ಸರ್ಕಾರಿ ನೌಕರರ ಕ್ರೀಡಾಕೂಟ ಸಿದ್ದತೆ ಪರಿಶೀಲನೆ ಮಾಡಿದ ಷಡಕ್ಷಾರಿ ಮತ್ತು ಟೀಮ್ – ದಾವಣಗೆರೆ ಯತ್ತ ಸರ್ಕಾರಿ ನೌಕರರ ಕ್ರೀಡಾಪಟುಗಳು…..

Suddi Sante Desk

ದಾವಣಗೆರೆ –

ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಬೆಣ್ಣೆ ನಗರಿ ದಾವಣಗೆರೆ ಮಧುವಣಗಿತ್ತಿಯಂತೆ ಸಿದ್ದಗೊಂಡಿದೆ ಹೌದು ಅಕ್ಟೋಬರ್ 22 ರಿಂದ 23, 24 ರಂದು ನಗರದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದ್ದು ಈ ಒಂದು ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಿದ್ಧತೆಗಳನ್ನು ಪರಿಶೀಲನೆ ಮಾಡಿದರು

ಹೌದು ಮೂರು ದಿನಗಳ ಕಾಲ ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರೀಡಾಕೂಟ ನಡೆಯಲಿದ್ದು ಈ ಒಂದು ಕುರಿತು ಸಿದ್ದತೆ ಗಳನ್ನು ಷಡಕ್ಷಾರಿ ಅವರು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದು ಕೊಂಡು ಎಲ್ಲಾ ವ್ಯವಸ್ಥೆ ಗಳನ್ನು ಸರಿಯಾಗಿ ಮಾಡುವಂತೆ ಸೂಚನೆ ನೀಡಿದರು

ಮೂರು ದಿನಗಳ ರಾಜ್ಯ ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ತಯಾರಿಯನ್ನು ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರು ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷರಾದ ಪಾಲಾಕ್ಷಿ ಮತ್ತು ತುಮಕೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ನರಸಿಂಹರಾಜುರವರು ಹಾಗೂ ಆರ್. ಮೋಹನ್ ಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ವೀಕ್ಷಿಸಿದರು ಎಲ್ಲಾ ವ್ಯವಸ್ಥೆಯ ಕುರಿತು ಸಮಗ್ರವಾಗಿ ಮಾಹಿತಿ ಯನ್ನು ಪಡೆದುಕೊಂಡರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.