ಬೆಂಗಳೂರು –
ಇಂದು ಖಗ್ರಾಸ ಚಂದ್ರಗ್ರಹಣ ಗೋಚರವಾಗ ಲಿದ್ದು ನಮ್ಮ ದೇಶದಲ್ಲೂ ಇದು ಕಂಡು ಬರಲಿದೆ ಹೌದು ಇನ್ನೂ ಈ ಒಂದು ಸಮಯದಲ್ಲಿ ಏನ್ ಮಾಡಬೇಕು ಏನ್ ಮಾಡಬಾರದು ಎಂಬ ಕುರಿತು ನೋಡೊದಾದರೆ ಖಗ್ರಾಸ ಚಂದ್ರಗ್ರಹಣ ಸಮಯದಲ್ಲಿ ಭಾರತದ ಎಲ್ಲೆಡೆ ಭಾಗಶಃ ಗ್ರಹಣ ಗೋಚರಿಸಲಿದ್ದು ಈ ವೇಳೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38 ಕ್ಕೆ, ಮಧ್ಯ ಕಾಲ 4.29 ಹಾಗೂ ಮೋಕ್ಷ ಕಾಲ 6.19 ಆಗಿದೆ. ಚಂದ್ರೋದಯ ಆಗುವುದು ಸಂಜೆ 5.59 ಕ್ಕೆ, ಈ ಹಿನ್ನೆಲೆ ಗ್ರಹಣ ಸ್ಪರ್ಶ ಹಾಗೂ ಮಧ್ಯಕಾಲದ ದರ್ಶನ ಸಿಗುವುದಿಲ್ಲ.ಮೋಕ್ಷ ಕಾಲ ಸಂಜೆ 6.19 ಆಗಿರುವುದರಿಂದ ಗ್ರಹಣದ ಕಡೆಯ 20 ನಿಮಿಷ ವೀಕ್ಷಣೆಗೆ ಸಿಗುತ್ತದೆ.ಗ್ರಹಣ ಹಿಡಿದ ಸ್ಥಿತಿಯಲ್ಲೇ ಚಂದ್ರೋದಯವಾಗಲಿದೆ.
ಕೆಲ ನಿಮಿಷದಲ್ಲಿ ಮುಗಿಯಲಿದೆ ಗ್ರಹಣದ ಅವಧಿ 3 ಗಂಟೆ 40 ನಿಮಿಷವಾಗಿದ್ದು ಕಣ್ಣಿಗೆ ಕಾಣುವುದು ಕೇವಲ 20 ನಿಮಿಷ ಮಾತ್ರ. ಗ್ರಹಣವು ಮೇಷ ರಾಶಿಯಲ್ಲಿ ಆಗುತ್ತಿದೆ. ಇದರಿಂದ ಕುಂಭ,ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿಯರಿಗೆ ಶುಭ ಫಲ.
ಮೇಷ, ಮಕರ, ಕನ್ಯಾ ಹಾಗೂ ವೃಷಭ ರಾಶಿಯ ವರಿಗೆ ಅಶುಭ ಫಲ.ಮೀನ, ಧನುಸ್ಸು,ತುಲಾ ಹಾಗೂ ಸಿಂಹ ರಾಶಿಯವರಿಗೆ ಮಿಶ್ರ ಫಲ ಇರುತ್ತದೆ ಈ ಸಾರಿಯ ಚಂದ್ರಗ್ರಹಣವು ದೇಶದ ಪೂರ್ವ ಭಾಗಗಳಲ್ಲಿ ಮಾತ್ರ ಸಂಪೂರ್ಣವಾಗಿ ಗೋಚರಿಸುತ್ತದೆ.ಇತರೆ ಸ್ಥಳಗಳಲ್ಲಿ ಭಾಗಶಃ ಗ್ರಹಣ ಇರುತ್ತದೆ.ಈ ಗ್ರಹಣವನ್ನು ಕೋಲ್ಕತ್ತಾ, ಸಿಲಿಗುರಿ,ಪಾಟ್ನಾ, ರಾಂಚಿ ಮತ್ತು ಗುವಾಹಟಿ ನಗರಗಳಿಂದ ನೋಡಬಹುದಾಗಿದೆ.ಈ ಸಮ ಯದಲ್ಲಿ ಮಲಗುವುದು,ತಿನ್ನುವುದು ಮತ್ತು ಇತರೆ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸ ಲಾಗಿದೆ ದೇವ ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಪೂರ್ಣಿಮೆಯಂದು ಆಚರಿಸಲಾ ಗುತ್ತದೆ.
ಈ ಸಾರಿ ಇದೇ ದಿನ ಗ್ರಹಣ ಸಹ ಬಂದಿದೆ. ಪುರಾಣದಲ್ಲಿ ದೇವರು ಮತ್ತು ದೇವತೆಗಳು ಭೂಮಿಗೆ ಬಂದು ದೀಪಾವಳಿಯನ್ನು ಆಚರಿಸು ತ್ತಾರೆ ಎಂದು ನಂಬಲಾಗಿದೆ.ಹೀಗಾಗಿ ಈ ಸಮಯವನ್ನು ಅತ್ಯಂತ ಪವಿತ್ರ ಎಂದು ಪರಿಗಣಿ ಸಲಾಗುತ್ತದೆ.ಕಾರ್ತಿಕ ಪೂರ್ಣಿಮೆಯಂದು ಲಕ್ಷಗಟ್ಟಲೇ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಿ ದೀಪವನ್ನು ದಾನ ಮಾಡುತ್ತಾರೆ.
ಈ ಬಾರಿ ಚಂದ್ರಗ್ರಹಣ ಹಾಗೂ ದೇವ ದೀಪಾವಳಿ ಒಂದೇ ದಿನ ಇರುವುದರಿಂದ ಕಾರ್ತಿಕ ಪೂರ್ಣಿಮೆಯಂದು ಪವಿತ್ರ ಸ್ನಾನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ
ಚಕ್ರವರ್ತಿ ಜೊತೆ ರವಿ ಗೌಡರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು……