ಬೀದರ್ –
ಜೈಲಿನಲ್ಲಿಯೇ ಖೈದಿಯೊಬ್ಬರು ಸಾವಿಗೀಡಾದ ಘಟನೆ ಬೀದರ್ ನಲ್ಲಿ ನಡೆದಿದೆ. ಹುಮನಾಬಾದ್ ಜೈಲಿನಲ್ಲಿ ಈ ಒಂದು ಘಟನೆ ನಡೆದಿದೆ.
ಮೃತ ಖೈದಿ ಜಾವಿದ ಖಾನ್ ತಂದೆ ಪರವೇಜ್ ಖಾನ್ (40)ಸಾವಿಗೀಡವಾರಾಗಿದ್ದಾರೆ. ಸರ್ಕಾರಿ ನೌಕರನ ಮೇಲೆ ಹಲ್ಲೆ ಗೆ ಯತ್ನ ದ ಹಿನ್ನಲೆ ಐಪಿಸಿ ಸೆಕ್ಷನ್ 353,332,307 ಅಡಿಯಲ್ಲಿ ಜೈಲು ಸೇರಿದ್ದನು. ಹೃದಯಾಘಾತದಿಂದ ಹುಮನಾಬಾದ್ ಜೈಲಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಎಂಬ ಮಾತುಗಳು ಕೇಳಿ ಬರುತ್ತಿದ್ದು ಮರಣೋತ್ತರ ಪರೀಕ್ಷೆ ಗಾಗಿ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಶರೀರವನ್ನು ಶಿಪ್ಟ್ ಮಾಡಲಾಗಿದ್ದು ಇನ್ನೂ ಸ್ಳಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇವರೊಂದಿಗೆ ಸ್ಥಳಕ್ಕೆ ಬೀದರ್ ಜೈಲರ್ ಶರಣಬಸಪ್ಪಾ ಭೇಟಿ ಪರಿಶೀಲನೆ ಮಾಡಿದ್ದಾರೆ.