ಬೆಳಗಾವಿ –
ದಾಖಲೆ ಇಲ್ಲದೆ ಸಾಗಿಸ್ತಿದ್ದ 1 ಕೋಟಿ 10 ಲಕ್ಷ ನಗದು ಜಪ್ತಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ನಲ್ಲಿ ನಡೆದಿದೆ.ರಾಮದುರ್ಗ ತಾಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ ಪೊಲೀಸರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಲಗತ್ತಿ ಚೆಕ್ ಪೋಸ್ಟ್ ನಲ್ಲಿ ಈ ಒಂದು ಹಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಕಾರಿನಲ್ಲಿ ಪತ್ತೆಯಾಗಿದೆ 1 ಕೋಟಿ 10 ಲಕ್ಷ ರೂಪಾಯಿ.ನಿಪ್ಪಾಣಿ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ವಿಠ್ಠಲ್ ಢವಳೇಶ್ವರ ಎಂಬು ವರ ಕಾರಿನಲ್ಲಿ ಈ ಒಂದು ಹಣ ಪತ್ತೆಯಾಗಿದೆ. ಬೆಳಗಾವಿ ಯಿಂದ ಬಾಗಲಕೋಟೆಗೆ ಹಣ ಸಾಗಿಸ್ತಿದ್ದ ಮಾಹಿತಿ ಪೊಲೀಸರ ತನಿಖೆ ಯಿಂದ ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ರಾಮದುರ್ಗ ಡಿವೈಎಸ್ಪಿ ಎಂ ಪಾಂಡುರಂಗ ನೇತೃತ್ವದಲ್ಲಿ ಪರಿಶೀಲನೆ ಮಾಡುವಾಗ ಹಣ ಪತ್ತೆಯಾಗಿದೆ.ಅಪಾರ ಪ್ರಮಾಣದ ಹಣ ಸಿಕ್ಕ ಹಿನ್ನೆಲೆ ಆದಾಯ ತೆರಿಗೆ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರ ಮಾಡಿದ್ದಾರೆ ಪೊಲೀಸರು.
ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ತನಿಖೆ ನಡೆಸು ತ್ತಿದ್ದಾರೆ ಅಧಿಕಾರಿಗಳು.ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಸುದ್ದಿ ಸಂತೆ ನ್ಯೂಸ್ ರಾಮದುರ್ಗ…..