ಪ್ರೀತಿಸಲು ಒಪ್ಪದ ಅಪ್ರಾಪ್ತ ಯುವತಿಗೆ ಚಾಕು ಇರಿತ – SSLC ಓದುತ್ತಿದ್ದ ಯುವತಿಗೆ ಚಾಕು ಇರಿದ ಯುವಕ…..

Suddi Sante Desk

ತೇರದಾಳ –

ಪ್ರೀತಿಸಲು ಒಪ್ಪದ ಹಿನ್ನೆಲೆಯಲ್ಲಿ ಅಪ್ರಾಪ್ತೆ ಯುವತಿಗೆ ಚಾಕು ಇರಿದ ಘಟನೆ ತೇರದಾಳದಲ್ಲಿ ನಡೆದಿದೆ.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.ಅಪ್ರಾಪ್ತೆ SSLC ಓದುತ್ತಿ ರುವ ವಿದ್ಯಾರ್ಥಿನಿ ಗೆ 23 ವರ್ಷದ ಯುವಕನೇ ಚಾಕು ಇರಿದಿದ್ದಾನೆ.ಕುತ್ತಿಗೆ ಹಾಗೂ ಕಿವಿ ಬಬಳಿ ಚಾಕು ಇರಿದಿದ್ದಾನೆ ಯುವಕ.ಒನ್ ಸೈಡ್ ಲವರ್ ಆಗಿದ್ದ.ಕಳೆದ ಕೆಲ ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದನು.ಅಪ್ರಾಪ್ತೆ ಪ್ರೀತಿಯನ್ನು ನಿರಾಕರಿಸಿ ದ್ದಕ್ಕೆ ರೊಚ್ಚಿಗೆದ್ದು ಚಾಕು ಇರಿದಿದ್ದಾನೆ.

ತೇರದಾಳ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ತೇರದಾಳ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ.ನಿನ್ನೆ ಸಂಜೆ ಶಾಲೆಯಿಂದ ಬರುವ ವೇಳೆ ಚಾಕು ಇರಿದಿದ್ದಾನೆ ಯುವಕ. ಅಪಾಯದಿಂದ ಪಾರಾಗಿರುವ ವಿದ್ಯಾರ್ಥಿನಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಸಧ್ಯ ಯುವಕನನ್ನು ವಶಕ್ಕೆ ಪಡೆದಿರುವ ತೇರದಾಳ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.