LIVE TV LocalCrimeNationalInternationalPoliticsEducationTechnologyEntertainmentSportsFeature
International News

ಶಿಕ್ಷಕಿ ಯ ಟಾರ್ಚರ್ ಗೆ ಬೇಸತ್ತು ಆತ್ಮಹತ್ಯೆ - ಪ್ರಭುದಾಸ್ ಸಾವು ಶಿಕ್ಷಕಿ ಪೊಲೀಸರ ವಶಕ್ಕೆ.....

ಮುಂಬೈ -

ಕೆಲವೊಮ್ಮೆ ಅಕ್ರಮ ಸಂಬಂಧದಿಂದಾಗಿ ಅನೇಕ ಕುಟುಂಬಗಳೇ ಮುರಿದುಬೀಳುತ್ತವೆ. ಆದರೂ ಕೆಲ ವರು ಅಂತಹ ತಪ್ಪಿಗೆ ಕೈ ಹಾಕುವುದನ್ನು ನಿಲ್ಲಿಸುವು ದಿಲ್ಲ.ಹೀಗೆ ವ್ಯಕ್ತಿಯೊಬ್ಬ ಶಿಕ್ಷಕಿಯೊಬ್ಬಳ ಜತೆ ಅಕ್ರ ಮ ಸಂಬಂಧ ಹೊಂದಿ ನಂತರ ಆಕೆಯ ಟಾರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಖಮ್‌ಗಾಂವ್ ತಾಲೂಕಿನ ಪಹು ರ್ಜಿರಾ ನಿವಾಸಿ ಪ್ರಭುದಾಸ್ ಬೋಲೆಗೆ ಮದುವೆ ಯಾಗಿತ್ತು.ಆದರೆ ಹೆಂಡತಿಯೊಂದಿಗಿನ ಸಂಬಂಧ ಸಾಕಾಗದ ಆತ ವಿಧವೆ ಶಿಕ್ಷಕರಿಯೊಬ್ಬರ ಅಕ್ರಮ ಸಂಬಂಧದ ಬಲೆಗೆ ಬಿದ್ದಿದ್ದಾನೆ. ಮೊದ ಮೊದಲು ಸ್ನೇಹದ ರೂಪದಲ್ಲಿ ಆರಂಭವಾದ ಅವರ ಸಂಬಂಧ ಕೊನೆಗೆ ಸಾಕಷ್ಟು ಆಳವಾಗಿ ಬೇರೂರಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ

ಇಷ್ಟೇಲ್ಲ ಬೆಳವಣಿಗೆಯ ನಡುವೆ ಅತ್ತ ಶಿಕ್ಷಕಿ ತನ್ನ ಕೆಲಸ ಕಳೆದುಕೊಂಡಿದ್ದಾಳೆ. ಹಣಕ್ಕೆ ಸಾಕಷ್ಟು ತೊಂದರೆಯಾಗಿದೆ.ಆಗ ಉಪಾಯ ಮಾಡಿದ ಆಕೆ ಪ್ರಭುದಾಸ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ನಾನು ಮನೆ ತೆಗೆದುಕೊಳ್ಳಬೇಕು ನನಗೆ ಹಣ ಕೊಡು ಎಂದು ಕೇಳಿದ್ದಾಳೆ.ಆದರೆ ತನ್ನ ಬಳಿ ಹಣವಿಲ್ಲವೆಂ ದು ಆತ ಹೇಳಿದಾಗ ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾಳೆ

ಶಿಕ್ಷಕಿಯ ಬೆದರಿಕೆಗೆ ಹೆದರಿದ ಪ್ರಭುದಾಸ್ ಆಕೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಇತ್ತ ಮೃತರಾದ ಆತನ ಹೆಂಡತಿ ನನ್ನ ಗಂಡನ ಸಾವಿಗೆ ಶಿಕ್ಷಕಿಯೇ ಕಾರಣವೆಂದು ಪೊಲೀಸರಲ್ಲಿ ದೂರು ನೀಡಿದ್ದಾಳೆ. ಶಿಕ್ಷಕಿಗೆ ಅನೇಕರು ಸಾಥ್ ಕೊಟ್ಟಿದ್ದಾಗಿ ಯೂ ಹೇಳಲಾಗಿದೆ.ಇದೀಗ ಪೊಲೀಸರು ಆರೋಪಿ ತ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದು ಮುಂದಿನ ಕ್ರಮ ವನ್ನು ಕೈಗೊಂಡಿದ್ದಾರೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...