ದಸರಾ ರಜೆಯ ನಂತರ ಪ್ರಾಥಮಿಕ ಶಾಲೆಗಳು ಆರಂಭ – ಮತ್ತೊಂದು ಹಂತದ ಶಾಲಾ ಆರಂಭಕ್ಕೆ ಮುಂದಾದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು –

ಈಗಾಗಲೇ ರಾಜ್ಯದಲ್ಲಿ ಎರಡು ಹಂತಗಳಲ್ಲಿ‌ ಶಾಲೆ ಗಳನ್ನು ಮಾಡಿರುವ ರಾಜ್ಯ ಸರ್ಕಾರ ಈಗ ಪ್ರಾಥಮಿಕ ಹಂತದ ಶಾಲೆಗಳನ್ನು ದಸರಾ ರಜೆ ಮುಗಿದ ನಂತರ ತೆರೆಯಲು ಮುಂದಾಗಿದೆ. ಹೌದು ಒಂದರಿಂದ ಐದನೇ ತರಗತಿ ಶಾಲೆ ಆರಂಭಿಸಲಾಗು ವುದು ಎಂದು ಶಿಕ್ಷಣ ಸಚಿವರು ಹೇಳಿದ್ದು ಅಕ್ಟೋಬರ್ 20 ಕ್ಕೆ ದಸರಾ ರಜೆ ಮುಕ್ತಾಯವಾಗ ಲಿದೆ.ಅಕ್ಟೋಬರ್ 21 ರ ನಂತರ ಭೌತಿಕ ತರಗತಿ ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಅಕ್ಟೋಬರ್ 10 ರಿಂದ ಮಧ್ಯಂತರ ದಸರಾ ರಜೆ ಆರಂಭವಾಗಲಿದ್ದು ಅಕ್ಟೋಬರ್ 20 ಕ್ಕೆ ಮುಕ್ತಾಯ ವಾಗಲಿದೆ.ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ.ಹೀಗಾಗಿ ಶಿಕ್ಷಣ ತಜ್ಞರು ಶಾಲೆ ಗಳ ಆಡಳಿತ ಮಂಡಳಿ,ಶಿಕ್ಷಕರು,ಪೋಷಕರು, ಆರೋಗ್ಯ,ಶಿಕ್ಷಣ,ವೈದ್ಯಕೀಯ ಇಲಾಖೆ ಅಧಿಕಾರಿ ಗಳೊಂದಿಗೆ ಸಮಾಲೋಚನೆ ನಡೆಸಿ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಲು ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.ಖಾಸಗಿ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿ ಆರಂಭಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.ಇನ್ನೂ ಅಕ್ಟೋಬರ್ 20 ಕ್ಕೆ ಮಧ್ಯಂತರ ರಜೆ ಮುಗಿದ ನಂತರ ಒಂದರಿಂದ ಐದನೇ ತರಗತಿ ಆರಂಭಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.