ಹುಬ್ಬಳ್ಳಿ
ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರು ಕುಡುಕರಿಗೆ ಶಾಕ್ ನೀಡಿದ್ದಾರೆ.ಹೌದು ಸರಾಯಿ ಕುಡಿದು ತಿರುಗಾಡುತ್ತಿದ್ದವರಿಗೆ ನಶೆ ಇಳಿಸಿದ್ದಾರೆ ಸಂಚಾರಿ ಪೊಲೀಸರು.

ಹುಬ್ಬಳ್ಳಿಯಲ್ಲಿ ಪೂರ್ವ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಎಮ್ ಸಿ ಕಾಡದೇವರ ಮಠ ನೇತೃತ್ವ ದಲ್ಲಿ ರಾತ್ರಿ ಕಾರ್ಯಾಚರಣೆ ಮಾಡಿ ಇಪ್ಪತ್ತಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ

ಹೌದು ತಡರಾತ್ರಿ ವರೆಗೂ ನಗರದಲ್ಲಿ ಕಂಠಪೂರ್ತಿ ಕುಡಿದು ವಾಹನದಲ್ಲಿ ಪ್ರಯಾಣಿಸುತ್ತಿದ್ದವರಿಗೆ ಶಾಕ್ ನೀಡಿದ್ದಾರೆ ಸಂಚಾರಿ ಪೊಲೀಸರು

ನಗರದ ಚನ್ನಮ್ಮ ವೃತ್ತ ಸೇರಿದಂತೆ ಹಲವು ಕಡೆಗಳ ಲ್ಲಿ ಕಾರ್ಯಾಚರಣೆ ನಡೆಸಿದ ಪೂರ್ವ ಸಂಚಾರಿ ಪೊಲೀಸರು ಕುಡುಕರಿಗೆ ಶಾಕ್ ನೀಡಿ ನಶೆ ಇಳಿಸಿ ದರು

ಇಪ್ಪತ್ತಕ್ಕೂ ಹೆಚ್ಚು ಡಿಡಿ ಕೇಸ್ ಪತ್ತೆಯಾಗಿದ್ದು ರಾತ್ರಿ ಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಈ ಒಂದು ಕೇಸ್ ಗಳನ್ನು ಪತ್ತೆ ಮಾಡಿದ್ದಾರೆ

ಸಧ್ಯ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೂರ್ವ ಸಂಚಾರಿ ಪೊಲೀಸರು ಮುಂದಿನ ಕ್ರಮವ ನ್ನು ಕೈಗೊಂಡಿದ್ದಾರೆ ಸಂಚಾರಿ ಪೊಲೀಸರು

ಇನ್ಸ್ಪೆಕ್ಟರ್ ಗೆ ಸಂಚಾರಿ ಪೊಲೀಸ್ ಠಾಣೆಯ ASI ಚನ್ನಪ್ಪಗೌಡರ, ಮತ್ತು ಸಿಬ್ಬಂದಿ ಗಳಾದ ಪ್ರಶಾಂತ್ ಕುದುರಿ, ಜಗದೀಶ್ ಮ್ಯಾಗಿನಮನಿ, ಶಿರಿಯಮ್ಮ ನವರ,ಬಿರಾದಾರ,ವಿ ಟಿ ಗಾಣಿಗೇರ,ಗುರು ಸ್ವಾದಿ, ಹೆಚ್ ಸಿ ಸವದಿ ಸೇರಿದಂತೆ ಹಲವು ಸಿಬ್ಬಂದಿ ಗಳು ಪಾಲ್ಗೊಂಡಿದ್ದರು