ಸಾರ್ವಜನಿಕರ ದೂರಿಗೆ ಸ್ಪಂದಿಸಿದ SP ಮಲ್ಲಿಕಾರ್ಜುನ ಬಾಲದಂಡಿ – ತುರ್ತಾಗಿ ಕ್ರಮಕೈಗೊಳ್ಳಲು ಸೂಚನೆ…..ಸಾರ್ವಜನಿಕರಿಂದ ಮೆಚ್ಚುಗೆ…..

Suddi Sante Desk
ಸಾರ್ವಜನಿಕರ ದೂರಿಗೆ ಸ್ಪಂದಿಸಿದ SP ಮಲ್ಲಿಕಾರ್ಜುನ ಬಾಲದಂಡಿ – ತುರ್ತಾಗಿ ಕ್ರಮಕೈಗೊಳ್ಳಲು ಸೂಚನೆ…..ಸಾರ್ವಜನಿಕರಿಂದ ಮೆಚ್ಚುಗೆ…..

ಮೈಸೂರು

ಸಾರ್ವಜನಿಕರ ದೂರಿಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಪಂದಿದ್ದಾರೆ ಹೌದು ತಾಲ್ಲೂಕಿನ ಕಡಕೊಳ ಗ್ರಾಮದ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಪ್ರಮಾಣದಲ್ಲಿ ಬಂದ ದೂರು ಆಧರಿಸಿ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು ವಾಹನ ದಟ್ಟಣೆ ಕಾರಣದಿಂದ ಪದೇಪದೇ ಅಪಘಾತ ಸಂಭವಿಸಿ ಸಾವು ನೋವು ವರದಿ ಆಗುತ್ತಿದೆ.

ಈ ಒಂದು ಅಪಘಾತ ಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಕಡಕೊಳದಲ್ಲಿ ನಡೆದ ತಾಲೂಕು ಮಟ್ಟದ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಕೋರಿದರು.ಈ ಹೆದ್ದಾರಿಯಲ್ಲಿ ಬೀದಿ ದೀಪಗಳ ಅಸಮರ್ಪಕ ನಿರ್ವಹಣೆಯಿಂದ ಅಪಘಾತ ಸಂಭವಿಸುತ್ತಿವೆ. ಸಿಗ್ನಲ್ ಲೈಟ್ ಅಳವಡಿಕೆ ಇಲ್ಲದಿ ರುವುದೂ ಅಪಘಾತಕ್ಕೆ ಕಾರಣವಾಗಿದೆ’ ಎಂದು ಸ್ಥಳೀಯರು ಪೊಲೀಸ್ ಅಧಿಕಾರಿ ಗಳಿಗೆ ತಿಳಿಸಿದರು.

ಕಡಕೊಳ ಗ್ರಾಮದ ಬಸ್ ನಿಲ್ದಾಣ, ಕೈಗಾರಿಕಾ ಪ್ರದೇಶದ ಪ್ರವೇಶ ದ್ವಾರ ಹಾಗೂ ಟಿವಿಎಸ್ ಕಾರ್ಖಾನೆಯ ತಿರುವು ಸ್ಥಳಕ್ಕೆ ಭೇಟಿ ನೀಡಿ ‍ಪರಿಶೀಲಿಸಿದ ಎಸ್ಪಿ, ಸ್ಥಳೀಯರಿಂದ ಖುದ್ದು ಮಾಹಿತಿ ಪಡೆದರು. ಸಮಸ್ಯೆಯ ಗಂಭೀರತೆ ಮನಗಂಡ ಅವರು, ಬೀದಿದೀಪದ ವ್ಯವಸ್ಥೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸಲಾಗುವುದು. ಸಿಗ್ನಲ್ ಲೈಟ್ ಅಳವಡಿಕೆಗೂ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಡಿವೈಎಸ್ಪಿ ರಾಜಣ್ಣ, ಸಿಪಿಐ ಡಿ.ಬಿ. ಜಯಪ್ರಕಾಶ್, ಎಸ್‌ಐ ಸುನಿಲ್, ಗ್ರಾಮದ ಮುಖಂಡ ಪಟೇಲ್ ಜವರೇಗೌಡ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯ ಕಡಕೊಳ ಕುಮಾರಸ್ವಾಮಿ, ಕೆಐಎಡಿಬಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಕೆ.ಆರ್. ಹರೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಕುಮಾರ್, ರವಿ ಗೌಡ, ನಂಜಪ್ಪ, ಎಲ್ಲನಾಯಕ್, ವಿಶ್ವನಾಥ್ ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಮೈಸೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.