ಬರ್ಲಿನ್ –
ಇಲ್ಲೊಬ್ಬ ಅಜ್ಜಿ ಗೆ ವಯಸ್ಸು 81 ಆದರೆ ಈಗಲೂ 18 ರ ಯಂಗ್ ಆಗಿ ಕಾಣತಾ ಇದ್ದಾರೆ.ಹೌದು ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಇವರು ಇನ್ನೂ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಮಾತ್ರ ಬಿಟ್ಟಿಲ್ಲ. ಇವರು ಜರ್ಮನಿಯ ಫಿಟ್ ನೆಸ್ ಸ್ಟಾರ್ ಆಗಿಬಿಟ್ಟಿ ದ್ದಾರೆ. ವ್ಯಾಯಾಮ ಮಾಡುವ ಹಾಗೂ ಫುಲ್ ಅಪ್ ಮಾಡುವ 100 ಕ್ಕೂ ಹೆಚ್ಚು ವಿಡಿಯೋಗಳನ್ನು ಆಕೆ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಆಕೆಗೆ 1.25 ಲಕ್ಷಕ್ಕೂ ಅಧಿಕ ಫಾಲೋವರ್ ಗಳಿದ್ದಾರೆ.
ನೋವೆಲ್ ಕರೊನಾ ವೈರಸ್ ಕಾರಣಕ್ಕೆ ಜರ್ಮನಿ ಯಲ್ಲಿ ಲಾಕ್ ಡೌನ್ ಆದಾಗ ಎರಿಕಾ ತಮ್ಮ ಪತಿಯ ಜತೆ ಚಾ-ಚಾ ಸ್ಲೈಡ್ ಲೈನ್ ಎಂಬ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದರು.ಈಗ ಇವೆಲ್ಲದರ ಜೊತೆಗೆ ಅಜ್ಜಿ ಇನ್ನೂ ಪ್ರತಿದಿನ ಫಿಟ್ ನೆಸ್ ಮಾಡತಾ ಆರೋಗ್ಯ ಕಾಪಾಡಿಕೊಂಡಿದ್ದಾರೆ.