ಶೀಘ್ರದಲ್ಲೇ ಬಿಸಿಯೂಟ ಆರಂಭ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾಹಿತಿ…..

Suddi Sante Desk

ಬೆಂಗಳೂರು –

ಶಾಲೆಗಳಲ್ಲಿ ಶೀಘ್ರದಲ್ಲೇ ಬಿಸಿಯೂಟವನ್ನು ಆರಂಭ ಮಾಡೊದಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗಳೂರಿನಲ್ಲಿ ಮಾತನಾ ಡಿದ ಅವರು ಅಕ್ಟೋಬರ್‌ 1ರ ಬಳಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಿವೆ ಎಂದರು‌.ಹೀಗಾಗಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ನಾವು ಯೋಚಿಸಿದ್ದು ಈ ಸಂಬಂಧ ಶೀಘ್ರದಲ್ಲೇ ನಿರ್ಣಯ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ

ಕೋವಿಡ್ ಸೋಂಕು ವ್ಯಾಪಕವಾದ ಕಾರಣದಿಂದ ಸಾರ್ವಜನಿಕ ನಿರ್ದೇಶನ ಇಲಾಖೆಯು ಮಧ್ಯಾಹ್ನದ ಬಿಸಿಯೂಟವನ್ನು ರದ್ದು ಮಾಡಿತ್ತು ಸದ್ಯದ ಮಟ್ಟಿಗೆ ಬಿಸಿಯೂಟದ ಬದಲಿಗೆ ಮಕ್ಕಳಿಗೆ ರೇಷನ್ ಅನ್ನು ಶಾಲೆಗಳಲ್ಲಿ ಪೂರೈಸಲಾಗುತ್ತಿದೆ.

ಇನ್ನೂ ನಾನು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂ ದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ.ತಾವು ಮನೆ ಯಿಂದ ಊಟ ತರುತ್ತಿರುವುದಾಗಿ ಮಕ್ಕಳು ಹೇಳುತ್ತಿ ದ್ದಾರೆ.ಆದರೆ ನಾವು ಅವರಿಗೆ ಶಾಲೆಯಲ್ಲೇ ಮಧ್ಯಾ ಹ್ನದ ಊಟ ನೀಡಲು ಆರಂಭಿಸಲಿದ್ದೇವೆ ಎಂದು ನಾಗೇಶ್ ಹೇಳಿದರು.ಈ ಮಧ್ಯೆ ಮಧ್ಯಾಹ್ನದ ಬಿಸಿ ಯೂಟವನ್ನು ಮರು ಆರಂಭಿಸಲು ಮಕ್ಕಳು ಪೋಷಕರು,ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಯಿಂದ ಆಗ್ರಹಗಳು ಬರುತ್ತಿವೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.