ಶಿಕ್ಷಕರಿಗೆ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು – ಆತಂಕದಲ್ಲಿದ್ದ ಶಿಕ್ಷಕರಿಗೆ ಸಿಹಿಸುದ್ದಿ…..

Suddi Sante Desk

ಬೆಂಗಳೂರು –

ಮತ್ತೊಂದು ಆತಂಕದಲ್ಲಿದ್ದ ನಾಡಿನ ಶಿಕ್ಷಕರಿಗೆ ಶಿಕ್ಷಣ ಸಚಿವರು ಸಂತೋಷದ ಸುದ್ದಿ ನೀಡಿದ್ದಾರೆ‌ ಹೌದು ಪಠ್ಯ ಪೂರ್ಣಗೊಳಿಸಲು ಭಾನುವಾರವೂ ಶಾಲೆ ನಡೆಸಲಾಗು ವುದು ಎಂದು ಹೇಳಿದ್ದ ಸಚಿವರು ಈಗ ಒತ್ತಡಕ್ಕೆ ಮಣಿದು ಪಠ್ಯ ಕಡಿತಗೊಳಿಸುವುದಿಲ್ಲ ಮತ್ತು ಭಾನುವಾರ ಶಾಲೆ ಇರುವುದಿಲ್ಲ ಎಂದಿದ್ದಾರೆ ‌

ಪಠ್ಯ ಕಡಿತ ಮಾಡುವುದು ಬೇಡವೆಂದು ಶಿಕ್ಷಕರು ಸಲಹೆ ನೀಡಿದ್ದಾರೆ.ಹೀಗಾಗಿ ಸದ್ಯಕ್ಕೆ ಪಠ್ಯ ಕಡಿತ ಮಾಡದಿರಲು ತೀರ್ಮಾನಿಸಲಾಗಿದೆ.ಪೂರ್ಣ ಪಠ್ಯ ಬೋಧನೆ ಮಾಡಲಾ ಗುವುದು.ಆದರೆ, ಸಮಯವಿರುವುದರಿಂದ ಪಠ್ಯ ಪೂರ್ಣ ಗೊಳಿಸಲು ಭಾನುವಾರವೂ ರಜೆ ರದ್ದುಗೊಳಿಸಿ ತರಗತಿ ನಡೆಸುವ ಆಲೋಚನೆ ಇಲ್ಲ.ಶನಿವಾರ ಅರ್ಧದಿನ ಮತ್ತು ಭಾನುವಾರ ಶಾಲೆಗಳಿಗೆ ರಜೆ ಇರುತ್ತದೆ.ಇರುವ ಅವಧಿ ಯಲ್ಲಿ ಪಠ್ಯ ಪೂರ್ಣಗೊಳಿವುದಾಗಿ ಶಿಕ್ಷಕರು ಹೇಳಿದ್ದಾರೆ.

ಮುಂದಿನ ವರ್ಷಗಳಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಪಠ್ಯ ಕಡಿತಗೊಳಿಸದೇ ಪೂರ್ಣಪಠ್ಯ ಬೋಧನೆ ಮಾಡಲಾಗುವುದು ಎಂದರು ಇದರೊಂದಿಗೆ ಆತಂಕದಲ್ಲಿದ್ದ ನಾಡಿನ ಶಿಕ್ಷಕರಿಗೆ ಕೊನೆಗೂ ಶಿಕ್ಷಣ ಸಚಿವರು ತುಸು ನೆಮ್ಮದಿಯ ಸುದ್ದಿ ಯನ್ನು ನೀಡಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.