂ ಹೇಳಬೇಕಾದರೆ ಹಿಂದೆ ಡೈರೆಕ್ಟರ್ ಹೇಳಬೇಕಲ್ಲ ಎಂದಿದ್ದರು.

https://youtu.be/jJA8KSsatnw

ಆ ನಟ ಯಾರು ಎಂದು ನಾನು ಹೆಸರು ಹೇಳುವುದಿಲ್ಲ ಎಂದು ಜೋಶಿ ಹೇಳುತ್ತಿದ್ದಂತೆ, ಅಲ್ಲಿದ್ದ ಮಂಡ್ಯ ರಮೇಶ್ ಅವರು ನಮ್ಮೂರವರೇ ಬಿಡಿ ಎಂದರು. ಮುಂದುವರಿದ ರಮೇಶ್, ಅವರು ನಮ್ಮೂರವರೇ, ಆದರೆ ಅವರು ಈಗ ಇಲ್ಲ ಎಂದರು.

ತದನಂತರ ಮಾತು ಮುಂದುವರಿಸಿದ ಪ್ರಲ್ಹಾದ ಜೋಶಿ, ಬಹಳ ಜನ ನಟರು ಎಂಪಿಗಳಾಗಿ ಹೋಗಿದ್ದಾರೆ ಬಿಡಿ. ಈಗಲೂ ಕೆಲವರು ಇದ್ದಾರೆ. ಆದರೂ ನಾನು ಹೆಸರು ಹೇಳುವುದಿಲ್ಲ ಎಂದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......