ಆರಂಭಕ್ಕೂ ಮುನ್ನವೇ ಹೊಸದೊಂದು ದಾಖಲೆ ಬರೆದ 26 ನೇ ರಾಷ್ಟ್ರೀಯ ಯುವಜನೋತ್ಸವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ ಬೆನ್ನಲ್ಲೇ ನೊಂದಣಿ ಯಾಯಿತು 16 ಸಾವಿರಕ್ಕೂ ಹೆಚ್ಚು ಯುವ ಸಮೂಹ…..

Suddi Sante Desk
ಆರಂಭಕ್ಕೂ ಮುನ್ನವೇ ಹೊಸದೊಂದು ದಾಖಲೆ ಬರೆದ 26 ನೇ ರಾಷ್ಟ್ರೀಯ ಯುವಜನೋತ್ಸವ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ ಬೆನ್ನಲ್ಲೇ ನೊಂದಣಿ ಯಾಯಿತು 16 ಸಾವಿರಕ್ಕೂ ಹೆಚ್ಚು ಯುವ ಸಮೂಹ…..

ಧಾರವಾಡ

ಜನವರಿ 12 ರಿಂದ ಅವಳಿ ನಗರದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದ್ದು ಈಗಾಗಲೇ 16 ಸಾವಿರದ ಗಡಿಯನ್ನು ದಾಟಿದೆ ನೊಂದಣಿ ಹೌದು ಉದ್ಘಾಟನಾ ದಿನ ಇನ್ನೂ ನಾಲ್ಕು ದಿನ ಗಳು ಬಾಕಿ ಇರುವಾಗಲೇ ನೋಂದಣಿ ಸಂಖ್ಯೆ ದಾಖಲೆಯಾಗಿದ್ದು ಯುವ ಸಮೂಹದ ಅಭೂತ ಪೂರ್ವ ಪ್ರತಿಕ್ರಿಯೆ ಕಂಡು ಬರುತ್ತಿದೆ ಇದರೊಂ ದಿಗೆ ಕರ್ನಾಟಕ ರಾಜ್ಯವು ಅಗ್ರ ಸ್ಥಾನಕ್ಕೆ ಹೋಗಿದ್ದು ಕರ್ನಾಟಕ – ತಮಿಳುನಾಡು, ಆಂಧ್ರ ಪ್ರದೇಶದಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.

 

ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ನಡೆಯಲಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.ಯುವ ಜನೋತ್ಸವದಲ್ಲಿ ಪಾಲ್ಗೊ ಳ್ಳಲು ಯುವ ಪ್ರತಿನಿಧಿಗಳು ನಿರೀಕ್ಷೆಗೂ ಮೀರಿ ಆಸಕ್ತಿ ತೋರಿದ್ದಾರೆ.

ಹೌದು ನೀವು ಏನು ಬೇಕಾದರೂ ಮಾಡಬಲ್ಲಿರಿ ಎಲ್ಲವನ್ನೂ ಮಾಡಬಲ್ಲಿರಿ ಎಂಬ ಸ್ವಾಮಿ ವಿವೇ ಕಾನಂದರ ಯುವ ವಾಣಿಯನ್ನು ಸಾಕಾರ ಗೊಳಿಸಲು ಅವಳಿ ನಗರ ಸಜ್ಜಾಗಿದೆ.ಐದು ದಿನಗಳ ಯುವ ಜನೋತ್ಸವದಲ್ಲಿ ಭಾಗಿಯಾ ಗಲು ಕೇಂದ್ರ ಸಂಸದೀಯ ವ್ಯವಹಾರಗಳು ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಶ‍್ರೀ ಪ್ರಹ್ಲಾದ್ ಜೋಶಿ ಅವರು ಇತ್ತೀಚೆಗೆ https://nyfhubballidharwad2023.in/ ವೆಬ್ ಸೈಟ್ ಉದ್ಘಾಟಿಸಿದ್ದರು.

ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಗೊಳ್ಳಲಿರುವ ರಾಷ್ಟ್ರೀಯ ಯುವ ಜನೋತ್ಸವ ವೀಕ್ಷಿಸಲು ಈಗಾಗಲೇ 15 ಸಾವಿರ ಮಂದಿ ನೋಂದಣಿಯಾಗಿದ್ದಾರೆ.ಒಟ್ಟು 7,500 ಮಂದಿ ಯುವ ಪ್ರತಿನಿಧಿಗಳು ಪಾಲ್ಗೊಳ್ಳಲು ಅವಕಾಶ ವಿದ್ದು 75,000 ಪ್ರೇಕ್ಷಕರನ್ನು ಗುರಿಯಾಗಿಟ್ಟು ಕೊಂಡು ರಾಷ್ಟ್ರೀಯ ಯುವ ಜನೋತ್ಸವವನ್ನು ಆಯೋಜಿಸಲಾಗುತ್ತಿದೆ.

ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ ಹೌದು ದೇಶಾದ್ಯಂತ ನೊಂದಣಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ವೆಬ್ ಟ್ ನ್ನು ರಚಿಸಿದೆ.ವೆಬ್ ಸೈಟ್ ಲೋಕಾ ರ್ಪಣೆ ಮಾಡಿದ ಕೆಲವೇ ಸಮಯದಲ್ಲಿ 5,203 ಮಂದಿ ನೋಂದಣಿಯಾಗಿದ್ದಾರೆ.ಇಡೀ ದೇಶದಲ್ಲಿ ಕರ್ನಾಟಕದಿಂದ ಹೆಚ್ಚು ಮಂದಿ ನೋಂದಣಿಯಾ ಗಿದ್ದು 875 ಯುವ ಪ್ರತಿನಿಧಿಗಳು ಭಾಗವಹಿಸಲು ಆಸಕ್ತಿ ತೋರಿದ್ದಾರೆ.

ಕರ್ನಾಟಕ ರಾಜ್ಯ ಸಂಘಟನೆ ಯಿಂದ 164, ಎನ್.ಎಸ್.ಎಸ್ ನಿಂದ 118, ಎನ್.ವೈ.ಕೆ.ಎಸ್ ನಿಂದ 443, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಭಾಗದಿಂದ 150 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ನಂತರದ ಸ್ಥಾನಗಳಲ್ಲಿ ತಮಿಳು ನಾಡು [346], ಆಂಧ್ರ ಪ್ರದೇಶ [323]ವಿದೆ ನೋಂದಣಿ ಸಂಪೂರ್ಣ ಉಚಿತವಾಗಿದೆ.

ಯುವ ಜನೋತ್ಸವದಲ್ಲಿ ಭಾಗಿಯಾಗಲು ಎಲ್ಲರಿಗೂ ಅವಕಾಶವಿಲ್ಲ.ರಾಜ್ಯ ಎನ್.ವೈ.ಕೆ. ಎಸ್ ಮತ್ತು ರಾಜ್ಯ ಎನ್.ಎಸ್.ಎಸ್. ಸಂಘಟನೆ ಗಳಿಂದ ಪಾಲ್ಗೊಳ್ಳುವವರನ್ನು ರಾಜ್ಯ ಯುವ ಇಲಾಖೆ ಆಯ್ಕೆ ಮಾಡುತ್ತದೆ.ಪ್ರತಿ ಯೊಂದು ರಾಜ್ಯಕ್ಕೆ ಆಯಾ ಕೇಂದ್ರ ಸಂಸ್ಥೆಯಿಂದ ನಿರ್ದಿಷ್ಟ ಕೋಟ ನಿಗದಿ ಮಾಡಲಾಗುತ್ತದೆ.

ಮುಂದಾಗಿಯೇ ನೋಂದಣಿ ಮಾಡಿಕೊಂಡರೆ ರಾಷ್ಟ್ರೀಯ ಯುವ ಜನೋತ್ಸವವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲು ಮತ್ತು ಸೂಕ್ತ ಯೋಜನೆ ರೂಪಿಸಲು ಸಾಧ್ಯವಾಗಲಿದೆ. 60 ಕ್ಕೂ ಹೆಚ್ಚು ಹೆಸರಾಂತ ತಜ್ಞರು ವಿಶೇಷ ಯುವ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಯಿದೆ,

ಜಿ20 ಮತ್ತು ವೈ20 ಕಾರ್ಯಕ್ರಮ ಗಳ ಕುರಿತು ಐದು ವಿಷಯಗಳ ಬಗ್ಗೆ ಸಮಗ್ರ ಚರ್ಚೆಗಳು ನಡೆಯಲಿವೆ.ಕೆಲಸದ ಭವಿಷ್ಯ ಉದ್ಯಮ, ನಾವೀನ್ಯ ಮತ್ತು 21 ನೇ ಶತಮಾನದ ಕೌಶಲ್ಯ ಗಳು ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ ಶಾಂತಿ ನಿರ್ಮಾಣ ಮತ್ತು ಸಮನ್ವಯ ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿ ಯುವಕರ ಭವಿಷ್ಯದ ಹಂಚಿಕೆ ಹಾಗೂ ಆರೋಗ್ಯ ಮತ್ತು ಯೋಗಕ್ಷೇಮ ಕುರಿತು ವಿಷಯ ತಜ್ಞರು ಬೆಳಕು ಚೆಲ್ಲಲಿದ್ದಾರೆ.

ಹೀಗಾಗಿ ಎಷ್ಟು ಜನ ಪಾಲ್ಗೊಳ್ಳಲಿದ್ದಾರೆ ಎಂಬ ಆಧಾರದ ಮೇಲೆ ಗೋಷ್ಠಿಗಳ ಆಯೋಜನೆ ವಿಷಯ ತಜ್ಞರನ್ನು ನಿಯೋಜಿಸಲು ಸಾರಿಗೆ, ವಸತಿ,ಊಟ ಮತ್ತಿತರ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ.

ಅಂತಿಮವಾಗಿ ಪ್ರತಿಯೊಬ್ಬರಿಗೂ ಕ್ಯೂ ಆರ್ ಕೋಡ್ ಇರುವ ವೈಯಕ್ತಿಕ ಗುರುತಿನ ಚೀಟಿ ಸಿದ್ಧಪಡಿಸಲು ಮತ್ತು ವೇದಿಕೆಗೆ ಆಗಮಿಸಿದಾಗ ನೋಂದಣಿ ಪ್ರಕ್ರಿಯೆ ತ್ವರಿತ ಮತ್ತು ಸುಗಮಗೊ ಳಿಸಬಹುದಾಗಿದೆ.ಪ್ರತಿಯೊಬ್ಬ ಪ್ರತಿನಿಧಿಗೆ ಅವರ ವರ್ಗವನ್ನು ಆಧರಿಸಿ ವೆಬ್ ಸೈಟ್ ನಲ್ಲಿ ವೈಯಕ್ತಿಕ ಸಹಾಯ ವಿಭಾಗವಿದೆ.ಪ್ರಮುಖ ಸೂಚನೆಗಳು, ನೋಡೆಲ್ ಅಧಿಕಾರಿ ವಿವರಗಳು ಸ್ಥಳ ನಕ್ಷೆ ಸೇರಿ ಎಲ್ಲಾ ಮಾಹಿತಿ ವೆಬ್ ಸೈಟ್ ನಲ್ಲಿ ಇರಲಿದೆ.ತಮ್ಮ ದೂರವಾಣಿ ಸಂಖ್ಯೆ ಬಳಸಿಕೊಂಡು ವಸತಿ ಮತ್ತಿತರ ಸೌಲಭ್ಯಗಳ ವಿವರಗಳನ್ನು ಪಡೆಯ ಬಹುದಾಗಿದೆ.

ವೆಬ್ ಸೈಟ್ ಸ್ಥಿತ ಸ್ಥಾಪಕ ಕ್ಲೌಡ್ ವ್ಯವಸ್ಥೆಯಾ ಗಿದ್ದು  ಏಕ ಕಾಲದಲ್ಲಿ ಸಹಸ್ರಾರು ಬಳಕೆದಾರ ರನ್ನು ನಿಭಾಯಿಸಲಿದೆ.ವೆಬ್ ಸೈಟ್ ನಲ್ಲಿ ಎಲ್ಲಾ ವೇದಿಕೆಗಳು,ಕಾರ್ಯಕ್ರಮಗಳು,ಸಮಯ ಮತ್ತಿತರ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ. ಸೂಚನಾ ಫಲಕದಲ್ಲಿರುವ ಮಾಹಿತಿಯೂ ಇಲ್ಲಿ ಲಭ್ಯವಿರಲಿದೆ.ಪ್ರತಿಯೊಂದು ಚಟುವಟಿಕೆಗಳಿಗೆ ನೊಡೆಲ್ ಅಧಿಕಾರಿಗಳು ಜವಾಬ್ದಾರರಾಗ ಲಿದ್ದಾರೆ.ಪ್ರವಾಸಿ ವಿವರಗಳ ಜೊತೆಗೆ ಕಾರ್ಯ ಕ್ರಮದ ಪಟ್ಟಿ ಕ್ಷಣ ಕ್ಷಣಕ್ಕೂ ಅಪ್ ಲೋಡ್ ಮಾಡುವ ಸಕಾಲಿಕ ಮಾಹಿತಿ ಲಭ್ಯವಾಗಲಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.