ಬೆಂಗಳೂರು –
ವರ್ಗಾವಣೆ ಮಾಡಿ ಇಲ್ಲವೇ ದಯಾಮರಣ ನೀಡಿ ಪೊಲೀಸ್ ಕಾನ್‌ಸ್ಟೇಬಲ್‌ಗಳಿಂದ ಅನಾಮಧೇಯ ಪತ್ರ ವೈರಲ್ ಹೌದು
ಇದೀಗ ರಾಜ್ಯದಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡು ತ್ತಿರುವ ಅನಾಮಧೇಯ ಪತ್ರವೊಂದು ಭಾರಿ ಕೋಲಾಹಲ ಸೃಷ್ಟಿಸಿದೆ ವರ್ಗಾವಣೆ ನೀಡಿ, ಇಲ್ಲವಾದರೆ ಸಿಬ್ಬಂದಿ ಹಾಗೂ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ಕೊಡಿ” ಎಂದು ಗೃಹ ಸಚಿವರಿಗೆ ಬರೆದಿರುವ ಈ ಪತ್ರವು ಪೊಲೀಸ್ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ದಯಾಮರಣಕ್ಕೆ ಕೋರಿ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ
ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2016ರ ಬ್ಯಾಚ್‌ನ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಈ ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ ಕಳೆದ 7 ವರ್ಷಗಳಿಂದ ಅಂತರ್ ಜಿಲ್ಲಾ ವರ್ಗಾವಣೆ ನೀಡದೆ ನಿರ್ಲಕ್ಷಿ ಸಲಾಗಿದೆ. 10 ವರ್ಷಗಳ ಸುದೀರ್ಘ ಸೇವೆ ಪೂರ್ಣ ಗೊಂಡಿ ದ್ದರೂ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ ರಾಜ್ಯ ಗೃಹ ಸಚಿವರು ತಕ್ಷಣವೇ ಗಮನಹರಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಆದೇಶ ನೀಡ ಬೇಕು ಇಲ್ಲವಾದಲ್ಲಿ ಸಂಕಷ್ಟದಲ್ಲಿರುವ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಪತ್ರದ ಮೂಲಕ ಅಳಲು ತೋಡಿಕೊಳ್ಳಲಾಗಿದೆ.
ಹಿಂದೆ 2.5 ವರ್ಷಗಳ ಪ್ರೊಬೇಷನರಿ ಅವಧಿ ಮುಗಿದ ನಂತರ ವರ್ಗಾವಣೆ ಪಡೆಯಲು ಅವಕಾಶವಿತ್ತು. ಆದರೆ ಇಲಾಖೆಯು ಈ ಅವಧಿಯನ್ನು ಮೊದಲು 5 ವರ್ಷಕ್ಕೆ, ನಂತರ 10 ವರ್ಷಕ್ಕೆ ಹೆಚ್ಚಿಸಿದೆ. ಈ ಮಧ್ಯೆ ಕೇವಲ ಪತಿ-ಪತ್ನಿ ಪ್ರಕರಣಗಳಲ್ಲಿ ಮಾತ್ರ ವರ್ಗಾವಣೆ ಮಾಡಲಾಗುತ್ತಿದ್ದು ಉಳಿದ ಸಾಮಾನ್ಯ ವರ್ಗಾವಣೆ ಗಳನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.2023ರಲ್ಲಿ 10 ವರ್ಷ ಸೇವೆ ಮುಗಿಸಿದ ನಂತರ ಆನ್‌ಲೈನ್ ಅರ್ಜಿ ಸಲ್ಲಿಸಲು ಆದೇಶಿಸಲಾಗಿದ್ದು ಬೆಂಗಳೂರು ನಗರ ಒಂದರಿಂದಲೇ ಸುಮಾರು 1,000 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ವೈದ್ಯಕೀಯ ಹಾಗೂ ಕೌಟುಂಬಿಕ ತುರ್ತು ಕಾರಣಗಳಿಂದಾಗಿ 200ರಿಂದ 250 ಸಿಬ್ಬಂದಿಗಳು 3-4 ಬಾರಿ ಬಡ್ತಿಯನ್ನೇ ತ್ಯಜಿಸಿದ್ದಾರೆ.
2020ರಿಂದ 2025ರವರೆಗೆ ಒಟ್ಟು 252 ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಯಾಗಿದ್ದು, ಇದರಲ್ಲಿ ಶೇಕಡಾ 85ರಷ್ಟು ಪತಿ-ಪತ್ನಿ ಹಾಗೂ ಮಾಜಿ ಸೈನಿಕ ಕೋಟಾದ ಸಿಬ್ಬಂದಿಗಳೇ ಸೇರಿದ್ದಾರೆ ಇತ್ತೀಚೆಗೆ ಅಂದರೆ ಜನವರಿ 17, 2026 ರಂದು 12 ಜಿಲ್ಲೆ ಗಳಿಂದ 355 ಸಿವಿಲ್ ಕಾನ್‌ಸ್ಟೇಬಲ್‌ಗಳ ವರ್ಗಾವಣೆಯಾಗಿದೆ.

ಆದರೆ, 2016ರ ಬ್ಯಾಚ್‌ನ ಸಾಮಾನ್ಯ ಸಿಬ್ಬಂದಿ ವರ್ಷಗಳಿಂದ ಕಾಯುತ್ತಿದ್ದರೂ, 2019ರ ಇತರ ಪ್ರಕರಣಗಳಿಗೆ ವರ್ಗಾವಣೆ ನೀಡಲಾಗುತ್ತಿದೆ. ಅಧಿಕಾರಿಗಳ ಬಳಿ ಎಷ್ಟು ಬಾರಿ ಮನವಿ ಮಾಡಿದರೂ ಕಳೆದ 3 ವರ್ಷಗಳಿಂದ ಅಲೆಯುವಂತೆ ಮಾಡು ತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಬೆಂಗಳೂರು ನಗರಕ್ಕೆ ಹೆಚ್ಚಿನ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿ ಕೊಂಡು ಹೊರ ಜಿಲ್ಲೆಗಳಿಗೆ ಹೋಗಲು ಬಯಸುವ ಹಿರಿಯ ಸಿಬ್ಬಂದಿಗೆ ತಕ್ಷಣವೇ ವರ್ಗಾವಣೆ ನೀಡಿ ನ್ಯಾಯ ಒದಗಿಸಬೇಕು ಎಂಬ ಒತ್ತಾಯದೊಂದಿಗೆ
ಈ ಅನಾಮಧೇಯ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಡೆ ಏನಿರಲಿದೆ ಎಂಬುದನ್ನು ಕಾದುನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



