ಧಾರವಾಡ –
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಶ್ರೀ ಗುರು ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಜೋಳಿಗೆ ಇಲ್ಲದ ಜಂಗ ಮರು ಭಕ್ತರಿಗೆ ಕೈಮಾಡಿ ಶ್ರೀ ಮಠಕ್ಕೆ ಏನಾದರೂ ಕೊಡಿ ಎಂದು ಅವರು ಯಾವತ್ತೂ ಕೇಳುವುದಿಲ್ಲ, ಅವರೇ ಯಾವುದಾದರೂ ಕಾರ್ಯಕ್ರಮಕ್ಕೆ ಹೋದಾಗ ತಮ್ಮ ಕೈಲಾದ ಧನಸಹಾಯ ಮಾಡಿ ಬರುವಂತವರು,ಎಂದು ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅದ್ಯಕ್ಷ ರಾದ ಎಲ್ ಐ ಲಕ್ಕಮ್ಮನವರ ಹೇಳಿದರು.
ಉಪ್ಪಿನಬೆಟಗೇರಿಯ ಶ್ರೀ ಮಠದಲ್ಲಿ ಜರುಗಿದ ಶಿವಾನುಭವ ಗೋಷ್ಠಿ ಗಣ್ಯರಿಗೆ,ಶಿಕ್ಷಕರಿಗೆ ಜರು ಗಿದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಶ್ರೀಗಳು ಸಮಾಜಮುಖಿ ಚಿಂತಕರು ಎನ್ನುವುದಕ್ಕೆ, 2011 ರಲ್ಲಿ ಧಾರವಾ ಡದ ಉಪಕಾರಾಗೃಹದಲ್ಲಿ, ಜೈಲಿನಲ್ಲಿ ಬಂಧಿ ಯಾಗಿರುವ ವಿಚಾರಣಾಧೀನ ಕೈದಿಗಳಿಗೆ ಮನ ಪರಿವರ್ತನೆ ಕಾರ್ಯಕ್ರಮ ಜರುಗಿಸಲಾಗಿತ್ತು ಆ ಕಾರ್ಯಕ್ರಮದಲ್ಲಿ ಆ ಕಾರಾಗೃಹದಲ್ಲಿ ಬಂಧಿಯಾ ಗಿದ್ದ ಒಬ್ಬ ಗಂಡನನ್ನು ಕಳೆದುಕೊಂಡ ಒಬ್ಬ ಹೆಣ್ಣು ಮಗಳು ತನ್ನ ಮೂರು ಜನ ಹೆಣ್ಣು ಮಕ್ಕಳಿಗೆ ಬಿಟ್ಟು ಕೇವಲ ಐದು ಸಾವಿರ ದಂಡ ತುಂಬದೇ ನಾನು ಬಂಧಿಯಾಗಿರುವೆ
ಅಂತ ತನ್ನ ಅಳಲನ್ನು ತೋಡಿಕೊಂಡಳು ಇದೇ ರೀತಿ ಅಲ್ಲಿ ಏಳೆಂಟು ಜನ ಇದೇ ಸಮಸ್ಯೆಯಿಂದ ಇರುವ ಜನರನ್ನು ನೋಡಿ ಪೂಜ್ಯರು ತಮ್ಮ ಹೆಗಲ ಮೇಲಿರುವ ವಸ್ತ್ರವನ್ನು ಜೋಳಿಗೆಯ ನ್ನಾಗಿ ಮಾಡಿ ಆ ಜೋಳಿಗೆಯಲ್ಲಿ ಮೊದಲು ತಾವೇ ಆ ತಾಯಿಯ ಬಿಡುಗಡೆಗೆ ಐದು ಸಾವಿರ ಹಣವನ್ನು ಹಾಕಿದರು ಅದನ್ನು ನೋಡಿದ ಆ ಕಾರ್ಯಕ್ರಮಕ್ಕೆ ಬಂದಿದ್ದ ಗಣ್ಯರು ತಮಗೆ ತಿಳಿ ದಷ್ಟು ಹಣ ಸೇರಿಸಿದರು
ಇದರಿಂದಾಗಿ ಆ ಕಾರಾಗೃಹದಲ್ಲಿ ಬಂಧಿಯಾಗಿದ್ದ ಬಹುತೇಕ ಒಳ್ಳೆಯ ವ್ಯಕ್ತಿಗಳ ಬಿಡುಗಡೆಗೆ ಸಾಕ್ಷಿ ಯಾದರು,ಇಂತಹ ಪೂಜ್ಯರನ್ನು ಪಡೆದ ಈ ಗ್ರಾಮ ಪುಣ್ಯ ಮಾಡಿದೆ ಎಂದರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಈರೇಶ ಅಂಚಟಗೇರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸವದತ್ತಿಯ ಶ್ರೀ ತಟಸ್ಥಲ ಬ್ರಹ್ಮ ಶ್ರೀ ಮಲ್ಲಿಕಾ ರ್ಜುನ ಮಹಾಸ್ವಾಮಿಗಳು ಕೆ ಎಂ ಎಫ್ ಅದ್ಯಕ್ಷ ರಾದ ಶಂಕರ ಮುಗದ,ಗುರು ಪೋಳ ರಮೇಶ ಸಣಮನಿ ಹನುಮಂತಪ್ಪ ಡೊಕ್ಕನವರ,ಕಾಶಪ್ಪ ದೊಡವಾಡ,ಶಂಕರ ಘಟ್ಟಿ, ಚಂದ್ರಶೇಖರ ತಿಗಡಿ ಚನಬಸಪ್ಪ ಲಗಮಣ್ಣವರ,ಎಸ್ ಎಸ್ ಧನಿ ಗೊಂಡ,ಫಕೀರಪ್ಪ ಮಡಿವಾಳರ,ವಿರುಪಾಕ್ಷಪ್ಪ ದೊಡವಾಡ, ಆವೋಜಿ, ಎ ಎಚ್ ನದಾಫ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.