ಸೂಲಿಬೆಲೆ –
ವಿದ್ಯಾರ್ಥಿಯೊಬ್ಬರಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಘಟನೆ ಸೂಲಿಬೆಲೆ ಹೋಬಳಿಯ ಚಿಕ್ಕಕೋಲಿಗ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಯೊಬ್ಬನಿಗೆ ಥಳಿಸಿದ ಹಿನ್ನೆಲೆಯಲ್ಲಿ ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿ ಸಲಾಗಿದೆ.
ಶಿಕ್ಷಕ ಈಶ್ವರಪ್ಪ ಪೂಜಾರಿ ಅವರನ್ನು ಶಾಲೆಗೆ ನಿಯೋಜಿ ಸಬೇಕು ಎಂದು ಕೆಲವು ಪೋಷಕರು ಆಗ್ರಹಿಸಿದ್ದು ಅಲ್ಲದೇ ಪ್ರತಿಭಟನೆಯನ್ನು ಮಾಡಿದ್ದು ಕಂಡು ಬಂದಿತು.ಈ ಕುರಿತು ಪ್ರತಿಕ್ರಿಯೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ ಮಕ್ಕಳನ್ನು ಹೊಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಶಾಲೆ ಮಕ್ಕಳು ಶಿಕ್ಷಕ ಈಶ್ವರಪ್ಪ ಪೂಜಾರಿ ಅವರ ವಿರುದ್ಧದ ಅಮಾನತು ಆದೇಶ ಹಿಂಪಡೆಯಬೇಕು ಎಂದು ಪೋಷ ಕರು ಒತ್ತಾಯಿಸಿದ್ದಾರೆ. ಮಕ್ಕಳ ಕಲಿಕೆಗೆ ತೊಂದರೆಯಾ ಗದಂತೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದರು.