ಧಾರವಾಡ –
HDMC ಲೆಕ್ಕಪತ್ರ ವಿಭಾಗದ ಲೆಕ್ಕ ಅಧೀಕ್ಷಕ ಶೌಕತಲಿ ಸುಂಕದ ಅವರಿಗೆ ಈ ಹಿಂದೆ ಚುನಾವಣಾ ಕಾರ್ಯ ದಲ್ಲಿ ಉತ್ತಮ ಕರ್ತವ್ಯ ಹಿನ್ನೆಲೆಯಲ್ಲಿ ಎರಡನೇಯ ಬಾರಿಗೆ ಚುನಾವಣಾ ಆಯೋಗದಿಂದ ಶ್ಲಾಘನೀಯ ಗೌರವವನ್ನು ಜಿಲ್ಲಾಡಳಿತ ಮಾಡಿ ಗೌರವಿಸಿತ್ತು ದಕ್ಷ ಪ್ರಾಮಾಣಿಕ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ ಕೂಡಾ ಜಿಲ್ಲೆಯ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಂದ ವ್ಯಕ್ತವಾಗಿತ್ತು ಸಧ್ಯ ಈ ಒಂದು ಅಧಿಕಾರಿಯ ಕಾರ್ಯ SIR ನಲ್ಲೂ ಮಿಂಚುತ್ತಿದೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿಯ ಲೆಕ್ಕಪತ್ರ ವಿಭಾಗದಲ್ಲಿ ಲೆಕ್ಕ ಅಧೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿ ರುವ ಶೌಕತಲಿ ಸುಂಕದ ಅವರಿಗೆ ಈ ಹಿಂದೆ ಚುನಾವಣಾ ಆಯೋಗವು ಶ್ಲಾಘನೀಯ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ್ದು ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರ ದಲ್ಲಿ ಮತದಾನ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿಯ ನ್ನುಂಟು ಮಾಡಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಇವರನ್ನು ಚುನಾವಣಾ ಆಯೋಗವು ಮತ್ತು ಜಿಲ್ಲಾಡಳಿತವು ಸುಂಕದ ಅವರನ್ನು ಅಭಿನಂದಿಸಿ ಗೌರವಿಸಿತ್ತು,

ಸಧ್ಯ 73ನೇ ವಿಧಾನ ಸಭಾ ಕ್ಷೇತ್ರದಲ್ಲಿ SIR ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಮತಗಟ್ಟೆಯ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಉತ್ತಮವಾಗಿ ಸಮನ್ವಯ ಸಾಧಿಸಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೋರುತ್ತಿರುವ ಕಾರ್ಯ ಮೆಚ್ಚುಗೆ ಪಾತ್ರವಾಗಿದೆ 
ಹಾಗೂ ಚುನಾವಣಾ ಆಯೋಗಗಳ ಮಾರ್ಗ ಸೂಚಿಗಳನ್ನು ಅಳವಡಿಸಿ ಕೊಂಡು ಮತದಾರರ ಪಟ್ಟಿ ಶುದ್ದಿಕರಣ ಹಾಗೂ ನಿಖರತೆಯ ಬಗ್ಗೆ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯದಲ್ಲಿ ತೋರಿದ ಶ್ರೇಷ್ಠ ಸೇವೆಗಾಗಿ ಮತ್ತೊಮ್ಮೆ ಅಭಿನಂದನೆಯನ್ನು ಸಲ್ಲಿಸಿ ಗೌರವಿಸಿದೆ.

ಸಧ್ಯ ಈ ನಡುವೆ ನಡೆಯುತ್ತಿರುವ SIR ಕಾರ್ಯದಲ್ಲೂ ಕೂಡಾ ಇವರ ಕಾರ್ಯವೈಖರಿ ಸಾಕಷ್ಟು ಪ್ರಮಾಣದಲ್ಲಿ ಬೇರೆ ಯವರಿಗೆ ಮಾದರಿಯಾಗಿದೆ ತಮಗೆ ವಹಿಸಿದ ಕರ್ತವ್ಯ ವನ್ನು ಸುಂಕದ ಅವರು ದಕ್ಷತೆ ಮತ್ತು ಪ್ರಾಮಾಣಿಕ ಕತೆಯಿಂದ ಮಾಡುತ್ತಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ
ತಮ್ಮ ಕರ್ತವ್ಯದೊಂದಿಗೆ ಚುನಾವಣೆಯಲ್ಲಿ ಒಳ್ಳೇಯ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಪರಿಗಣಿಸಿ ಈ ಹಿಂದೆ ಅಭಿನಂ ದನಾ ಪತ್ರವನ್ನು ನೀಡಿ ಗೌರವಿಸಿ ಶುಭಹಾರೈಸಲಾಗಿತ್ತು ಈ ಒಂದು ಗೌರವಕ್ಕೆ ಪಾತ್ರರಾದ ಶೌಕತಲಿ ಸುಂಕದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ,ಮುಖ್ಯಲೆಕ್ಕಾಧಿಕಾರಿ ಶಂಕರನಾಂದ ಬನಶಂಕರಿ, ಉಪ ಆಯುಕ್ತರಾದ ವಿಜಯಕುಮಾರ,ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



