ನವದೆಹಲಿ –
ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ.ಹೌದು ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಶೀಘ್ರದಲ್ಲೇ ಸರ್ಕಾರದಿಂದ ಈ ಕುರಿತಂತೆ ಆದೇಶದೊಂದಿಗೆ ಮಾಹಿತಿ ಸಿಗಲಿದೆ
ಕೇಂದ್ರ ಸರ್ಕಾರವು ಈ ತಿಂಗಳು ಉದ್ಯೋಗಿಗ ಳಿಗೆ ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಲಿದೆ. ಫಿಟ್ಮೆಂಟ್ ಫ್ಯಾಕ್ಟರ್ ಪರಿಷ್ಕರಣೆಗಾಗಿ ದೀರ್ಘ ಕಾಲದಿಂದ ಕಾಯುತ್ತಿರುವ ಉದ್ಯೋಗಿಗಳಿಗೆ ಇದು ನಿಜವಾಗಿಯೂ ಒಳ್ಳೆಯ ಸುದ್ದಿಯಾಗಿದ್ದು ಫಿಟ್ ಮೆಂಟ್ ಅಂಶವು ಎಷ್ಟು ಪ್ರತಿಶತದಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಕುರಿತಂತೆ ನೋಡೊದಾದರೆ
ಮೂಲ ವೇತನದೊಂದಿಗೆ ಬಹುಸಂಖ್ಯೆ ನೌಕರರ ಸಂಘಗಳು ತಮ್ಮ ವೇತನದಲ್ಲಿನ ಫಿಟ್ಮೆಂಟ್ ಅಂಶವನ್ನು ಪರಿಷ್ಕರಿಸಬೇಕೆಂದು ದೀರ್ಘಕಾಲ ದಿಂದ ಒತ್ತಾಯಿಸುತ್ತಿವೆ. ಫಿಟ್ ಮೆಂಟ್ ಫ್ಯಾಕ್ಟರ್ ಒಂದು ಸಾಮಾನ್ಯ ಮೌಲ್ಯವಾಗಿದೆ.ಪ್ರಸ್ತುತ ಉದ್ಯೋಗಿಗಳ ಒಟ್ಟು ವೇತನವನ್ನ ಪಡೆಯಲು ಅದನ್ನ ಮೂಲ ವೇತನದೊಂದಿಗೆ ಗುಣಿಸಲಾ ಗುತ್ತದೆ.
3.68 ಪಟ್ಟು ಬೇಡಿಕೆ ಗೆ ಪಟ್ಟು ಹಿಡಿದಿದ್ದು ಕೇಂದ್ರ ಸರ್ಕಾರಿ ನೌಕರರ ಎಲ್ಲಾ ಗುಂಪುಗಳಿಗೆಸಾಮಾನ್ಯ ಫಿಟ್ಮೆಂಟ್ ಪ್ರಯೋಜನವು ಪ್ರಸ್ತುತ 2.57 ರಷ್ಟಿದೆ ಪ್ರಸ್ತುತ ಯಾರಾದರೂ 4200 ರೂ.ಗಳ ಗ್ರೇಡ್ ಪೇನಲ್ಲಿ 15,500 ರೂಪಾಯಿಗಳ ಮೂಲ ವೇತನವನ್ನ ಪಡೆಯುತ್ತಿದ್ದರೆ ಅವರ ಒಟ್ಟು ವೇತನ 15,500×2.57 = 39,835 ರೂಪಾಯಿ ಆದಾಗ್ಯೂ 7ನೇ ವೇತನ ಆಯೋಗದ ಶಿಫಾರಸ್ಸಿ ನಂತೆ, ಫಿಟ್ಮೆಂಟ್ ಅಂಶವನ್ನ 2.57ರಿಂದ 3.68 ಪಟ್ಟು ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಿ ನೌಕರ ರು ಒತ್ತಾಯಿಸುತ್ತಿದ್ದಾರೆ.
ಫಿಟ್ಮೆಂಟ್ ಅಂಶವನ್ನು ಹೆಚ್ಚಿಸಿದರೆ ಅದು ಸರ್ಕಾರಿ ನೌಕರರ ಎಲ್ಲಾ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ.ವೇತನ ಹೆಚ್ಚಳವು ಎಷ್ಟರ ಮಟ್ಟಿಗೆ ಇರುತ್ತದೆಯೆಂದ್ರೆ, ಕೇಂದ್ರವು ಫಿಟ್ಮೆಂಟ್ ಅಂಶ ವನ್ನ 3 ಪಟ್ಟು ಹೆಚ್ಚಿಸಿದ್ರೆ, ಭತ್ಯೆಗಳನ್ನ ಹೊರತುಪ ಡಿಸಿದ ವೇತನವು 18,000 X 2.57 = 46,260 ರೂಪಾಯಿ.
ಉದ್ಯೋಗಿಗಳ ಬೇಡಿಕೆಯಂತೆ ಫಿಟ್ ಮೆಂಟ್ ಹೆಚ್ಚಿಸಿದರೆ, ಆಗ ಸಂಬಳವು 26000 X 3.68 = ರೂಪಾಯಿ. ಇದು 95,680 ಆಗಿರುತ್ತದೆ. ಕೇಂದ್ರವು 3 ಪಟ್ಟು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಳಕ್ಕೆ ಒಪ್ಪಿದ್ರೆ, ಆಗ ಸಂಬಳವು 21000 X 3 = 63,000 ಆಗಿರುತ್ತದೆ.7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ನೌಕರರ ವೇತನವು ಅವರ ಮೂಲ ವೇತನ,ಫಿಟ್ಮೆಂಟ್ ಮತ್ತು ಭತ್ಯೆ ಗಳನ್ನು ಆಧರಿಸಿರುತ್ತದೆ 7ನೇ ವೇತನ ಆಯೋ ಗದ ಶಿಫಾರಸಿನಂತೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರವು ತನ್ನ ನೌಕರರ ತುಟ್ಟಿಭತ್ಯೆಯನ್ನ (ಡಿಎ) ಶೇ.34ರಿಂದ ಶೇ.38ಕ್ಕೆ ಹೆಚ್ಚಿಸಿತ್ತು.
ಇದರೊಂದಿಗೆ, ಉದ್ಯೋಗಿಗಳು ಜುಲೈ 1, 2022 ರಿಂದ ಕ್ರಮವಾಗಿ ಹೆಚ್ಚಿನ ಪ್ರಮಾಣದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನ ಪಡೆಯುತ್ತಿ ದ್ದಾರೆ ವರ್ಷಕ್ಕೆ ಎರಡು ಬಾರಿ ಪರಿಷ್ಕರಣೆ ಹೌದು ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ (ಡಿಆರ್) ಗಳನ್ನ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ.ಇದನ್ನು ಜನವರಿ 1 ರಿಂದ ಜುಲೈ 1ರ ಮಧ್ಯೆ ಪರಿಷ್ಕರಿಸಲಾಗುವುದು. ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ಕಳೆದ ಏರಿಕೆ ಯಿಂದ ಪ್ರಯೋಜನ ಪಡೆದಿದ್ದಾರೆ.
ಡಿಎಯಲ್ಲಿ ಶೇಕಡಾ 4ರಷ್ಟು ಹೆಚ್ಚಳದೊಂದಿಗೆ, ಇದು ಪ್ರಸ್ತುತ ಶೇಕಡಾ 38 ರಷ್ಟಿದೆ. ಇದಕ್ಕೂ ಮೊದಲು ಮಾರ್ಚ್ನಲ್ಲಿ, ಸರ್ಕಾರವು 7ನೇ ವೇತನ ಆಯೋಗದ ಶಿಫಾರಸಿನ ಮೇರೆಗೆ ಡಿಎಯನ್ನ ಶೇಕಡಾ 3ರಷ್ಟು ಹೆಚ್ಚಿಸಿತ್ತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..