ಬೆಂಗಳೂರು –
ಸರ್ಕಾರಿ ಅಧಿಕಾರಿಯನ್ನು ಟ್ರ್ಯಾಪ್ ಮಾಡಲು ಬಂದು ಲೋಕಾಯುಕ್ತ ಬಲೆಗೆ ಬಿದ್ದ ಗುತ್ತಿಗೆದಾರ ರಾಜ್ಯದಲ್ಲಿಯೇ ವಿಶೇಷವಾಗಿ ಕಂಡು ಬಂದಿತು ಪ್ರಕರಣ ಆಮಿಷವೊಡ್ಡುತ್ತಿದ್ದ ಶರಣಪ್ಪನನ್ನು ಬಲೆಗೆ ಹಾಕಿಸಿದ ಸರ್ಕಾರಿ ಅಧಿಕಾರಿ ಹೌದು
ಸಾಮಾನ್ಯವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಸರ್ಕಾರಿ ಅಧಿಕಾರಿ ಸಿಬ್ಬಂದಿಗಳನ್ನು ಲೋಕಾ ಯುಕ್ತ ಬಲೆಗೆ ಬೀಳೊದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಂದು ವಿಶೇಷವಾಗಿ ಪ್ರಕರಣವೊಂದು ನಡೆದಿದೆ.ಹೌದು ಲಂಚಕ್ಕೆ ಪದೇ ಪದೇ ಬೇಡಿಕೆಯನ್ನು ಇಡುತ್ತಿದ್ದ ಗುತ್ತಿ ಗೆದಾರರನ್ನೇ ಲೋಕಾಯುಕ್ತ ಬಲೆಗೆ ಹಾಕಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹೌದು ಲಂಚದ ಆಮಿಷವನ್ನು ನೀಡುತ್ತಿದ್ದ ಗುತ್ತಿಗೆದಾರನನ್ನು ದೂರು ನೀಡಿ ಸರ್ಕಾರಿ ಅಧಿಕಾರಿ ಟ್ಯಾಪ್ ಮಾಡಿಸಿದ್ದಾರೆ. ಟೆಂಡರ್ ದಾರನನ್ನು ಹಿಡಿದುಕೊಟ್ಟ ಸರ್ಕಾರಿ ಅಧಿಕಾರಿಯ ಈ ಒಂದು ಪ್ರಕರಣ ವಿಶೇಷವಾಗಿ ಕಂಡು ಬಂದಿದೆ
ಟೆಂಡರ್‌ದಾರನೊಬ್ಬ ಲಂಚ ಕೊಡುವ ಆಮಿಷವೊಡ್ಡುತ್ತಿದ್ದಾನೆ ಎಂದು ಸರ್ಕಾರಿ ಅಧಿಕಾರಿಯೇ ಲೋಕಾಯುಕ್ತರಿಗೆ ದೂರನ್ನು ನೀಡಿದ್ದಾರೆ.ಈ ಒಂದು ದೂರು ಬರುತ್ತಿದ್ದಂತೆ ಕಾರ್ಯಾಚರಣೆ ಮಾಡಿದ ಲೋಕಾಯುಕ್ತ ಪೊಲೀಸರು ಟೆಂಡರ್‌ದಾರನನ್ನು ಲೋಕಾಯುಕ್ತ ಬಲೆಗೆ ಹಾಕಿದ್ದಾರೆ.
ಈ ಒಂದು ಅಪರೂಪದ ಪ್ರಕರಣ ಹಾವೇರಿ ಯಲ್ಲಿ ನಡೆದಿದೆ.ಜಿಲ್ಲೆಯ ಗುತ್ತಲದ ಗುರುಕೃಪಾ ಎಂಟರ್‌ಪ್ರೈಸಸ್ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್ ಬಂಧಿತ ಟೆಂಡರ್‌ದಾರ ನಾದವರಾಗಿ ದ್ದಾರೆ.ಇವರ ವಿರುದ್ಧ ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್ ಹೆಗಡೆ ದೂರನ್ನು ಕೊಟ್ಟಿದ್ದರು.
ಹಾವೇರಿ ತಾಲ್ಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್‌ನಲ್ಲಿ ಶರಣಪ್ಪ ಅವರು ಈ ಟೆಂಡರ್ ನನಗೇ ಸಿಗುವಂತೆ ಮಾಡಿದ್ದಲ್ಲಿ ಟೆಂಡರ್ ಮೊತ್ತದ ಶೇ 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾ ಯಿಸಿ ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರಂತೆ
ಹೀಗಾಗಿ ಈ ಒಂದು ವಿಚಾರ ಕುರಿತಂತೆ ಇಒ ಭರತ್ ಹೆಗಡೆ ಲೋಕಾಯುಕ್ತರಿಗೆ ದೂರನ್ನು ನೀಡಿದ್ದರು.₹2 ಲಕ್ಷವನ್ನು ಮುಂಗಡವಾಗಿ ನೀಡಲು ಭರವಸೆ ನೀಡಿ ನಗರದ ಖಾಸಗಿ ಹೋಟೆಲ್‌ನಲ್ಲಿ ₹90 ಸಾವಿರ ಲಂಚ ಕೊಡುತ್ತಿದ್ದ ವೇಳೆಯೆ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸರ್ಕಾರಿ ಅಧಿಕಾರಿ ಲಂಚ ಮುಟ್ಟದೆ ಲಂಚ ಕೊಡಲು ಬಂದವನನ್ನೇ ಹಿಡಿದುಕೊಟ್ಟಿದ್ದಾರೆ. ಲೋಕಾಯುಕ್ತ ಪ್ರಕರಣಗಳಲ್ಲಿಯೇ ಈ ಒಂದು ಘಟನೆ ಅಪರೂಪ ಘಟನೆ ಎನಿಸಿದೆ. ಇದನ್ನು ರಿವರ್ಸ್ ಟ್ರ್ಯಾಪ್ ಎನ್ನುತ್ತೇವೆ ಎಂದು ಲೋಕಾ ಯುಕ್ತ ಅಧಿಕಾರಿಗಳು ಹೇಳಿದ್ದು
ಸಧ್ಯ ಗುತ್ತಿಗೆ ದಾರನನ್ನು ವಶಕ್ಕೆ ತಗೆದುಕೊಂಡಿ ರುವ ಲೋಕಾಯುಕ್ತ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹಾವೇರಿ…..