This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Sports News

ಸರ್ಕಾರಿ ನೌಕರರಿಗೆ ಮುಜುಗರ ತಂದಿಟ್ಟ ಆದೇಶ ಎಡವಟ್ಟು ಆದೇಶ ಮಾಡಿ ಮತ್ತೊಂದು ದೊಡ್ಡ ಎಡವಟ್ಟು ತಂದಿಟ್ಟ ಆದೇಶ…..

WhatsApp Group Join Now
Telegram Group Join Now

ಬೆಂಗಳೂರು –

ಸರಕಾರಿ ಸಿಬ್ಬಂದಿಯ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿ ಸುವುದು ಸಾಮಾನ್ಯ ಆಗಾಗ ಬೀದಿಗಿಳಿದು ಪ್ರತಿಭಟನೆ ಯನ್ನೂ ಮಾಡುವುದಿದೆ.ಈ ಪ್ರತಿಭಟನೆಗಳನ್ನು ಸರಕಾರ ಗಂಭೀರವಾಗಿ ಸ್ವೀಕರಿಸಿದ ಉದಾಹರಣೆಗಳೂ ಕಡಿಮೆಯೆ ಆದರೆ ಇತ್ತೀಚೆಗೆ ಒಂದು ವಿಶೇಷ ನಡೆಯಿತು.ಹೌದು ಸರಕಾರಿ ನೌಕರರ ಮುಖಂಡರು ಎಂದು ಕರೆಸಿಕೊಳ್ಳುವ ಕೆಲವರು ಒಂದು ಮನವಿಯನ್ನು ಸರಕಾರದ ಮುಂದಿಟ್ಟರು

ಸರಕಾರಿ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಫೋಟೊ ತೆಗೆಯುವುದು ವೀಡಿಯೊ ಚಿತ್ರೀಕರಣ ಮಾಡು ವುದು ಇತ್ಯಾದಿಗಳು ನಡೆಯುತ್ತಿವೆ.ಇದರಿಂದ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ.ಆದುದರಿಂದ ಇವುಗಳಿಗೆ ನಿಷೇಧ ಹೇರಬೇಕು ಇದು ಮನವಿಯ ಸಾರಾಂಶ ವಿಶೇಷವೆಂದರೆ ಹೀಗೊಂದು ಬೇಡಿಕೆಯನ್ನು ಮುಂದಿಟ್ಟದ್ದೇ ತಡ ಸರಕಾರ ತಕ್ಷಣ ಅದಕ್ಕೆ ತನ್ನ ರುಜು ವನ್ನು ಹಾಕಿತು ಸರಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ವೀಡಿಯೊ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾ ಯಿತು ಎನ್ನುವ ಆದೇಶವನ್ನು ರಾತ್ರೋರಾತ್ರಿ ಹೊರಡಿಸಿತು. ಮಾಧ್ಯಮಗಳಲ್ಲಿ ಈ ಆದೇಶ ಮುಖಪುಟ ಸುದ್ದಿಯಾಗುತ್ತಿ ದ್ದಂತೆಯೇ ಇದಕ್ಕೆ ಕೆಲವು ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದವು.ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ರಕ್ಷಿಸುವುದಕ್ಕಾಗಿಯೇ ಸರಕಾರ ಈ ಆದೇಶವನ್ನು ಹೊರಡಿಸಿದೆ ಎಂದು ಸಾಮಾ ಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆರೋಪಿಸಿದರು. ಯಾವಾಗ ಜನರು ಇದರ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡತೊಡಗಿದರೋ ಆದೇಶ ನೀಡಿದ ಮರುದಿನವೇ ಆ ಆದೇಶವನ್ನು ಹಿಂದೆಗೆದುಕೊಳ್ಳುವ ಹೊಸದೊಂದು ಆದೇಶವನ್ನು ಸರಕಾರ ಹೊರಡಿಸಿತು.ಈ ಮೂಲಕ ಅಳಿದುಳಿದ ಮಾನವನ್ನು ಉಳಿಸಿಕೊಂಡಿತು.

ಸರಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ವೀಡಿಯೊ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎನ್ನುವ ಬೇಡಿಕೆಯನ್ನು ಸರಕಾರಿ ನೌಕರರ ಸಂಘ ಮುಂದಿಡುವು ದಕ್ಕೆ ಕಾರಣವಿದೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಸಿಬ್ಬಂದಿ ಯು ಕಚೇರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಲಂಚ ಪಡೆ ಯುವುದನ್ನು ಅಥವಾ ಸಾರ್ವಜನಿಕರೊಂದಿಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದನ್ನು ಕೆಲವು ಸಂಘಟನೆಗಳು ವೀಡಿಯೊ ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುತ್ತಿ ದ್ದವು.ಈ ಹಿಂದೆಲ್ಲಾ ತಾನು ಮಾಡಿದ್ದೇ ಆಡಳಿತ ಎಂದು ವರ್ತಿಸುತ್ತಿದ್ದ ಸರಕಾರಿ ಸಿಬ್ಬಂದಿಗೆ ಇದು ನುಂಗಲಾರದ ತುತ್ತಾಗಿತ್ತು.ಸರಕಾರಿ ಸಿಬ್ಬಂದಿಯ ಅಕ್ರಮಗಳು ಹೀಗೆ ವೀಡಿಯೊ ಚಿತ್ರೀಕರಣಗೊಂಡ ಕೆಲವೇ ಕ್ಷಣಗಳಲ್ಲಿ ಸಂಬಂಧಪಟ್ಟವರನ್ನು ತಲುಪುತ್ತಿತ್ತು.ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಮೇಲಾಧಿಕಾರಿ ಗಳಿಗೆ ನಿರ್ಮಾಣವಾಗಿ ಬಿಡುತ್ತಿತ್ತು.ಕೆಲವೊಮ್ಮೆ ಸಾರ್ವಜ ನಿಕರೂ ಸರಕಾರಿ ಸಿಬ್ಬಂದಿಯ ಇಂತಹ ಹಗರಣಗಳನ್ನು ವೀಡಿಯೊ ಚಿತ್ರೀಕರಣದ ಮೂಲಕ ಸಾರ್ವಜನಿಕಗೊಳಿ ಸುತ್ತಿದ್ದರು.

ಮೇಲಧಿಕಾರಿಗಳು ಕ್ರಮ ತೆಗೆದುಕೊಳ್ಳಲಿ ಬಿಡಲಿ ಆದರೆ ಸಾರ್ವಜನಿಕವಾಗಿ ಇವರ ಮಾನ ಹರಾಜಾಗಿ ಪರಿಚಯ ಸ್ಥರ ಮುಂದೆ ತಲೆಯೆತ್ತಲಾಗದ ಸ್ಥಿತಿ ನಿರ್ಮಾಣವಾಗು ತ್ತಿತ್ತು.ಇಂತಹ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವಾಗ ಸರಕಾರಿ ನೌಕರರ ಸಂಘ ಹೊಣೆಗಾರಿಕೆಯನ್ನು ಪ್ರದರ್ಶಿ ಸಬೇಕಾಗಿತ್ತು.ಲಂಚ ಸ್ವೀಕರಿಸಿದ ಸಿಬ್ಬಂದಿಯನ್ನು ಗುರು ತಿಸಿ ಅವರಿಗೆ ಛೀಮಾರಿ ಹಾಕಬೇಕಾದ ಸಂಘ ಭ್ರಷ್ಟರ ಜೊತೆಗೆ ನಿಲ್ಲುವ ಮೂಲಕ ಎಲ್ಲ ಸರಕಾರಿ ನೌಕರರಿಗೆ ಮುಜುಗರವನ್ನು ಸೃಷ್ಟಿಸಿದೆ.ಸರಕಾರಿ ನೌಕರರೆಲ್ಲರೂ ಭ್ರಷ್ಟರಲ್ಲ ಸರಕಾರಿ ವೇತನವನ್ನೇ ನಂಬಿ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಡುವ ದೊಡ್ಡ ಸಂಖ್ಯೆಯ ಸಿಬ್ಬಂದಿ ಸರಕಾರಿ ಕಚೇರಿಯೊಳಗಿದ್ದಾರೆ.ಸರ್ವ ನೌಕರರ ನ್ನು ಪ್ರತಿನಿಧಿಸುವ ಸಂಘ ಭ್ರಷ್ಟರನ್ನು ಸಮರ್ಥಿಸಲು ಮುಂದಾಗಿ ಸರಕಾರಿ ಕಚೇರಿಯಲ್ಲಿರುವ ಪ್ರಾಮಾಣಿಕ ನೌಕರರ ಮುಖಕ್ಕೂ ಆ ಕಳಂಕವನ್ನು ಬಳಿದಿದೆ.

ವೀಡಿಯೊ ಚಿತ್ರೀಕರಣಕ್ಕೆ ಸಂಬಂಧಿಸಿ ಸಂಘವು ಮಹಿಳಾ ನೌಕರರನ್ನು ಗುರಾಣಿಯಾಗಿ ಬಳಸಿದೆ.ಸಾರ್ವಜನಿಕರು ಸರಕಾರಿ ಕಚೇರಿಗಳನ್ನು ಪ್ರವೇಶಿಸಿ ಅನಧಿಕೃತವಾಗಿ ಫೋಟೊ ವೀಡಿಯೊ ಚಿತ್ರೀಕರಿಸುತ್ತಿದ್ದಾರೆ.ಮುಖ್ಯವಾಗಿ ಮಹಿಳಾ ನೌಕರರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದಾರೆ ಎನ್ನುವುದು ಸಂಘದ ಆರೋಪ.ನಿಜಕ್ಕೂ ಸಾರ್ವಜನಿಕರು ಮಹಿಳೆಯರ ವೀಡಿಯೊಗಳನ್ನು ಅಕ್ರಮವಾಗಿ ಚಿತ್ರೀಕರಣ ಮಾಡಿರುವುದೇ ಆಗಿದ್ದರೆ ಖಂಡಿತವಾಗಿಯೂ ಅವರ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕು.ಯಾವುದೇ ಮಹಿಳೆಯರನ್ನಾಗಲಿ ಇನ್ನಿತರರನ್ನಾಗಲಿ ಅವರ ಅನುಮತಿ ಇಲ್ಲದೆ ಚಿತ್ರೀಕರಣ ಮಾಡುವ ಅಧಿಕಾರ ಯಾರಿಗೂ ಇಲ್ಲ. ಆದರೆ ಅಂತಹ ಎಷ್ಟು ಪ್ರಕರಣಗಳು ನಡೆದಿವೆ ಈ ಬಗ್ಗೆ ಎಷ್ಟು ದೂರುಗಳು ದಾಖಲಾಗಿವೆ ಎನ್ನುವುದನ್ನು ಮೊದಲು ನೌಕರರ ಸಂಘ ಬಹಿರಂಗಪಡಿಸಬೇಕು.ಇದೇ ಸಂದರ್ಭ ದಲ್ಲಿ ಸರಕಾರಿ ಕಚೇರಿಗಳ ವೀಡಿಯೊ ಚಿತ್ರೀಕರಣ ಮಾಡಲು ಅದೇನು ಪ್ರಾಚ್ಯ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳಲ್ಲ ಸರಕಾರಿ ಕಚೇರಿಗಳ ಸ್ಥಿತಿ ಹೇಗಿರುತ್ತದೆಯೆ ನ್ನುವುದನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವೂ ಇಲ್ಲ. ಇಲ್ಲಿ ವೀಡಿಯೊ ಚಿತ್ರೀಕರಣ ಮಾಡುವಂತಹ ಸನ್ನಿವೇಶ ಸೃಷ್ಟಿಯಾದರೆ, ಅಂತಹ ಸನ್ನಿವೇಶಕ್ಕೆ ಕಾರಣರಾದವರನ್ನು ತಿದ್ದುವುದು ಅವರಿಗೆ ತಿಳಿ ಹೇಳಿ ಸರಕಾರಿ ಕಚೇರಿಗಳ ಬಗೆಗಿರುವ ಪೂರ್ವಾಗ್ರಹಗಳನ್ನು ನಿವಾರಿಸುವುದು ನೌಕರರ ಸಂಘದ ಕರ್ತವ್ಯ ಸಂಘವೇ ಅವರನ್ನು ಸಮರ್ಥಿ ಸಲು ನಿಂತರೆ ಭ್ರಷ್ಟರು ಇನ್ನಷ್ಟು ಕೊಬ್ಬಿ ಬಿಡಬಹುದು.

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಮರುದಿನವೇ ಆದೇಶವನ್ನು ಹಿಂದೆಗೆದುಕೊಂಡಿದೆ.ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ ಎನ್ನುವ ಮಾತುಗಳನ್ನು ಮುಖ್ಯಮಂತ್ರಿಯ ವರು ಆಡಿದ್ದಾರೆ.ಇಂತಹದೊಂದು ಮಹತ್ವದ ಆದೇಶ ಮುಖ್ಯಮಂತ್ರಿಯ ಗಮನಕ್ಕೆ ತಾರದೇ ಹೊರಡಿಸಲಾಗಿದೆ ಎನ್ನುವುದೇ ಆತಂಕಕಾರಿಯಾಗಿದೆ.ಹಾಗಾದರೆ ಈ ತರಾತು ರಿಯ ಆದೇಶಕ್ಕೆ ಸಂಬಂಧಿಸಿ ಯಾರ ಮೇಲೆ ಕ್ರಮ ತೆಗೆದು ಕೊಳ್ಳಲಾಗಿದೆ ಎನ್ನುವುದನ್ನಾದರೂಮುಖ್ಯಮಂತ್ರಿಯವರು ಬಹಿರಂಗಪಡಿಸಬೇಕು.ಇದೇ ಸಂದರ್ಭದಲ್ಲಿ ಆದೇಶವನ್ನು ಹಿಂದೆಗೆಯುವುದರಿಂದಷ್ಟೇ ಮುಖ್ಯಮಂತ್ರಿಯವರ ಹೊಣೆ ಗಾರಿಕೆ ಮುಗಿಯುವುದಿಲ್ಲ.ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿಗಳನ್ನು ಅಳವಡಿಸಿದರೆ ಸಾರ್ವ ಜನಿಕರು ವೀಡಿಯೊ ಚಿತ್ರೀಕರಣ ಮಾಡುವ ಅಗತ್ಯವೇ ಬೀಳುವುದಿಲ್ಲ.ಕನಿಷ್ಟ ಆ ಸಿಸಿಟಿವಿಗೆ ಹೆದರಿಯಾದರೂ ಕಚೇರಿಗಳಲ್ಲಿ ಅಕ್ರಮಗಳು ಇಳಿಮುಖವಾಗಬಹುದು. ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಸಿಬ್ಬಂದಿ ತಮ್ಮ ವರ್ತನೆಗೆ ಕಡಿವಾಣ ಹಾಕಿಕೊಳ್ಳಬಹುದು.ಇದೇ ಸಂದರ್ಭದಲ್ಲಿ ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಅದೇ ಸಿಸಿಟಿವಿಯ ದೃಶ್ಯಗಳ ಆಧಾರದಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಮುಖ್ಯಮಂತ್ರಿಯವರು ಈ ನಿಟ್ಟಿನಲ್ಲಿ ಹೊಸತೊಂದು ಆದೇಶ ಹೊರಡಿಸಿದಾಗ ಮಾತ್ರ ಅವರ ಪಾರದರ್ಶಕ ಆಡಳಿತದ ಹೇಳಿಕೆಗೆ ಅರ್ಥ ಬರುತ್ತದೆ.


Google News

 

 

WhatsApp Group Join Now
Telegram Group Join Now
Suddi Sante Desk