This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Local News

ಯಶಸ್ವಿಯಾಗಿ ನಡೆದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ರಾಜ್ಯ ಮಟ್ಟದ ವೆಬಿನಾರ್

WhatsApp Group Join Now
Telegram Group Join Now

ಧಾರವಾಡ –

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ವತಿಯಿಂದ ರಾಜ್ಯ ಮಟ್ಟದ ವೆಬಿನಾರ್ ಯಶಸ್ವಿಯಾಗಿ ನೆರವೇರಿತು

? ಉಪನ್ಯಾಸದ ವಿಷಯ
ಶಿಕ್ಷಣ ಕ್ರಾಂತಿಜ್ಯೋತಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಬರಹಗಳು ಹಾಗೂ ಶೈಕ್ಷಣಿಕ ಚಿಂತನೆ
?????
ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಈ ವೆಬಿನಾರ್ ಕಾರ್ಯಕ್ರಮವು ಶ್ರೀಮತಿ ಚಂದ್ರಕಲಾ ಮೇಡಂ ಇವರಿಂದ ಪ್ರಾರ್ಥನೆಯನ್ನು ನಿರ್ವಹಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
? ನಂತರ ಡಾ ಲತಾ ಎಸ್ ಮುಳ್ಳೂರ ಸಹಶಿಕ್ಷಕಿ. ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರು ಇವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತ ಕೋರಿದರು.????
? ಮುಂದುವರೆದು ಶ್ರೀಮತಿ ಜ್ಯೋತಿ ಎಚ್ ಸಹ ಶಿಕ್ಷಕಿ .ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಶ್ರೀಮತಿ ರಕ್ಷಾ ಸಹ ಶಿಕ್ಷಕಿ ಇವರು ನಮ್ಮ ಕಾರ್ಯಕ್ರಮದ ಕೇಂದ್ರಬಿಂದುವಾದ ಡಾ. ವಿದ್ಯಾ ಕುಂದರಗಿ ಮೇಡಮ್ ಅವರ ಪರಿಚಯ ಕಾರ್ಯಕ್ರಮ ನೆರವೇರಿಸಿದರು.
? ನಂತರ ಡಾ.ವಿದ್ಯಾ ಕುಂದರಗಿ ಮೇಡಂ ಅವರ ವಿಷಯದ ಮಂಡನೆ ಪ್ರಾರಂಭವಾಯಿತು

? ವಿಷಯದ ಮಂಡನೆಯನ್ನು ಡಾ.ವಿದ್ಯಾ ಕುಂದರಗಿ ಮೇಡಮ್ ಅವರು ಒಂದು ವಿಶೇಷವಾದಂತಹ ವಾಕ್ಯವನ್ನು ಹೇಳುವುದರ ಮೂಲಕ ಪ್ರಾರಂಭ ಮಾಡಿದರು ಅದು ಎಲ್ಲರ ಮನಮುಟ್ಟುವ ಹಾಗೆ ಇತ್ತು ಅದು ಯಾವುದೆಂದರೆ “ಮಹಿಳೆಯ ಧ್ವನಿ ಏಳಬೇಕು ಆವಾಗಲೇ ಮಹಿಳೆಯರು ಸಬಲ ರಾಗುತ್ತಾರೆ”. ತಮ್ಮ ಕಾಲ ಮೇಲೆ ನಿಂತ ಎಲ್ಲ ಮಹಿಳೆಯರು ಆರ್ಥಿಕವಾಗಿ ಸಶಕ್ತವಾಗಿರುವರು. ಇದರಿಂದ ಮಹಿಳೆಯರು ಮುಂದುವರೆದಿದ್ದಾರೆ ಎಂದು ಹೇಳುವದು ಒಂದು ಬದಿಗಾದರೆ, ಎಲ್ಲಿ ಮುಂದುವರಿಲಿಕ್ಕೆ ಹೋಗಿದ್ದಾಳೆ ಅಲ್ಲಿ ಶೋಷಣೆಗೆ ಒಳಗಾಗುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಇಂಥ ಒಂದು ಶೋಷಣೆಯನ್ನು ಮೆಟ್ಟಿ ನಿಲ್ಲಬೇಕು. ಅದಕ್ಕಾಗಿ ಇಂಥ ಒಂದು ಸಂಘದ ಅವಶ್ಯಕತೆ ಇತ್ತು ಇದಕ್ಕಾಗಿ ಡಾ. ಲತಾ ಎಸ್ ಮುಳ್ಳೂರ ಸಹ ಶಿಕ್ಷಕಿಯರು ಇಂಥ ಸಂಘವನ್ನು ಹುಟ್ಟು ಹಾಕಿದ್ದಕ್ಕೆ ಇವರಿಗೆ ಅತ್ಯಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮತ್ತೆ ಇನ್ನೊಂದು ವಿಷಯ ಅಂತ ಅಂದ್ರೆ ನಮ್ಮ ಸಂಘಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಎನ್ನುವಂತಹ ಒಂದು ಹೆಸರು ಇಟ್ಟಿದ್ದಕ್ಕೆ ತುಂಬಾನೇ ಸಂತೋಷವನ್ನು ವ್ಯಕ್ತಪಡಿಸಿದರು. ಜೊತೆಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವನ್ನು ಯಶಸ್ವಿಗೊಳಿಸಲು ಎಲ್ಲ ಮಹಿಳಾ ಶಿಕ್ಷಕಿಯರ ಮೇಲೆ ಅತ್ಯಂತ ಹೆಚ್ಚಿನ ಜವಾಬ್ದಾರಿಯಿಂದ ಕೆಲಸವಾಗಬೇಕು,ಸತತ ಪರಿಶ್ರಮದಿಂದ ಇದನ್ನು ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರುಈ ಹೆಸರನ್ನು ನಾವು ಬದುಕಿಸಬೇಕು ಚಿರಸ್ಥಾಯಿಯಾಗಿ ಮಾಡಬೇಕು ಎಂದು ಹೇಳಿದರು. ಈ ಒಂದು ಹೆಸರು ಸದಾಕಾಲ ಚಿರವಾಗಿ ಇರಬೇಕಾದ್ರೆ ಶಿಕ್ಷಕಿಯರ ಮೇಲೆ ಗುರುತರವಾದ ಜವಾಬ್ದಾರಿಗಳು ತುಂಬಾ ಇವೆ ಅವುಗಳನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಹೇಳಿದರು*
? ಬದುಕು ನಿನಗಾಗಿ ಅಷ್ಟೇ ಅಲ್ಲ ಪರರಿಗಾಗಿ ನಿಮ್ಮ ಬದುಕು ಇದೆ ಅಂತಹ ಒಂದು ಶಿಕ್ಷಣವನ್ನು ಮಕ್ಕಳಿಗೆ ಶಿಕ್ಷಕಿಯರು ನೀಡಬೇಕು ಆಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎನ್ನುವುದನ್ನು ಹೇಳಿದರು. ಮುಖ್ಯವಾಗಿ ಒಂದು ಚಳುವಳಿ ಅಥವಾ ಒಂದು ಹೋರಾಟ ಶುರು ಆಗ್ಬೇಕಂದ್ರೆ ಅದಕ್ಕೆ ಭೌತಿಕ ಆಯಾಮಗಳ ಅವಶ್ಯಕತೆ ಇರುತ್ತದೆ.ಅಂದರೆ ಮುದ್ರಣ ಆಯಾಮಗಳ ಮೂಲಕ, ಬರವಣಿಗೆ ಭಾಷಣಗಳು ಮುದ್ರಣ ಪಡೆದುಕೊಳ್ಳಬೇಕಾಗುತ್ತದೆ ಇದಕ್ಕಗಿ ಹಲವಾರು ಹೋರಾಟ ಮಾಡಬೇಕಾಗುತ್ತದೆ. ಹೋರಾಟ ಮಾಡಲಿಕ್ಕೆ ಮನುಷ್ಯ ಮನುಷ್ಯನನ್ನು ಹೆದರಿಸಬೇಕಾ? ಅದು ಹೋರಾಟ ಆಗುತ್ತಾ? ಖಂಡಿತ ಇಲ್ಲ. ಸಮಾನತೆ ಅನ್ನೋದು ಎಲ್ಲಿ ಬರತ್ತದೆಯೋ ಅದು ಹೋರಾಟ ಅನಿಸಿಕೊಳ್ಳುತ್ತೆ.
ಈ ಸಂಧರ್ಭದಲ್ಲಿ ಶಿಕ್ಷಕ ವೃತ್ತಿ ನಮಗೆ ಹೆಮ್ಮೆ ಇರಬೇಕು .ಏಕೆಂದರೆ ಮಾತೆ ಸಾವಿತ್ರಿಬಾಯಿ ಫುಲೆ ಇಡೀ ದೇಶಕ್ಕೆ ಹೆಸರುವಾಸಿಯಾಗಿದ್ದು ಈ ಶಿಕ್ಷಕ ವೃತ್ತಿ ಎನ್ನುವುದರಿಂದ ಅದಕ್ಕಾಗಿ ನಾವೆಲ್ಲರೂ ಮೊದಲು ನಮ್ಮ ವೃತ್ತಿಯ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದು ಹೇಳಿದರು. ಇದರ ಬಗ್ಗೆ ಹೇಳುತ್ತಾ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜೀವನದ ಹಿನ್ನಲೆಯ ಬಗ್ಗೆ ತುಂಬಾನೇ ಸುಂದರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶತಮಾನಗಳಿಂದ ತುಳಿತಕ್ಕೆ ಒಳಪಟ್ಟಂತಹ ಮಹಿಳೆಯರಿಗೆ ಹಾಗೂ ಸಮುದಾಯದಲ್ಲಿ ಹುಟ್ಟಿದಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿದವರು ಹಾಗೂ ವಿಧವೆಯರಿಗೆ ಮೊಟ್ಟಮೊದಲಬಾರಿಗೆ ಶಾಲೆಗಳನ್ನು ತೆರೆದು ಜ್ಞಾನವನ್ನು ನೀಡುವಂತಹ ಮಹಾನ್ ಕೆಲಸವನ್ನು ಮಾಡಿದಂತಹ ದಿಟ್ಟ ಮಹಿಳೆ ಅಂತಂದ್ರೆ ಮಾತೇ ಸಾವಿತ್ರಿಬಾಯಿಪುಲೆ ಎನ್ನುವುದನ್ನು ಹೇಳಿದರು. ಇವರಿಗೆ ಫುಲೆ ಎನ್ನುವಂತಹ ಒಂದು ಅಡ್ಡ ಹೆಸರು ಏಕೆ ಬಂತು ಇವರು ಹೂವನ್ನು ಮಾಡುತ್ತಿರುವಂತಹ ಒಂದು ಕಸುಬನ್ನು ಮಾಡುತ್ತಿದ್ದರು. ಅದಕ್ಕಾಗಿ ಈ ಹೆಸರು ಬಂತು ಎಂಬುದನ್ನು ಪರಿಚಯಿಸಿದರು.ಹೀಗೆ ಹಲವಾರು ವಿಷಯಗಳನ್ನು ಉಪನ್ಯಾಸದ ಮೂಲಕ ನಾವು ತಿಳಿದುಕೊಂಡೆವು ಸಾವಿತ್ರಿಬಾಯಿ ಫುಲೆಯವರು ಮಕ್ಕಳಿಗೆ ಶಿಕ್ಷಣವನ್ನು ನೀಡಲಿಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಅವರು ಅನುಭವಿಸಿದತಹ ಸಮಸ್ಯೆ ಗಳನ್ನು ಯಾವ ರೀತಿ ಅವರು ಅದನ್ನು ಶಾಂತರೀತಿಯಿಂದ ಪರಿಹರಿಸಿದರು, ಯಾವ ರೀತಿಯಾಗಿ ಅವಮಾನ ಗಳನ್ನು ಎದುರಿಸಿಕೊಂಡು ಮುನ್ನುಗ್ಗಿದರು ಎಂಬುದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಒಂದು ಸಾರಿ ಬಸುರಿ ಹೆಣ್ಣುಮಗಳು ಪುರೋಹಿತರ ಮನೆ ಮುಂದೆ ನೀರಿಗಾಗಿ ನಿಂತು ಕಾದು ಕಾದು ನೀರಿಲ್ಲದೆ ಮರಳಿ ಬರುವಾಗ ಅಂತಹ ಒಂದು ಪರಿಸ್ಥಿತಿಯನ್ನು ನೋಡಿ ತಮ್ಮ ಮನೆಯ ಮುಂದೆ ಒಂದು ಬಾವಿಯನ್ನು ತೆರೆದು ಎಲ್ಲರಿಗೂ ನೀರು ಸಿಗುವ ಹಾಗೆ ಒಂದು ಮಹಾನ್ ಕಾರ್ಯವನ್ನು ಮಾಡಿದವರು ? ಸಾವಿತ್ರಿಬಾಯಿ ಫುಲೆಯವರು ಬಾಲ ಹತ್ಯೆ ಪ್ರತಿಬಂಧಕ ಗ್ರಹಗಳನ್ನು
ಹಾಗೂ ಗುಪ್ತ ಪ್ರಸೂತಿ ಗ್ರಹಗಳನ್ನು ಪ್ರಾರಂಭಿಸಿ ಮಹಿಳೆಯರ ಮೇಲೆ ಆಗುತ್ತಿರುವಂತಹ ಮಾನಸಿಕ ಶೋಷಣೆಯ ವಿರುಧ್ಧ ಹೋರಾಡಲಿಕ್ಕೆ ಪಣ ತೊಟ್ಟಿದ್ದರು. ಹಲವಾರು ಮಾರಣಾಂತಿಕ ರೋಗಗಳ ಒಂದು ಪರಿಹಾರೋಪಾಯದಲ್ಲಿ ಫುಲೆ ದಂಪತಿಗಳು ಅತ್ಯಂತ ಸಕ್ರಿಯವಾಗಿ ಭಾಗವಹಿಸಿದ್ದರು. ಎಲ್ಲ ವಿಚಾರಗಳನ್ನು ವ್ಯಕ್ತಪಡಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ಯಾವ ರೀತಿ ಆಚರಿಸುತ್ತೇವೆಯೋ ಅದೇ ರೀತಿ ಜನವರಿ ಮೂರರಂದು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸಲೆಬೇಕು ಎಂದು ಹೇಳಿದರು

? ಮಾತೇ ಸಾವಿತ್ರಿಬಾಯಿ ಫುಲೆಯವರು ಬರೆದಂತಹ ಬರಹಗಳು ಕೇವಲ ನಾಲ್ಕೇ ನಾಲ್ಕು. ಕಾವ್ಯ ಫುಲೆ, ಭುವನ. ಸುಭೋದ ರತ್ನಾಕರ, ಜ್ಯೋತಿಬಾ ರವರ ಬರಹಗಳ ಸಂಗ್ರಹ ಹಾಗೂ ಕರ್ಜ ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ. ಇವೆಲ್ಲವೂ ಸಾಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವಂತಹ ಕವನಗಳನ್ನು ಈ ಕವನ ಸಂಕಲನಗಳು ಒಳಗೊಂಡಿವೆ ಎಂದು ಹೇಳಿದರು
? ಈ ಒಂದು ಸಂದರ್ಭದಲ್ಲಿ ಡಾ.ವಿದ್ಯಾ ಕುಂದರಗಿ ಮೇಡಂ ಅವರು ಮಾತೇ ಸಾವಿತ್ರಿಬಾಯಿ ಫುಲೆ ಅವರ ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದನ್ನು ಓದಿ ಹೇಳಿದರು. ಮೂಲ ಭಾಷೆಗೆ ಧಕ್ಕೆ ಬರದ ಹಾಗೆ ಅನುವಾದ ಮಾಡಿದ್ದು ತುಂಬಾನೇ ಸಂತಸವನ್ನು ಕೊಡುವ ವಿಚಾರವಾಗಿದೆ ಸುಂದರವಾದ ಕನ್ನಡ ಅನುವಾದವನ್ನು ಅವರ ಕವನಗಳು ಒಳಗೊಂಡಿದ್ದವು. ಮತ್ತೆ ಇವರಿಗೆ ಮನುಷ್ಯರನ್ನಬೇಕಾ? ಎನ್ನುವ ಶೀರ್ಷಿಕೆಯ ಕವನವನ್ನು ಸಹಿತ ಇವರು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ತುಂಬಾ ಸುಂದರವಾಗಿ ಭಾಷೆಗೆ ಧಕ್ಕೆ ಬರದ ಹಾಗೆ ಬರದ ಹಾಗೆ ಇದೆ ಈ ಕವನ.ಇದು ತುಂಬಾನೇ ಖುಷಿ ಕೊಡುವಂತಹ ವಿಷಯವಾಗಿತ್ತು. ಇನ್ನೂ ಬೇರೆ ಸಾವಿತ್ರಿಬಾಯಿ ಫುಲೆ ಅವರ ಕವನಗಳನ್ನು ತಾವು ಕನ್ನಡಕ್ಕೆ ಅನುವಾದ ಮಾಡುವಂತಹ ಒಂದು ಅಭಿಲಾಷೆಯನ್ನು ಸಹಿತ ವ್ಯಕ್ತಪಡಿಸಿದರು.ಕೊನಗೆ??????
ಡಾ. ವಿದ್ಯಾ. ಕುಂದರಗಿ ಮೇಡಂ ಅವರು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಗೆ ಕೊಟ್ಟ ಸಂದೇಶ ????????
ಶಿಕ್ಷಕಿಯರೇ ವಿವಿಧ ಆಯಾಮಗಳ ಹಾಗೂ ಮಾಧ್ಯಮಗಳ ತಿಲಕ???????

ಎನ್ನುವ ಸಂದೇಶವನ್ನು ಹೇಳುವುದರ ಮೂಲಕ ಉಪನ್ಯಾಸವನ್ನು ಮುಗಿಸಿದರು ????
. ಸುಧೀರ್ಘವಾಗಿ ತಮ್ಮ ಉಪನ್ಯಾಸದ ಮೂಲಕ ಶಿಕ್ಷಕಿಯರನ್ನು ಚಿಂತನಾ ಲೋಕದಲ್ಲಿ ಮುಳುಗಿಸಿ ಮಾತೇ ಸಾವಿತ್ರಿಬಾಯಿ ಫುಲೆ ಅವರ ಬರಹಗಳು ಹಾಗೂ ಅವರ ಹಿನ್ನೆಲೆ ಅವರ ಪುಸ್ತಕಗಳ ಬಗ್ಗೆ ಸರಳ ರೀತಿಯಲ್ಲಿ ವಿವರವಾಗಿ ಹೇಳಿ ಕೊಟ್ಟಂತಹ ಹಿರಿಯ ಸಾಹಿತಿಗಳು, ಮಹಿಳಾ ಪರ ಹೋರಾಟಗಾರರು, ಸಾಹಿತಿಗಳು ಅವರಿಗೆ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕ ಧಾರವಾಡ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಈ ವೆಬಿನಾರ್ ಕಾರ್ಯಕ್ರಮ ಮಾತೇ ಸಾವಿತ್ರಿ ಬಾಯಿ ಫುಲೆ ಅವರ ಜೀವನ ನಡೆದು ಬಂದ ದಾರಿ..ಅವರ ಸಾಧನೆಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ದಾರಿದೀಪವಾಯಿತು
? ಎಲ್ಲಾ ಪದಾಧಿಕಾರಿಗಳ ಮತ್ತು ಆಸಕ್ತ ಶಿಕ್ಷಕಿಯರ ಪಾಲ್ಗೊಳ್ಳುವಿಕೆಯಿಂದ ವೆಬಿನಾರ್ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕೊನೆಗೆ ವಂದನಾರ್ಪಣೆಯನ್ನು ಶ್ರೀಮತಿ ಮಂಜುಳಾ ನಂಜನಗೂಡು ಮೇಡಮ್ ಅವರು ನೆರವೇರಿಸಿದರು.ಇಂತಹ ವಿಶೇಷವಾದಂತಹ ವೆಬಿನಾರ ಕಾರ್ಯಕ್ರಮಗಳ ಮೂಲಕ ಹಲವಾರು ಸಾಹಿತಿಗಳನ್ನು ಮನೆಯಲ್ಲಿ ಕೂತಲ್ಲಿಯೇ ನಮಗೆ ಪರಿಚಯಿಸಿ ಕೊಡುತ್ತಿರುವಂತಹ ಕರ್ನಾಟಕ ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರ. ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಳಾದ ಶ್ರೀಮತಿ ಜ್ಯೋತಿ ಹೆಚ್ ಇವರಿಗೆ ರಾಜ್ಯ ತಾಂತ್ರಿಕ ಸದಸ್ಯರವತಿಯಿಂದ ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸರ್ವ ಪದಾಧಿಕಾರಿಗಳ ವತಿಯಿಂದ ತುಂಬು ಹೃದಯದ ಧನ್ಯವಾದಗಳು.?????????
???????
ನಿರೂಪಣೆ ಹಾಗೂ ಬರವಣಿಗೆ ವರದಿ– ಪರವೀನ ಎಚ್ ನದಾಫ್ ರಾಜ್ಯ ತಾಂತ್ರಿಕ ಸಮಿತಿ????????


Google News

 

 

WhatsApp Group Join Now
Telegram Group Join Now
Suddi Sante Desk