ಭಟ್ಕಳ –
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ PSI ರೊಬ್ಬರನ್ನು ಅಮಾನತು ಮಾಡಿದ ಘಟನೆ ಭಟ್ಕಳ ದಲ್ಲಿ ನಡೆದಿದೆ.ವಾಹನ ಕಾಯ್ದೆಯಡಿ ದಂಡ ವಸೂಲು ಮಾಡುವಾಗ ಇಲಾಖಾ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಭಟ್ಕಳ ನಗರ ಠಾಣೆ ಪಿಎಸ್‌ಐ ಯಲ್ಲಪ್ಪ ಮಾದರ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ
ಉ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಆದೇಶ ಮಾಡಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ನಗರ ಪೊಲೀಸ್ ಠಾಣೆಯ ಎದುರಿನ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಹೆಲ್ಮೇಟ್ ಮತ್ತು ಅಗತ್ಯ ದಾಖಲೆಗಳಿಲ್ಲದ ಬೈಕ್ ಸವಾರರಿಗೆ ದಂಡ ವಸೂಲು ಮಾಡುತ್ತಿದ್ದ ಸಮಯದಲ್ಲಿ ದಂಡ ವಸೂಲಿಸಿ ಹಣವನ್ನು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾಯಿಸುತ್ತಿದ್ದ ಬಗ್ಗೆ ಬಗ್ಗೆ ಸ್ಥಳೀಯರು ವಿಡಿಯೊ ಮಾಡಿ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಪ್ರಕರಣವನ್ನು ಭಟ್ಕಳ ಪೊಲೀಸ್ ಉಪಾಧೀಕ್ಷಕ ರಿಗೆ ವರ್ಗಾಯಿಸಿ ಪರಿಶೀಲಿಸುವಂತೆ ಆದೇಶಸಿ ದ್ದರು.ಈ ಕುರಿತು ಪರಿಶೀಲನೆ ನಡೆಸಿದ ಉಪಾಧೀ ಕ್ಷಕರು ಜಿಲ್ಲಾ ವರಿಷ್ಠರಿಗೆ ವರದಿಯನ್ನು ನೀಡಿದ್ದರು ವರದಿಯಲ್ಲಿ ಪಿ.ಎಸ್.ಐ ಇಲಾಖಾ ನಿಯಮಗ ಳನ್ನು ಉಲ್ಲಂಘಿಸಿದ್ದು ಕಂಡು ಬಂದ ಹಿನ್ನೆಲೆ ಯಲ್ಲಿ ಇಲಾಖಾ ವಿಚಾರಣೆ ಬಾಕಿಯಿರಿಸಿ ತಕ್ಷಣ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತು ಗೊಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಭಟ್ಕಳ…..