ಹುಬ್ಬಳ್ಳಿ –
ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸಾವಿಗೀಡಾದ ಘಟನೆ ಕುಂದಗೋಳ ಬಳಿಯ ಶೇರೆವಾಡ ಟೋಲ್ ಪ್ಲಾಜಾ ಬಳಿ ನಡೆದಿದೆ.

ಎರಡು ಬೈಕ್ ಗಳ ನಡುವೆ ಈ ಒಂದು ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಮೂವರು ಬೈಕ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮುಖಾಮುಖಿ ಡಿಕ್ಕಿ ರಭಸಕ್ಕೆ ಬೈಕ್ ಗಳು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು ಗುರುತು ಸಿಗಲಾರದಷ್ಟು ನುಜ್ಜು ಗುಜ್ಜಾಗಿವೆ.

ಇನ್ನೂ ಬೈಕ್ ಅಪಘಾತದಲ್ಲಿ ಎರಡು ಬೈಕ್ ಗಳ ಸವಾರರು ಅಪಘಾತದ ರಭಸಕ್ಕೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಬಿದ್ದಿದ್ದಾರೆ.

ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಮತ್ತು ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.





















