ತುಮಕೂರು –
ಲೋಡ್ ಗಟ್ಟಲೆ ಔಷಧಿ ಮತ್ತು ಮಾತ್ರೆಗಳು ಪತ್ತೆ ಯಾದ ಘಟನೆ ತುಮಕೂರು ಜಿಲ್ಲೆಯಲ್ಲಿ ಕಂಡು ಬಂದಿದೆ ಹೌದು ಕುಣಿಗಲ್ ತಾಲ್ಲೂಕಿನ ತೆಪ್ಪೆ ಸಂದ್ರ ಗಿರಿನಗರದ ಬಳಿ ಇವುಗಳು ಪತ್ತೆಯಾಗಿವೆ ಗ್ರಾಮದ ರೈತ ರಾಜು ಎಂಬುವರ ಜಮೀನಿನ ಹಳ್ಳದಲ್ಲಿ ಪತ್ತೆಯಾಗಿವೆ.ಮಾತ್ರೆಗಳ ರಾಶಿನೋಡಿ ಬೆಚ್ಚಿ ಬಿದ್ದಿದ್ದಾರೆ ಗ್ರಾಮಸ್ಥರು.
ಕೂಡಲೇ ತಾಲ್ಲೂಕು ಆರೋಗ್ಯಧಿಕಾರಿಗೆ ಮಾಹಿತಿ ನೀಡಿದ್ದಾರೆ ಗ್ರಾಮಸ್ಥರು.ಈ ಒಂದು ಮಾಹಿತಿ ಯನ್ನು ಗ್ರಾಮಸ್ಥರು ನೀಡುತ್ತಿದ್ದಂತೆ ಮಾಹಿತಿ ಮೆರಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ತಾಲ್ಲೂಕು ಆರೋಗ್ಯ ಅಧಿಕಾರಿಗಳು
ಕುಣಿಗಲ್ ಟಿಎಚ್ಒ ಡಾ. ಮರಿಯಪ್ಪ ನೇತೃತ್ವ ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಸರ್ಕಾರಿ ಆಸ್ಪತ್ರೆಗೆ ಸೇರಿದ ಮಾತ್ರೆಗಳಲ್ಲ ಎಂದು ಖಚಿತ ಪಡಿಸಿದರು ಟಿಎಚ್ಒ ಮರಿಯಪ್ಪ.ಅವಧಿ ಮುಗಿದ ಮಾತ್ರೆಗಳ ರಾಶಿ ಎಂದು ಸ್ಪಷ್ಟನೆ ನೀಡಿದ್ದಾರೆ.ಪೊಲೀಸರಿಗೆ ಹಾಗೂ ಔಷಧಿ ನಿಯಂತ್ರಕರಿಗೆ ದೂರನ್ನು ನೀಡಿದ್ದಾರೆ.ಮಾತ್ರೆಗಳ ಮೂಲ ಪತ್ತೆ ಹಚ್ಚುವಂತೆ ದೂರು ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ತುಮಕೂರು…..