78 ಶಾಲೆಗಳಿಂದ ‘ಶೂನ್ಯ’ ಫಲಿತಾಂಶ ದಾಖಲು – ಏನೇಲ್ಲಾ ಪ್ಲಾನ್ ಮಾಡಿದರು ಸುಧಾರಣೆ ಕಾಣದ ಫಲಿತಾಂಶ…..

Suddi Sante Desk
78 ಶಾಲೆಗಳಿಂದ ‘ಶೂನ್ಯ’ ಫಲಿತಾಂಶ ದಾಖಲು – ಏನೇಲ್ಲಾ ಪ್ಲಾನ್ ಮಾಡಿದರು ಸುಧಾರಣೆ ಕಾಣದ ಫಲಿತಾಂಶ…..

ಕಲಬುರಗಿ  –

SSLC ಪರೀಕ್ಷೆ ಯ ಫಲಿತಾಂಶ ದಲ್ಲಿ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ 44 ಶಾಲೆಗಳು ‘ಶೂನ್ಯ’ ಫಲಿತಾಂಶ ದಾಖಲಿಸಿವೆ.ರಾಜ್ಯಾದ್ಯಂತ ಒಟ್ಟು 78 ಶಾಲೆಗಳು ‘ಸೊನ್ನೆ’ ಸುತ್ತಿದ್ದು, ಅವುಗಳಲ್ಲಿ ಕಲಬುರಗಿ ವಿಭಾಗದ್ದೇ 44 ಶಾಲೆಗಳಿವೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ‘ಅಕ್ಷರ ಮಿತ್ರ’ದಡಿ ಅತಿಥಿ ಶಿಕ್ಷಕರ ನೇಮಕ ಹಾಗೂ ಪರೀಕ್ಷೆಗೆ ನೆರವಾಗಲು ಮಕ್ಕಳಿಗೆ ‘ಕಲಿಕಾ ಆಸರೆ’ ಪುಸ್ತಕಗಳ ವಿತರಣೆಯಂತಹ ಉಪಕ್ರಮಗಳನ್ನು ಕೈಗೊಂಡಿದ್ದರೂ ಫಲಿತಾಂಶ ದಲ್ಲಿ ಸುಧಾರಣೆ ಕಂಡಿಲ್ಲ.

ಕಲಬುರಗಿ ಜಿಲ್ಲೆಯಲ್ಲಿ 18 ಶಾಲೆಗಳು ‘ಶೂನ್ಯ’ ಸುತ್ತಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಬೀದರ್‌ನಲ್ಲಿ 9, ಯಾದಗಿರಿಯಲ್ಲಿ 7, ರಾಯಚೂರಿನಲ್ಲಿ 5, ಕೊಪ್ಪಳ ಮತ್ತು ವಿಜಯ ನಗರದಲ್ಲಿ ತಲಾ ಎರಡು ಹಾಗೂ ಬಳ್ಳಾರಿಯಲ್ಲಿ ಒಂದು ಶಾಲೆ ‘ಶೂನ್ಯ’ ಫಲಿತಾಂಶ ಪಡೆದಿವೆ. ಜಿಲ್ಲಾವಾರು ಶ್ರೇಣಿಯಲ್ಲಿ ಕೊನೆಯ ಆರು ಸ್ಥಾನಗಳೂ ‘ಕಲ್ಯಾಣ ಕರ್ನಾಟಕ’ದ ಜಿಲ್ಲೆಗಳ ಪಾಲಾಗಿವೆ.

‘ಶೂನ್ಯ’ ಫಲಿತಾಂಶಕ್ಕೆ ಕಾರಣವನ್ನು ನೋಡೊ ದಾದರೆ ಸಾಮೂಹಿಕ ನಕಲು ತಡೆ ಹಾಗೂ ಪಾರ ದರ್ಶಕ ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳಲ್ಲಿನ ವಿದ್ಯಮಾನಗಳ ಮೇಲೆ ಸಿಸಿಟಿವಿ ಕ್ಯಾಮೆರಾ ಹಾಗೂ ಸಿಸಿಟಿವಿ ವೆಬ್‌ ಕಾಸ್ಟಿಂಗ್‌ ಕಣ್ಗಾವಲು ಇರಿಸಲಾಗಿತ್ತು. ಇದು ಸಾಮೂಹಿಕ ನಕಲು ತಡೆಯುವಲ್ಲಿ ಯಶಸ್ವಿ ಯಾಯಿತು.

ಕಲಬುರಗಿ ಭಾಗದಲ್ಲಿ ಕನಿಷ್ಠ 10 ವರ್ಷ ನಿರಂತರ ವಾಗಿ ಸೇವೆ ಸಲ್ಲಿಸಿದ 2,504 ಅನುಭವಿಶಿಕ್ಷಕರು ಬೇರೆ ಬೇರೆ ವಿಭಾಗಗಳಿಗೆ ವರ್ಗಾವಣೆಯಾಗಿ ಹೋದರು.ಆದರೆ, ಅನ್ಯ ವಿಭಾಗಗಳಿಂದ ಕಲಬುರಗಿ ವಿಭಾಗಕ್ಕೆ ಮೂರಂಕಿಯಷ್ಟು ಶಿಕ್ಷಕರು ಮಾತ್ರ ಬಂದರು. ಹೀಗಾಗಿ, ಮಕ್ಕಳಿಗೆ ನುರಿತ ಶಿಕ್ಷಕರಿಂದ ಪಾಠ ಸಿಗಲಿಲ್ಲ.ಇವುಗಳ ಜೊತೆಗೆ ಮೂಲಸೌಕರ್ಯಗಳ ಕೊರತೆಯೂ ಫಲಿತಾಂ ಶದ ಹಿನ್ನೆಡೆಗೆ ಕಾರಣ’ ಎನ್ನುತ್ತಾರೆ ಶಿಕ್ಷಕರು.

ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಆಕಾಶ್ ಶಂಕರ್, ‘ಫಲಿತಾಂಶ ಕುಸಿತಕ್ಕೆ ವೆಬ್‌ ಕಾಸ್ಟಿಂಗ್ ಮುಖ್ಯ ಕಾರಣವಾಗಿದ್ದು ನಮ್ಮ ಭಾಗದ ಸತ್ಯಾಂಶ ಹೊರಗಡೆ ಬಂದಿದೆ. 10ನೇ ತರಗತಿಗೆ ಬಂದಾಗ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವುದಕ್ಕಿಂತ 8ನೇ ತರಗತಿಯಿಂದಲೇ ಕಲಿಕಾ ಸುಧಾರಣೆಗೆ ಯೋಜನೆ ಹಾಕಿಕೊಳ್ಳುತ್ತೇವೆ.

ಉತ್ತಮ ಫಲಿತಾಂಶ ಬಾರದ ಶಾಲೆಗಳು ಮತ್ತು ವಲಯಗಳನ್ನು ಗುರುತಿಸಿ, ಅಲ್ಲಿ ಬೋಧನಾ ಕ್ರಮಗಳನ್ನು ಚುರುಕುಗೊಳಿಸುತ್ತೇವೆ’ ಎಂದರು.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.