ಹಸಿದು ಬಂದ ವಿದ್ಯಾರ್ಥಿಗಳಿಗೆ ಅನ್ನದಾತನಾಗಿದ್ದ ಪೌಲ್ ಮಾಮಾ ಇನ್ನೂ ನೆನಪು – ಹೃದಯಾಘಾತದಿಂದ ನಿಧನರಾದ ಪ್ರೀತಿಯ ಮಾಮಾನಿಗೆ ಕಂಬನಿ ಮಿಡಿದ ಆಪ್ತರು ಅಭಿಮಾನಿಗಳು…..

Suddi Sante Desk
ಹಸಿದು ಬಂದ ವಿದ್ಯಾರ್ಥಿಗಳಿಗೆ ಅನ್ನದಾತನಾಗಿದ್ದ ಪೌಲ್ ಮಾಮಾ ಇನ್ನೂ ನೆನಪು – ಹೃದಯಾಘಾತದಿಂದ ನಿಧನರಾದ ಪ್ರೀತಿಯ ಮಾಮಾನಿಗೆ ಕಂಬನಿ ಮಿಡಿದ ಆಪ್ತರು ಅಭಿಮಾನಿಗಳು…..

ಧಾರವಾಡ

ಸಾಮಾನ್ಯವಾಗಿ ವ್ಯಾಪಾರ ವಹಿವಾಟಿನಲ್ಲಿ ಎಲ್ಲರೂ ಕೂಡಾ ಅಷ್ಟೇ ಕಟ್ಟು ನಿಟ್ಟಾಗಿ ಇರುತ್ತಾರೆ.ಹಣ ಕೊಟ್ಟರಷ್ಟೇ ವ್ಯಾಪಾರ ಎನ್ನುವ ಇಂದಿನ ದಿನಮಾನಗಳಲ್ಲಿ ಇಲ್ಲೊಬ್ಬರು ತಾವು ಆರಂಭ ಮಾಡಿದ ಹೊಟೇಲ್ ಉದ್ಯಮದಿಂದ ಈವರೆಗೆ ಹಸಿದು ಬಂದ ವಿದ್ಯಾರ್ಥಿಗಳಿಗೆ ಪ್ರೀತಿ ಯಿಂದ ಹೊಟ್ಟೆಯನ್ನು ತುಂಬಿಸುತ್ತಿದ್ದರು.

ಹಣ ಕೊಟ್ಟರಷ್ಟೇ ಸರಿ ಮಾಮಾ ನಾಳೆ ಕೊಡ ತೇನಿ ಇನ್ನೊಮ್ಮೆ ಬಂದಾಗ ಕೊಡತೇನಿ ಎಂದರೆ ಸರಿ ಖಂಡಿತಾ ಎನ್ನುತ್ತಾ ಧಾರವಾಡಗೆ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಹೊಟ್ಟೆ  ಯನ್ನು ತುಂಬಿಸುತ್ತಾ ಮಾಮಾ ಎಂದೇ ಗುರುತಿಸಿ ಕೊಂಡಿದ್ದವರು ಪೌಲ್ ಕಾರ್ಡೋಜ.

ಧಾರವಾಡ ಸೇರಿದಂತೆ ನಗರಕ್ಕೆ ಬಂದವರಿಗೆ ತುಂಬಾ ಅಚ್ಚು ಮೆಚ್ಚಿನ ಪೌಲ್ ಮಾಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ.ಈ ಒಂದು ಸುದ್ದಿ ಕೇಳುತ್ತಿದ್ದಂತೆ ಇತ್ತ ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಬಗ್ಗೆ ಇವರ ಆಪ್ತರು ಅಭಿಮಾನಿಗಳು ಒಂದು ತುತ್ತು ಅನ್ನವನ್ನು ಊಟ ಮಾಡಿದವರು ನಾಲ್ಕಕ್ಷರಗಳಲ್ಲಿ ಇವರ ಬಗ್ಗೆ ಹೇಳಿಕೊಂಡಿದ್ದಾರೆ.

ಪೌಲ್ ‌ಅಂದರೆ ಬಹುಶಃ ಧಾರವಾಡ ವಿದ್ಯಾಗಿ ರಿಯಲ್ಲಿ ಕಳೆದ 30 ರಿಂದ 35 ವರ್ಷಗಳಲ್ಲಿ ಕಾಲೇಜು ಓದಿದ ಎಲ್ಲರಿಗೂ ಚಿರಪರಿಚಿತರು ಅಂದಿನಿಂದ ಈವರೆಗೆ ಅದೆಷ್ಟೋ ವಿದ್ಯಾರ್ಥಿ ಗಳಿಗೆ ಅನ್ನ ನೀಡಿದ್ದಾರೆ ಗೊತ್ತಿಲ್ಲ ಸಾಕಷ್ಟು ಪ್ರಮಾಣದಲ್ಲಿ ಇದೆ ಅಂಕಿ ಸಂಖ್ಯೆ.ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಹಾಗೂ ಇನ್ನು ಕೆಲವರು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಊಟದ ಡಬ್ಬಿಯ ಜೊತೆಯಲ್ಲಿ ಎಕ್ಸಟ್ರಾ ಹಸಿವೆಗಾಗಿ ಇದೇ ಪೌಲ್ ಕ್ಯಾಂಟೀನ್ ಆಸರೆ ಯಾಗಿತ್ತು.

ಪೌಲ್ ಮತ್ತು ಆತನ ಸಹೋದರ ವಿನ್ಸೆಂಟ್ (ವಿನ್ಸಿ) ಇಬ್ಬರು ಸೇರಿ ಆಗ ರಸ್ತೆ ಬದಿಯ ಡಬ್ಬಾ ಅಂಗಡಿ ಮಾದರಿಯ ಕ್ಯಾಂಟೀನ್ ನಡೆಸುತ್ತಿದ್ದರು ಪೌಲ್ ಅಡುಗೆ ಭಟ್ಟರು ಕಡಿಮೆ ದರದಲ್ಲಿ ಸಿಗು ತ್ತಿದ್ದ ಪಲಾವ್ ಮೊಸರು ಬಜ್ಜಿ ಹಾಗೂ ಹಾಫ್ ಚಹಾ.ಊಟಕ್ಕೆ ಸಮಾನವಾಗಿರುತ್ತಿತ್ತು.

ಆ ಪಲಾವ್ ರುಚಿ ಮರೆಯುವಂತಿಲ್ಲಾ.ಇನ್ನೂ ದೋಸೆ,ಇಡ್ಲಿ, ವಡೆ, ಪೂರಿ, ಗೋಲಿ ಬಜ್ಜಿ ಕೂಡ‌ ಅಷ್ಟೇ ರುಚಿಕರ.. ಆಗ ಸಂಜೆಯ ವೇಳೆ ಸಿಗುತ್ತಿದ್ದ ಎಗ್ ಐಟಂಗಳಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಲ್ಲದೇ ಇತರರು ಬರುತ್ತಿದ್ದರು.

ಎಗ್‌ದೋಸಾ, ಅಂಡಾ ಕರಿ‌-ಚಪಾತಿ, ಎಗ್ ಬುರ್ಜಿ ಇತ್ಯಾದಿಗಳು ಕೂಡ ಅಷ್ಟೇ ಈ ಒಂದು ಪೌಲ್ ಹೊಟೇಲ್ ಫೇಮಸ್ ಆಗಿತ್ತು ಹಣ ಇಲ್ಲದಿದ್ದ‌ ಸಂದರ್ಭದಲ್ಲೂ ‘ಮೊದಲು ತಿನ್ನರೋ. ಆಮ್ಯಾಲೆ ರೊಕ್ಕಾ ಇದ್ದಾಗ ಕೊಡ್ರೋ’ ಅಂತಾ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು ಇದೇ ಕಾರಣ ಕ್ಕಾಗಿ ಪ್ರತಿಯೊಬ್ಬರು ಇವರನ್ನು ಪೌಲ್ ಮಾಮಾ ಎನ್ನುತ್ತಿದ್ದರು

ಇದೇ ವಾತ್ಸಲ್ಯ ಪ್ರೀತಿಯಾಗಿದೆ.ಇನ್ನೂ ವಿದ್ಯೆ ಕಲಿಯಲು ಬಂದ ಯಾರೇ ಆಗಿರಲಿ ಧಾರವಾಡ ದಲ್ಲಿ ಸಿಕ್ಕಿಹಾಕಿಕೊಂಡ ಅನೇಕ ಪರ ಊರಿನ‌ ವಿದ್ಯಾರ್ಥಿಗಳಿಗೆ ಪೌಲ್ ಮಾಮಾ ತಮ್ಮ ಮನೆ ಯಲ್ಲಿ ಅಡುಗೆ ಮಾಡಿ ಊಟಕ್ಕೆ ಹಾಕಿಸುತ್ತಿ ದ್ದರು.

ಪೌಲ್ ಕ್ಯಾಂಟೀನ್ ಇನ್ನೊಂದು ವಿಶೇಷ ಅಂದರೆ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬದ ಪೂಜೆಗಳು. ಆ ದಿನಗಳಂದು ಎಲ್ಲರಿಗೂ ಕರೆದು ತಿನ್ನಿಸೋ ದ್ರಲ್ಲೇ ಪೌಲ್ ಸಾಹೇಬ್ರಿಗೆ ಪರಮಾನಂದ ಕ್ಯಾಂಟೀನ್ ನಲ್ ಲಕ್ಷ್ಮೀ ಹಾಗೂ ಮೇರಿ ಅಮ್ಮನ ಪೋಟೋಗೆ ನಿತ್ಯದ ಭಕ್ತಿ ಭಾವದ ಪೂಜೆ ನೋಡುವಂತಹದ್ದು.

ಇತ್ತ ಧಾರವಾಡ ದೊಡ್ಡದಾಗುತ್ತ ಬಂತು ರಸ್ತೆಗಳು ಕೂಡಾ ವಿಸ್ತರಣೆಯಾಗುತ್ತಾ ಅಗಲವಾಗುವಾಗ ಪೌಲ್‌ ಕ್ಯಾಂಟೀನ್ ಕೂಡ ಜಾಗಾ ಖಾಲಿ ಮಾಡ ಬೇಕಾಗಿ ಬಂತು ಮುಂದೆ ಅಲ್ಲೇ ಪಕ್ಕದ ರಸ್ತೆಯಲ್ಲಿ ಪೌಲ್ ಅವರ ಸುಸಜ್ಜಿತವಾದ ಹೋಟೆಲ್ ಕೂಡ ಬಂತು 1994ರಲ್ಲಿ ಕಾಲೇಜು ಕ್ಯಾಂಪಸ್ ನಿಂದ ನಿರ್ಗಮನವಾಗಿದೆ.

ಅದೆಷ್ಟೋ ಸಾವಿರಾರು ವಿದ್ಯಾರ್ಥಿಗಳ ಜೀವನದ‌ ಭಾಗವಾಗಿ ಹೋಗಿದ್ದರೋ ತಿಳಿಯದು.ಇಂತಹ ಸ್ನೇಹಮಯಿ ಜೀವಿ ಅಗಲಿದ್ದು ಇವರ ನಿಧನಕ್ಕೆ ಇವರ ಕೈಯಿಂದ ಒಂದು ತುತ್ತು ಅನ್ನು ತಿಂದವರು ಇಂದು ನೆನಯುತ್ತಾ ಸಂತಾಪವನ್ನು ಸೂಚಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.