ಕಾರವಾರ –
ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ – ಹಾವೇರಿಯ ಮೂವರ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಲೈಫ್ ಗಾರ್ಡ್ ಗಳು
ಹೌದು ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆಯನ್ನು ಮಾಡಿದ ಘಟನೆ ಕಾರವಾರದಲ್ಲಿ ನಡೆದಿದೆ.ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ಈ ಒಂದು ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಭಟ್ಕಳ ದಲ್ಲಿ ಈ ಒಂದು ಘಟನೆ ನಡೆದಿದೆ.
ಸಿದ್ಧಾರ್ಥ(24)ದೀಕ್ಷಿತ್(20)ಸಂತೋಷ(24) ರಕ್ಷಣೆಗೊಳಗಾದವರಾಗಿದ್ದಾರೆ.ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಐವರು ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದರು.ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಹಂತದಲ್ಲಿದ್ದರು.ಮುಳುಗುತ್ತಿದ್ದವ ರನ್ನು ಗಮನಿಸಿ ರಕ್ಷಣೆ ಮಾಡಿದ್ದಾರೆ ಸ್ಥಳದಲ್ಲಿದ್ದ ಲೈಫ್‌ಗಾರ್ಡ್ ಸಿಬ್ಬಂದಿಗಳು.
ಲೈಫ್‌ಗಾರ್ಡ್‌ಗಳಾದ ಚಂದ್ರಶೇಖರ್ ದೇವಾಡಿಗ, ಜಯರಾಮ, ಪಾಂಡು, ಹನುಮಂತ್‌ರಿಂದ ರಕ್ಷಣೆ ಮಾಡಲಾಗಿದೆ. ಸುರಕ್ಷಿತವಾಗಿರುವ ರಕ್ಷಣೆಗೊಳ ಗಾದ ಪ್ರವಾಸಿಗರನ್ನು ಕಾಪಾಡಿದ ಲೈಪ್ ಗಾರ್ಡ್ ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸುದ್ದಿ ಸಂತೆ ನ್ಯೂಸ್ ಕಾರವಾರ…..