LIVE TV LocalCrimeNationalInternationalPoliticsEducationTechnologyEntertainmentSportsFeature
State News

OPS ಜಾರಿಗೆ ತರುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರದ ಭರವಸೆ ಏನಾಯಿತು - ಗ್ಯಾರಂಟಿ ಗದ್ದಲದಲ್ಲಿ ನೌಕರರಿಗೆ ಕೊಟ್ಟ ಭರವಸೆ ಮರಿಯಬೇಡಿ CM,DCM ಸಾಹೇಬ್ರೆ.....

ಬೆಂಗಳೂರು -

ಚುನಾವಣೆಯ ಮುನ್ನ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಗಳನ್ನು ಜಾರಿ ಮಾಡಿ ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ ಎಂದು ಪದೇ ಪದೇ ಹೇಳುತ್ತಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯವರೇ ನೀವು ಕೊಟ್ಟ ಇನ್ನೊಂದು ಭರವಸೆಯನ್ನು ಜಾರಿ ಮಾಡಿಲ್ಲ ನೀವು ಮರೆತಂತೆ ಕಾಣುತ್ತದೆ

ಹೌದು ನ್ಯಾಷನಲ್ ಪೆನ್ಷನ್ ಸಿಸ್ಟಂ ಬದಲು ಹಿಂದಿನ ಓಲ್ಡ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತರುವುದಾಗಿ ಹೇಳಿದ್ದ ಕರ್ನಾಟಕ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರಿ ನೌಕರರ ಒತ್ತಾಯದ ಮೇರೆಗೆ ಓಲ್ಡ್ ಪೆನ್ಷನ್ ಸ್ಕೀಮ್ ಜಾರಿಗೆ ತರಲು ಐವರು ಸದಸ್ಯರ ಸಮಿತಿ ರಚಿಸಿತ್ತು.

ಅದಿನ್ನೂ ಮುಂದುವರಿದಿಲ್ಲ ಇನ್ನು ಈ ಬಗ್ಗೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ, ಹಳೆಯ ಪಿಂಚಣಿ ಜಾರಿ ಆಗಲೇಬೇಕು ಎಂದು ಆಗ್ರಹ ಮಾಡಿದ್ದಾರೆ.ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಏಕೀಕೃತ ಪಿಂಚಣಿ ಯೋಜನೆ ಬಗ್ಗೆ ಸಿಎಸ್ ಷಡಾಕ್ಷರಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಹಳೆಯ ಪೆನ್ಷನ್ ಸಿಸ್ಟಂ ಅನ್ನೇ ಜಾರಿ ತರಬೇ ಕೆಂದು ಆಗ್ರಹಿಸಿದ್ದಾರೆ.ಎನ್​ಪಿಎಸ್ ಸ್ಕೀಮ್​ನಲ್ಲಿ ಸುಧಾರಣೆ ತರಲಾಗಿದೆಯಾದರೂ ಓಲ್ಡ್ ಪೆನ್ಷನ್ ಸಿಸ್ಟಂನ ಮಟ್ಟಕ್ಕೆ ಇದು ಶೇ. 60ರಷ್ಟು ಮುಟ್ಟಿದೆ ಎಂಬುದು ಅವರ ಅನಿಸಿಕೆಯಾಗಿದೆ.ಷೇರು ಮಾರುಕಟ್ಟೆಗೆ ದುಡ್ಡು ಹಾಕ್ತಾರೆ ಲಕ್ಷಾಂತರ ಸಿಗುತ್ತೆ ಅಂತ ನಂಬಿ ಮೋಸ ಹೋದ್ವಿ ಎಂದರು

ಈಗ ಚಾಲನೆಯಲ್ಲಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂ ಬಗ್ಗೆ ವ್ಯಗ್ರರಾದ ಷಡಾಕ್ಷರಿ, 'ಎನ್​ಪಿಎಸ್ ಜಾರಿಗೆ ಬಂದಾಗ, ಷೇರು ಮಾರುಕಟ್ಟೆಯಿಂದ ಹಣ ಭಾರೀ ಬೆಳೆಯುತ್ತದೆ. 60-70 ಲಕ್ಷ ರೂ ಸಿಗುತ್ತೆ ಎಂದೆಲ್ಲಾ ಅಂದುಕೊಂಡಿದ್ವಿ. ಅದು ಜಾರಿಗೆ ಬಂದು ಎಂಟು ಹತ್ತು ವರ್ಷದಲ್ಲಿ ಗೊತ್ತಾ ಯಿತು

ಸಧ್ಯ ರಿಟೈರ್ಡ ಆದವರಿಗೆ ಎರಡು ಸಾವಿರ, ಮೂರು ಸಾವಿರ ರೂ ಪಿಂಚಣಿ ಸಿಗುತ್ತೆ ಅಂತ. ಆಗ ನಾವು ಇದನ್ನು ವಿರೋಧ ಮಾಡೋಕೆ ಪ್ರಾರಂಭಿಸಿದ್ವಿ' ಎಂದರು ಹೀಗಾಗಿ ಸಧ್ಯ ರಾಜ್ಯ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಏನು ಎಂಬೊಂದನ್ನು ಕಾದು ನೋಡಿ ಮುಂದು ನೋಡುತ್ತೆವೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....