ಮುಖ್ಯ ಶಿಕ್ಷಕನ ಕಾರ್ಯ ಮೆಚ್ಚುಗೆ ರಜೆಯಲ್ಲೂ ಮಕ್ಕಳಿಗೊಸ್ಕರ ಇವರು ಮಾಡಿದ ಕಾರ್ಯ ಮಾದರಿ

Suddi Sante Desk

ಚಾಮರಾಜನಗರ –

ಭಾನುವಾರ ಶಾಲೆಗೆ ರಜೆ ಇದ್ದರೂ ಕೂಡಾ ಶಾಲೆ ಯನ್ನು ಸ್ವಚ್ಚತಾ ಮಾಡಿ ಸಂಪೂರ್ಣವಾಗಿ ಸ್ಯಾನ ಟೈಸ್ ಮಾಡಿದ್ದಾರೆ ಮುಖ್ಯ ಶಿಕ್ಷಕರೊಬ್ಬರು.

ಹೌದು ಚಾಮರಾಜನಗರ ಜಿಲ್ಲೆಯ ಹೊಂಗಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಹಾದೇಶ್ವರ ಸ್ವಾಮಿ ಈ ಒಂದು ಕಾರ್ಯ ವನ್ನು ಮಾಡಿ ಮೆಚ್ಚುಗೆ ಪಡೆದು ಕೊಂಡಿದ್ದಾರೆ

ಮಹಾದೇಶ್ವರ ಸ್ವಾಮಿ ಶಾಲೆಯ ಮುಖ್ಯ ಶಿಕ್ಷಕ ರಾಗಿದ್ದು ಭಾನುವಾರವೂ ಕರ್ತವ್ಯ ಮರೆಯದೇ ಶಾಲೆಗೊಸ್ಕರ ಅದರಲ್ಲೂ ಮಕ್ಕಳಿಗೊಸ್ಕರವಾಗಿ ಮುಖ್ಯ ಶಿಕ್ಷಕ ಮಾಡಿದ ಕೆಲಸ ಮೆಚ್ಚುವಂತಹದ್ದು

ಕೋವಿಡ್ ಸೋಂಕು ಮಕ್ಕಳಿಗೆ ಹರಡದಿರಲಿ ಎಂದು ಸ್ವತಃ ಶಾಲೆಗೆ ಸ್ಯಾನಟೈಸ್ ಮಾಡಿಸಿದ್ದಾರೆ ಈ ಮುಖ್ಯ ಶಿಕ್ಷಕ.ಶೌಚಾಲಯ,ಕೊಠಡಿ ಸೇರಿದಂತೆ ಎಲ್ಲಾ ಕಡೆ ಸ್ಯಾನಟೈಸ್ ಮಾಡಿಸಿದ್ದಾರೆ

ಸಾಮಾನ್ಯವಾಗಿ ರವಿವಾರ ರಜೆ ಇದೆ ಎಂದು ಕೊಂಡು ಮನೆಯಲ್ಲಿ ಸುಮ್ಮನೆ ಕೈಕಟ್ಡಿ ಕುಳಿತು ಕೊಳ್ಳದೇ ರವಿವಾರವೂ ಕೂಡಾ ಶಾಲೆಗೆ ಬಂದು ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.