ಹುಬ್ಬಳ್ಳಿ –
ಇಸ್ಪೀಟು ಆಡುತ್ತಿದ್ದ ಅಡ್ಡೆ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿ ಐದು ಜನರನ್ನು ಬಂಧಿಸಿದ್ದಾರೆ. ಹೌದು ಹುಬ್ಬಳ್ಳಿ ತಾಲ್ಲೂಕಿನ ಶೆರೇವಾಡ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಎಲೆ ತಟ್ಟುತ್ತಿದ್ದವರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬೆನ್ನು ತಟ್ಟಿ ಬಂಧನ ಮಾಡಿದ್ದಾರೆ.

ಗುರುಸಿದ್ದಪ್ಪ ಮಲ್ಲಿಕಾರ್ಜುನ ಮಟ್ಟಿ, ಸಚೀನ ಅಶೋಕ ಗಾಯಕವಾಡ,ಕುಮಾರಸ್ವಾಮಿ ಕೂಡಲಗಿಮಠ,ಹನುಮಂತ ಹೊಳಲಗೌಡ್ರ, ಮಲ್ಲನಗೌಡ ದಾನಪ್ಪಗೌಡ್ರ ಬಂಧಿತ ಆರೋಪಿಗಳಾ ಗಿದ್ದಾರೆ.

ಅಂದರ್ ಬಾಹರ್ ಆಡುತ್ತಿದ್ದ ಇವರೆಲ್ಲರನ್ನೂ ಮಾಹಿತಿ ಪಡೆದುಕೊಂಡ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧನ ಮಾಡಿದ್ದಾರೆ.




ಇನಸ್ಪೇಕ್ಟರ್ ರಮೇಶ್ ಗೋಕಾಕ್ ಮಾರ್ಗದರ್ಶನ ದಲ್ಲಿ ಎಮ್ ಆರ್ ಗೋಲಂದರಾಜ್ ನಾರಾಯಣ ಹಿರೇಹೊಳಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿದ್ದಾರೆ.

ಇಸ್ಪೇಟ್ ಆಡುತ್ತಿದ್ದವರನ್ನು ಬಂಧನ ಮಾಡಿದ್ದಾರೆ. ಬಂಧಿತರೆಲ್ಲರೂ ಹುಬ್ಬಳ್ಳಿ ಮತ್ತು ಶೆರೇವಾಡ ಗ್ರಾಮದವರಾಗಿದ್ದು ವಶಕ್ಕೆ ತಗೆದುಕೊಂಡಿರುವ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.