ಹುಬ್ಬಳ್ಳಿ ,-
ಮನೆಯ ಟ್ಯಾಕ್ಸ್ ಪಾವತಿಸುವ ವಿಚಾರದಲ್ಲಿ ಸಾರ್ವಜನಿಕರೊಬ್ಬರಿಂದ 75 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೌದು ಹುಬ್ಬಳ್ಳಿಯ ವಲಯ ಕಚೇರಿ 11 ರಲ್ಲಿನ ಸಿಬ್ಬಂದಿ ಶಂಕರ ಘೋಡಕೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಜರತಲಿ ಮುಲ್ಲಾ ಎಂಬುವರಿಂದ ಮನೆಯ ಟ್ಯಾಕ್ಸ್ ಪಾವತಿಸುವ ವಿಚಾರ ಕುರಿತಂತೆ ಇವರು 75 ಸಾವಿರ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದರು. ಮಾತುಕತೆಯಾಗಿ ಇವತ್ತು ಹಣವನ್ನು ಕೊಡಲು ಮುಂದಾಗಿದ್ದರು. ಇವೆಲ್ಲದರ ನಡುವೆ ಇತ್ತ ಎಸಿಬಿ ಗೆ ದೂರನ್ನು ನೀಡಿದ್ದರು. ದೂರಿನ ಹಿನ್ನಲೆ ಯಲ್ಲಿ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಹಣವನ್ನು ತಗೆದುಕೊಳ್ಳು ವಾಗ ಬಲೆಗೆ ಹಾಕಿದ್ದಾರೆ. ಕಚೇರಿಯಲ್ಲಿ ಹಣವನ್ನು ತಗೆದುಕೊಳ್ಳುವಾಗ ರೇಡ್ ಹ್ಯಾಂಡ್ ಆಗಿ ಟ್ಯ್ರಾಪ್ ಆಗಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಬಿ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.