ಬೆಂಗಳೂರು –
ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿನತ್ತ ಹೊರಟ ಶಿಕ್ಷಕರು – ಪ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಶಿಕ್ಷಕರ ಶಕ್ತಿ ಪ್ರದರ್ಶನ – ಶಿಕ್ಷಕರನ್ನು ಬೀದಿಗಿಳಿಸಿದ ಸರ್ಕಾರ
ಶಿಕ್ಷಕರ ಬೇಡಿಕೆಗಳ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ನೀಡಿರುವ ಬೆಂಗಳೂರು ಚಲೋ ಆಗಸ್ಟ್ 12 ರಿಂದ ನಡೆಯ ಲಿದೆ.ಇದಕ್ಕಾಗಿ ಎಲ್ಲಾ ಸಿದ್ದತೆಗಳು ಮುಕ್ತಾಯವಾ ಗಿದ್ದು ಇನ್ನೂ ಈ ಒಂದು ಹೋರಾಟದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಬೆಂಗಳೂರಿನತ್ತ ಹೊರಟಿದ್ದಾರೆ.
ಹೌದು PST ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯದ ಕುರಿತಂತೆ ಈ ಒಂದು ಹೋರಾಟಕ್ಕೆ ಕರೆ ನೀಡ ಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಈಗಾಗಲೇ ಶಿಕ್ಷಕರು ಬೆಂಗಳೂರಿನತ್ತ ತಮ್ಮ ತಮ್ಮ ಊರುಗಳಿಂದ ಹೊರಟಿದ್ದು ಮುಖ ಮಾಡಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಈ ಒಂದು ಬೆಂಗಳೂರು ಚಲೋ ಗೆ ಕರೆ ನೀಡಿದ್ದು ಇದರಿಂದಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕ ಬಂಧುಗಳು ದೊಡ್ಡ ಪ್ರಮಾಣದಲ್ಲಿ ತೆರಳು ತ್ತಿದ್ದಾರೆ.
ಇನ್ನೂ ಇತ್ತ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿನ ಪ್ರತಿಭಟನೆಗೆ ಎಲ್ಲಾ ಸಿದ್ದತೆಗಳನ್ನು ಕೂಡಾ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..