ವಿಜಯಪುರ –
ರಾಜ್ಯ ಸರ್ಕಾರಿ ನೌಕರರ ಚುನಾವಣೆ ವಿರುದ್ದ ಸಿಡಿದೆದ್ದ ನೌಕರರು – ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಿ ಬೈಲಾದಂತೆ ಚುನಾವಣೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ನೌಕರರು ಹೌದು
ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಚುನಾವಣೆಯ ಮುನ್ನವೇ ರಾಜ್ಯ ಸರ್ಕಾರಿ ನೌಕರರು ಅಸಮಧಾನವನ್ನು ಹೊರಹಾಕಿದ್ದಾರೆ. ಹೌದು 2024-2029 ರ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಚುನಾವಣೆಯನ್ನು ನಡೆಸಲು ಮುಂದಾಗಿದ್ದು ಈ ಒಂದು ವಿಚಾರದಲ್ಲಿ ರಾಜ್ಯದ ಸರ್ಕಾರಿ ನೌಕರರು ಕೆಲ ವಿಚಾರಗಳ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸರಕಾರಿ ನೌಕರರ ಸಂಘದ ಚುಣಾವಣೆಯ ಕರಡು ಮತದಾರ ಪಟ್ಟಿಯನ್ನು NGO ಬೈಲಾ 47ರ ಅನುಸಾರ ಆಯಾ ಹೊಸ ಕಂದಾಯ ತಾಲ್ಲೂಕುವಾರು ಚುಣಾವಣೆ ಹಾಗೂ ನೌಕರ ಮತದಾರರ ಪಟ್ಟಿಯಲ್ಲಿ ನೌಕರರ ಹೆಸರು ಪದನಾಮ ಇಲಾಖೆಯ ಹೆಸರು ಮೊಬೈಲ್ ಸಂಖ್ಯೆಯೊಂದಿಗೆ ಮಾಡಬೇಕು.
ಇದನ್ನು ಮಾಡದಿರುವುದನ್ನು ಖಂಡಿಸಿ ಮತ್ತು ಪ್ರಕಟಣೆ ಮಾಡದೆ ಇರುವುದನ್ಬು ಖಂಡಿಸಿ ಸದರಿ NGO ಚುಣಾವಣೆಯು ಬೈಲಾ ನಿಯಮದ ಪ್ರಕಾರವೇ ನಡೆಸಬೇಕು ಎಂದು ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಳಿಗೆ ಮನವಿಯನ್ನು ನೀಡಲಾಯಿತು.ಜಿಲ್ಲಾಧಿಕಾರಿಗಳಿಗೆ ಹಾಗೂ NGO ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಖಜಾಂಚಿ ಗಳಿಗೆ ಆಕ್ಷೇಪಣೆ ಪತ್ರ ಸಲ್ಲಿಸಲಾಯಿತು.
ಚುನಾವಣೆಯ ಮುನ್ನವೇ ಈ ಒಂದು ವಿಚಾರ ದಲ್ಲಿ ರಾಜ್ಯದ ಹಲವೆಡೆ ಸಂಘಟನೆಯ ಸದಸ್ಯ ರಿಂದ ಅಸಮಧಾನ ಕೇಳಿ ಬಂದಿದ್ದು ಈಗಾಗಲೇ ಈ ಒಂದು ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಯನ್ನು ನೀಡಿದ್ದು ಸೂಕ್ತ ಕ್ರಮಕ್ಕಾಗಿ ಒತ್ತಾಯ ವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..