ಸರ್ಕಾರಿ ಶಾಲೆಗಳಲ್ಲಿ “LKG” ಆರಂಭ – ಬದಲಾಗುತ್ತಿವೆ ರಾಜ್ಯದ ಸರ್ಕಾರಿ ಶಾಲೆಗಳು…..ಪೋಷಕರಿಂದ ಉತ್ತಮ‌ ಸ್ಪಂದನೆ…..

Suddi Sante Desk
ಸರ್ಕಾರಿ ಶಾಲೆಗಳಲ್ಲಿ “LKG” ಆರಂಭ – ಬದಲಾಗುತ್ತಿವೆ ರಾಜ್ಯದ ಸರ್ಕಾರಿ ಶಾಲೆಗಳು…..ಪೋಷಕರಿಂದ ಉತ್ತಮ‌ ಸ್ಪಂದನೆ…..

ರೋಣ

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಉದ್ಘಾಟನೆಯಾಗಿದ್ದು ಈ ಒಂದು ಕೋರ್ಸ್ ಆರಂಭವಾಗುತ್ತಿರುವ ಬೆನ್ನಲ್ಲೇ ಪೋಷಕ ರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಹೌದು ಸರ್ಕಾರಿ ಶಾಲೆ ಗಳಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಶಿಕ್ಷಕಿ ಎಸ್.ಎಂ.ಕಲಹಾಳ ಹೇಳಿದರು.

ಪಟ್ಟಣದ ನೀರಾವರಿ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ನೂತನ ಎಲ್‌ಕೆಜಿ ತರಗತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಗ್ರಾಮೀಣ ಪ್ರದೇಶಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಆರಂಭಿಕ ಹಂತದಲ್ಲಿ ಒದಗಿಸುವ ಉದ್ದೇಶದಿಂದ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ತರಗತಿಯನ್ನು ಆರಂಭಿಸಲಾಗಿದೆ

ಇದಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ಉಚಿತ ಪಠ್ಯ ಸಾಮಗ್ರಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಪೋಷಕರನ್ನು ಸೆಳೆಯುತ್ತಿವೆ. ಅಲ್ಲದೆ ಇದುವರೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿರುವುದರಿಂದ ಅನೇಕ ಪೋಷಕರು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಆರ್.ಬಿ.ದೊಸಲ್, ಪಿ.ಎಸ್.ಉಳ್ಳಾಗಡ್ಡಿ, ವಿ.ವಿ.ಕೋವಳ್ಳಿ, ಪಿ.ಸಿ.ದೇಸಾಯಿ, ಶ್ವೇತಾ ಕೊಟಗಿ, ಯು.ಬಿ ತೊಂಡಿಹಾಳ, ಆರ್.ಎಚ್.ಮಲ್ಲಾಪುರ, ಎಸ್.ಬಿ.ಬೂದಿಹಾಳ, ಮುರುಕಿ ಸೇರಿದಂತೆ ಅನೇಕರಿದ್ದರು.

ಸುದ್ದಿ ಸಂತೆ ನ್ಯೂಸ್ ರೋಣ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.