ಹುಬ್ಬಳ್ಳಿ –
ವಾಣಿಜ್ಯನಗರಿ ಹುಬ್ಬಳ್ಳಿಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣ ಮತ್ತು ಜನತಾ ಬಜಾರಿಗೆ ವಿವಿಧ ಸ್ಥಳಗಳಿಂದ ಬರುವ ಜನರ ಮೊಬೈಲ್ ಎಗಿರಿಸುತ್ತಿದ್ದ ಇಬ್ಬರು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು..ಬಂಧಿತ ಆರೋಪಿಗಳನ್ನು ಹುಬ್ಬಳ್ಳಿ ವೀರಾಪುರ ಓಣಿಯ ಸುರೇಶ ಭಜಂತ್ರಿ ಹಾಗೂ ಗಬ್ಬೂರ ಬಸವೇಶ್ವರ ನಗರದ ಬಸವರಾಜ ಹೆಬ್ಬಳ್ಳಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಳ್ಳತನ ಮಾಡಿದ ವಿವಿಧ ಕಂಪನಿಯ ಸುಮಾರು 11 ಮೊಬೈಲ್ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಬೈಕ್ ವಶಕ್ಕೆ ಪಡೆಯಲಾಗಿದೆ. ಸುಮಾರು ಒಂದು ಲಕ್ಷ ಏಳು ಸಾವಿರದಾ 500 ರೂಪಾಯಿ ಮೌಲ್ಯದ ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಬೈಕ್ ನ ಮೌಲ್ಯ 50 ಸಾವಿರವೆಂದು ಅಂದಾಜಿಸಲಾಗಿದೆ.
ಇನ್ನೂ ಹುಬ್ಬಳ್ಳಿಯ ಉಪನಗರ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ರವಿಚಂದ್ರನ್ ಬಡಫಕ್ಕೀರಪ್ಪನವರ ನೇತೃತ್ವದಲ್ಲಿ ಪಿಎಸ್ಐ ಸೀತಾರಾಮ ಲಮಾಣಿ, ಆರ್.ಎಂ.ಕಾಲವಾಡ ಹಾಗೂ ಸಿಬ್ಬಂದಿಗಳಾದ ಕೆ.ಎನ್.ನೆಲಗುಡ್ಡ, ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹದ್ದೇರಿ, ರವಿ ಹೊಸಮನಿ, ರೇಣು ಸಿಕ್ಕಲಗೇರ, ಮಾಲತೇಶ ಮರಿನಾಯ್ಕರ ಹಾಗೂ ಕುಮಾರ ಬಾಗವಾಡ, ಮಂಜು ಕಮತದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.